ಎನ್.ಸಿ.ಸಿ-ವಿ.ಎಂ.ಸಿ.ಆರ್. ವಸ್ತ್ರದ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಹುನಗುಂದ : ಬಾಗಲಕೋಟೆಯಲ್ಲಿ ಜರುಗಿದ ಎನ್‍ಸಿಸಿ ವಿದ್ಯಾರ್ಥಿಗಳ ಸಿಎಟಿಸಿ (ಕಂಬೈನ್ಡ್ ಎನ್ಯುವಲ್ ಟ್ರೇನಿಂಗ್ ಕ್ಯಾಂಪ್) ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಇಲ್ಲಿನ ವಿಎಂಎಸ್‍ಆರ್ ವಸ್ತ್ರದ ಮಹಾವಿದ್ಯಾಲಯದ ಎನ್‍ಸಿಸಿ ಕೆಡೆಟ್‍ಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಶಿಬಿರದಲ್ಲಿ ಜಿಲ್ಲೆಯ 650 ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.
ಕ್ವಿಜ್‍ನಲ್ಲಿ ಹಾಗೂ ಕ್ರಾಸ್‍ಕಂಟ್ರಿಯ ಗುಂಪು ವಿಭಾಗದಲ್ಲಿ ಮಂಜುನಾಥ ಅಚನೂರ ಪ್ರಥಮ,  ಡ್ರಿಲ್ ಆಂಡ್ ಮಾರ್ಚಿಂಗ್  ವಿಭಾಗದಲ್ಲಿ ಅಮರೇಶ ದಿವಟಗಿ ಹಾಗೂ ರಿಯಾಜ್ ಚಿತ್ತರಗಿ ಪ್ರಥಮ, ಬೆಸ್ಟ್ ಕೆಡೆಟ್ ಆಗಿ ಬಸಯ್ಯ ಹಿರೇಮಠ ಹಾಗೂ ರಿಯಾಜ್ ಚಿತ್ತರಗಿ ಪ್ರಶಸ್ತಿ ಪಡೆದಿದ್ದಾರೆ. ಮಹಾವಿದ್ಯಾಲಯದ ಐವರು ಕೆಡೆಟ್‍ಗಳು ಇಂಟರ್ ಬಟಾಲಿಯನ್ ಶೂಟಿಂಗ್ ಕಾಂಪಿಟೆಶನ್‍ಗೆ ಆಯ್ಕೆಯಾಗಿದ್ದಾರೆ ಎಂದು ಲೆಪ್ಟಿನೆಂಟ್ ಎಸ್.ಬಿ. ಚಳಗೇರಿ ತಿಳಿಸಿದ್ದಾರೆ.
ಉತ್ತಮ ಸಾಧನೆ  ಮಾಡಿದ ಕೆಡೆಟ್‍ಗಳಿಗೆ ವಿ.ಮ.ವಿ. ಸಂಘದ ಕಾರ್ಯಾಧ್ಯಕ್ಷ  ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಬಿ.ಎಂ. ಹೊಕ್ರಾಣಿ, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ  ಬಿ.ಎಂ. ಚಲವಾದಿ, ಎಂ.ಆರ್. ಕಾಂಬ್ಳೆ ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.

Leave a Comment