ಎಪಿಎಂಸಿ ತನಿಖಾ ಠಾಣೆ ರದ್ದಿಗೆ ಒತ್ತಾಯ

ರಾಯಚೂರು.ಜ.11- ಏಳು ಮೈಲ್ ಕ್ರಾಸ್ ಬಳಿಯಿರುವ ಎಪಿಎಂಸಿ ತನಿಖಾ ಠಾಣೆಯಲ್ಲಿ ಸಿಬ್ಬಂದಿ ವರ್ಗ ರೈತರಿಂದ ಸರಬರಾಜು ಮಾಡುವ ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದು, ತನಿಖಾ ಕಛೇರಿಯನ್ನು ರದ್ದು ಪಡಿಸುವಂತೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಎಪಿಎಂಸಿಗೆ ಧಾನ್ಯ ಮತ್ತು ಕೃಷಿ ಉತ್ಪನ್ನ ಸಾಮಾಗ್ರಿ ತುಂಬಿಕೊಂಡು ಬರುವ ವಾಹನಗಳನ್ನು ತಡೆದು ಹಣ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಿದರೇ, ಗೋಧಾಮಿನಿಂದ ಕಳುವಿನಿಂದ ಈ ಕೃಷಿ ಉತ್ಪನ್ನ ತರಲಾಗುತ್ತಿದೆಂದು ಸುಳ್ಳು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ತನಿಖಾ ಠಾಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಮನವಿ ನೀಡಿದ ಅವರು, ರೈತರಿಗೆ ತೊಂದರೆ ಕೊಡುವ ಉದ್ದೇಶದ ತನಿಖಾ ಠಾಣೆಗಳನ್ನು ರದ್ದುಪಡಿಸುವಂತೆ ಕಾರ್ಯದರ್ಶಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಕೆ.ಈರಣ್ಣ, ಜಿಲ್ಲಾಧ್ಯಕ್ಷ ಎಂ.ಡಿ.ಹನೀಫ್ ಶೇಖ್ ಉಪಸ್ಥಿತರಿದ್ದರು.

Leave a Comment