ಎರಡನೇ ಟೆಸ್ಟ್‌-ಶತಕ ಸಿಡಿಸಿದ ಮಯಾಂಕ್

ಸತತ ಎರಡನೇ ಶತಕ ಸಿಡಿಸಿದ ಮಯಾಂಕ್ ಅಗರ್ವಾಲ್
ಪುಣೆ, ಅ 10 – ರನ್ ಹೊಳೆ ಮುಂದುವರಿಸಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಸರಣಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ್ದಾರೆ.

ಇಲ್ಲನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ಪ್ರಥಮ ಇನಿಂಗ್ಸ್‌‌ನ ಮೊದಲನೇ ದಿನ ಮಯಾಂಕ್ ಅಗರ್ವಾಲ್ ಅವರು ಸೊಗಸಾದ ಶತಕ ಸಿಡಿಸಿ ಸಂಭ್ರಮಿಸಿದರು.

ಆರಂಭಿಕನಾಗಿ ಕಣಕ್ಕೆೆ ಇಳಿದ ಮಯಾಂಕ್ ಅಗರ್ವಾಲ್ ಅವರು ದಕ್ಷಿಣ ಆಫ್ರಿಕಾ ಬೌಲರ್‌ಗಳ ಮೆಟ್ಟಿ ನಿಂತರು. 195 ಎಸೆತಗಳನ್ನು ಎದುರಿಸಿದ ಅವರು ಎರಡು ಸಿಕ್ಸರ್ ಹಾಗೂ 16 ಬೌಂಡರಿಯೊಂದಿಗೆ 108 ರನ್ ಗಳಿಸಿದರು. ಆ ಮೂಲಕ ಟೆಸ್ಟ್‌ ವೃತ್ತಿ ಜೀವನದಲ್ಲಿ ಎರಡನೇ ಶತಕ ಗಳಿಸಿದರು. ನಂತರ ಅವರನ್ನು ಕಗಿಸೋ ರಬಾಡ ವಿಕೆಟ್ ಕಿತ್ತಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕ ಸಿಡಿಸಿದ ಭಾರತದ ಎರಡನೇ ಆಆರಂಭಿಕ ಬ್ಯಾಟ್ಸ್‌‌ಮನ್ ಎಂಬ ಕೀರ್ತಿಗೆ ಮಯಾಂಕ್ ಅಗರ್ವಾಲ್ ಭಾಜನರಾದರು. ಇದಕ್ಕೂ ಮುನ್ನ ವಿರೇಂದ್ರ ಸೆಹ್ವಾಗ್ ಅವರು 2009/10ರ ಆವೃತ್ತಿಯಲ್ಲಿ ಸತತ ಎರಡು ಶತಕ ಗಳಿಸಿದ್ದರು.

ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌‌ನಲ್ಲಿ 215 ರನ್ ಚಿಚ್ಚಿದ್ದರು. ಇದು ಅವರ ವೃತ್ತಿ ಜೀವನದ ಮೊದಲ ದ್ವಿಶತಕವಾಗಿತ್ತು. ಭಾರತ ತಂಡ ಟೀ ವಿರಾಮದ ವೇಳೆಗೆ 72 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 219 ರನ್ ಗಳಿಸಿತ್ತು. ಕ್ರೀಸ್‌ನಲ್ಲಿ ಅಜಿಂಕ್ಯಾ ರಹಾನೆ (5) ಹಾಗೂ ವಿರಾಟ್ ಕೊಹ್ಲಿ (24) ಇದ್ದಾರೆ.

Leave a Comment