ಎನ್. ಕೆ. ಠಕ್ಕರ್ ಆಂಗ್ಲ ಮಾಧ್ಯಮ ಶಾಲೆಗೆ ಸೆಂಟೆನರಿ ಕಪ್

ಧಾರವಾಡ ಡಿ.2-: ಅತಿಥೇಯ ಕೆ.ಇ.ಬೋರ್ಡ್ಸ ತಂಡದ ಎದುರು 6 ವಿಕೆಟ್‍ಗಳ ಜಯ ದಾಖಲಿಸಿದ ಹುಬ್ಬಳ್ಳಿಂಯ ಎನ್. ಕೆ. ಠಕ್ಕರ್ ಆಂಗ್ಲ ಮಾಧ್ಯಮ ಶಾಲೆ `ಕೆ. ಇ. ಬೋರ್ಡ ಸೆಂಟೆನರಿ ಕಪ್’ 14 ವರ್ಷಕ್ಕಿಂತ ಕಿರಿಯರ ಅಂತರ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜಯಿಯಾಗಿ ಹೊರಹೊಮ್ಮಿದೆ.
ಮಾಳಮಡ್ಡಿಯ ಕೆ.ಇ.ಬೋರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಗೆಲ್ಲಲು ಬೇಕಿದ್ದ 148 ಓಟಗಳನ್ನು ಠಕ್ಕರ್ ಶಾಲೆ 20.3 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಂಪಾದಿಸಿತು. ಹರ್ಷವರ್ಧನ (50 ಎಸೆತಗಳಲ್ಲಿ 10 ಬೌಂಡರಿಗಳಿದ್ದ ಅಜೇಯ 60) ಹಾಗೂ ಅನುಮೋಲ್ ಡಿ.ಪಿ. (20 ಎಸೆತಗಳಲ್ಲಿ 1 ಸಿಕ್ಸರ್ 3 ಬೌಂಡರಿಗಳಿದ್ದ 32) ಠಕ್ಕರ್ ಶಾಲೆಯ ಜಯದಲ್ಲಿ ಪ್ರಮುಖ ಪಾತ್ರವಹಿಸಿದರೆ ಕೆ. ಇ. ಬೋಡ್ರ್ಸ್ ಪರ ನಾಯಕ ಅಥರ್ವ ವೈದ್ಯ (29 ಕ್ಕೆ 2) ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಕೆ.ಇ.ಬೋರ್ಡ್ಸ ಎಸ್. ಅಖಿಲ್ (48 ಎಸೆತಗಳಲ್ಲಿ 10 ಬೌಂಡರಿಗಳಿದ್ದ 70) ಹಾಗೂ ಸಾಯಿಕಿರಣ ಕದಮ್ (46 ಎಸೆತಗಳಲ್ಲಿ 1 ಸಿಕ್ಸ್‍ರ್ 3 ಬೌಂಡರಿಗಳಿದ್ದ 36) ದಿಟ್ಟ ಹೋರಾಟದ ನಡುವೆಯೂ ಕುನಾಲ ಶಾನಭಾಗ (7 ಕ್ಕೆ 2), ವಿನಾಯಕ ಪಾಂಡ್ಯ (15 ಕ್ಕೆ 2) ಹಾಗೂ ಸಾಯಿನಾಥ (35 ಕ್ಕೆ 2) ಎದುರು ಕುಸಿದು 25 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 147ರ ಮೊತ್ತ ಪೇರಿಸಿತು.
ಠಕ್ಕರ್ ಶಾಲೆಯ ಹರ್ಷವರ್ಧನ ಪಂದ್ಯಪುರುಷ ಪ್ರಶಸ್ತಿ ಗೆದ್ದರೆ, ಕುನಾಲ ಶಾನಭಾಗ ಅತ್ಯುತ್ತಮ ಬೌಲರ್ ಹಾಗೂ ಕೆ. ಇ. ಬೋರ್ಡ್ಸನ ಎಸ್. ಅಖಿಲ್ ಅತ್ಯುತ್ತಮ ಬ್ಯಾಟ್ಸ್‍ಮನ್ ಪ್ರಶಸ್ತಿ ಪಡೆದರು. ಠಕ್ಕರ್ ಶಾಲೆಯ ಅನಮೋಲ ಡಿ.ಪಿ. ಪಂದ್ಯಾವಳಿಯ ಪುರುಷೋತ್ತಮ ಗೌರವ ಸಂಪಾದಿಸಿದರು.
ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ಕಾರ್ಯಾಧ್ಯಕ್ಷ ಅರುಣ ನಾಡಗೀರ, ಕೆ. ಇ. ಬೋರ್ಡಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ವಸಂತ ಮುರ್ಡೇಶ್ವರ, ಉಪ-ಪ್ರಾಂಶುಪಾಲ ಗೋವಿಂದರೆಡ್ಡಿ, ಮಾಜಿ ರಣಜಿ ಆಟಗಾರ ಸೋಮಶೇಖರ ಶಿರಗುಪ್ಪಿ, ವಿ.ಎಂ.ಸಿ.ಎ. ಜಂಟಿ ಕಾರ್ಯದರ್ಶಿ ಶಿವಪ್ರಕಾಶ ಶಿರಕೋಳ, ಹಿರಿಯ ಆಟಗಾರ ರಾಜು ಕರೂರ ಪ್ರಶಸ್ತಿ ವಿತರಿಸಿದರು. ಕೀರ್ತಿ ಮರೇದ ಕಾರ್ಯಕ್ರಮ ರೂಪಿಸಿದರು.

Leave a Comment