ಎರಡನೇಸಲದ ಪ್ರೀತಿ

ಅಂತೂ ಇಂತೂ “ಎರಡನೇಸಲ” ಚಿತ್ರೀಕರಣ ಪೂರ್ಣಗೊಳಿಸಿದೆ. “ಡೈರೆಕ್ಟರ್ ಸ್ಪೆಷಲ್ ಚಿತ್ರದ ಬಳಿಕ ಗುರುಪ್ರಸಾದ್ ಹಾಗು ಧನಂಜಯ ಜೋಡಿ ಒಟ್ಟಿಗೆ ಕೆಲಸ ಮಾಡಿರುವ ಚಿತ್ರ ಇದು. ಎರಡು ಮೂರು ವರ್ಷಗಳಿಂದ ಹಿಂದೆ ಆರಂಭವಾಗಿದ್ದ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಜ್ಜಾಗಿದೆ.

’ಮೊದಲಸಲ’ ಚಿತ್ರಕ್ಕೆ ಬಂಡವಾಳ ಹಾಕಿದ್ದವರಲ್ಲಿ ಒಬ್ಬರಾಗಿದ್ದ ಯೋಗೀಶ್ ನಾರಾಯಣ್ ಎರಡನೇಸಲಕ್ಕೆ ಬಂಡವಾಳ ಹಾಕಿದ್ದಾರೆ. ಸಂಗೀತ ಭಟ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೆಲ ದೃಶ್ಯಗಳಲ್ಲಿ ಹಸಿ ಬಿಸಿಯಾಗಿ ಮೈ ಚಳಿಬಿಟ್ಟು ನಟಿಸಿದ್ದಾರೆ. ಈ ಚಿತ್ರದ ಮೂಲಕ ಹಿರಿಯ ಗಾಯಕಿ ಬಿ.ಆರ್ ಛಾಯಾ ಧ್ವನಿಗೂಡಿಸಿದ್ದಾರೆ.

ನಾಯಕಿ ತೆರೆಯ ಮೇಲೆ ಬಂದಾಗಲೆಲ್ಲಾ ಅವರ ಹಾಡು ಮೂಡಿಬರಲಿದೆಯಂತೆ ಹಾಗಾಗಿ ಚಿತ್ರದಲ್ಲಿ ನಾನು ಎರಡನೇ ನಾಯಕಿ ಎಂದು ಹೇಳಿಕೊಂಡರು ಗಾಯಕಿ ಛಾಯಾ. ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತು.ನಿರ್ದೇಶಕ ಗುರುಪ್ರಸಾದ್ ಗೈರು ಹಾಜರಾಗಿದ್ದರು. ಚಿತ್ರತಂಡ ಚಿತ್ರದ ಬಗ್ಗೆ ವಿವರ ನೀಡಿದ್ದಕ್ಕಿಂತ ಹೆಚ್ಚಾಗಿ ನಿರೂಪಣೆ ಮಾಡಿದ ಆರ್.ಜೆ ನೇತ್ರಾ ಸಾಕಷ್ಟು ಸಮಯ ತೆಗೆದುಕೊಂಡು ಬೋರ್ ಹೊಡೆಸಿದರು.

ನಟ ಧನಂಜಯ,ಮಾತಿಗಿಂತ ಸಿನಿಮಾ ಮಾತನಾಡಬೇಕು ಎನ್ನುವ ತತ್ವ ನಂಬಿಕೊಂಡವನು ನಾನು. ಅದು ಎರಡನೆಸಲದ ಮೂಲಕ ಆಗುತ್ತಿದೆ.ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರವನ್ನು ಎಲ್ಲಾ ತಾಯಂದಿರಿಗೆ ಅರ್ಪಿಸಲಾಗಿದೆ. ಒಳ್ಳೆಯ ಚಿತ್ರವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.

ನಿರ್ಮಾಪಕ ಯೋಗೇಶ್ ನಾರಾಯಣ್,ಚಿತ್ರ ತಡವಾಗಿದೆ.ಅದಕ್ಕೆ ಅನೇಕ ಕಾರಣಗಳಿವೆ. ಕುಂಬಳಕಾಯಿ ಹೊಡೆಯುವುದರಿಂದ ಹಿಡಿದು ಎಲ್ಲವನ್ನು ಎರಡೆರಡು ಸಲ ಮಾಡಿದ್ದೇವೆ. ಚಿತ್ರಕ್ಕೆ ಎರಡನೇಸಲ ಎಂದು ಹೆಸರಿಟ್ಟಿದ್ದುದು ಸಾರ್ಥಕವಾಯಿತು ಎಂದು ಹೇಳಿಕೊಂಡರು. ಅವರ ಮಾತಿನಲ್ಲಿ ಚಿತ್ರ ವಿಳಂಬವಾದ ಬಗ್ಗೆ ಬೇಸರ ಎದ್ದು ಕಾಣುತ್ತಿತ್ತು.

ನಟಿ ಸಂಗೀತಾ ಭಟ್, ಚಿತ್ರಕ್ಕೆ ನಿರ್ದೇಶಕ ಗುರುಪ್ರಸಾದ್ ಅವಕಾಶ ಮಾಡಿಕೊಟ್ಟರು. ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಚಿತ್ರದಲ್ಲಿನ ಎಲ್ಲಾ ಹಾಡುಗಳನ್ನು ನಾನೇ ಹಾಡಿದ್ದೇನೆ. ಹಾಡಿನಲ್ಲಿ ಛಾಯಾ ಧ್ವನಿಯಾಗಿದ್ದಾರೆ ಎಂದು ವಿವರ ನೀಡಿದರು. ಚಿತ್ರಕ್ಕೆ ಶುಭಕೋರಲು ನಿರ್ದೇಶಕರಾದ ವಿಜಯೇಂದ್ರ ಪ್ರಸಾದ್, ಅರಸು ಅಂತಾರೆ ಸೇರಿದಂತೆ ಹಲವು ಮಂದಿ ಆಗಮಿಸಿದ್ದರು.

Leave a Comment