ಎನ್‍ಪಿಎಸ್ ಮುಂದುವರಿಕೆಗೆ ವಿರೋಧ

 

ಕಲಬುರಗಿ ಫೆ 11:ನೂತನ ಪಿಂಚಣಿ ಯೋಜನೆ ( ಎನ್‍ಪಿಎಸ್ ) ರದ್ದುಗೊಳಿಸುವ ಪ್ರಸ್ತಾಪವನ್ನು ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್‍ನಲ್ಲಿ ಮಂಡಿಸದೇ ಇರುವದಕ್ಕೆ ಕರ್ನಾಟಕ ರಾಜ್ಯ ಎನ್‍ಪಿ ಎಸ್ ನೌಕರರ ಸಂಘದ ಕಲಬುರಗಿ (ದಕ್ಷಿಣ ವಲಯ) ಘಟಕ ವಿರೋಧ ವ್ಯಕ್ತಪಡಿಸಿದೆ. ಸಂಘವು ಬಜೆಟ್ ಅನ್ನು ತೀವ್ರವಾಗಿ ಖಂಡಿಸುತ್ತ ಹೊಸ ಪಿಂಚಣಿ ಯೋಜನೆ ವಿರುದ್ದ ನಿರಂತರ ಹೋರಾ ನಡೆಸುವದಾಗಿ ಸಂಘದ ಕಲಬುರಗಿ (ದಕ್ಷಿಣ ವಲಯ) ಘಟಕ ಅಧ್ಯಕ್ಷ ನವನಾಥ ಶಿಂಧೆ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎನ್ ಪಿ ಎಸ್ ರದ್ದತಿಗಾಗಿ ಸಂಘಟನೆಯು ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತ ಬಂದಿದೆ.ಬೆಂಗಳೂರಿನ ಫ್ರೀಡಂಪಾರ್ಕಿನಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚು ನೌಕರರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ರಕ್ತಕೊಟ್ಟೆವು ಪಿಂಚಣಿ ಬಿಡೆವು ಹೋರಾಟದಲ್ಲಿ 20,450 ಯುನಿಟ್ ರಕ್ತ ನೀಡುವ ಮೂಲಕ ಯೋಜನೆಯ ರದ್ದಿಗೆ ಒತ್ತಡ ತರಲಾಗಿತ್ತು.ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುಮಾರು ಒಂದೂವರೆ ಲಕ್ಷ ಎನ್ ಪಿ ಎಸ್ ನೌಕರರು ಹೋರಾಟ ನಡೆಸಿದಾಗÀ ಸಂಘದ ರಾಜ್ಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎರಡು ತಿಂಗಳೊಳಗಾಗಿ ಯೋಜನೆ ರದ್ದುಗೊಳಿಸುವದಾಗಿ ಆಶ್ವಾಸನೆ ನೀಡಿದ್ದರು. ಆದರೆ ಬಜೆಟ್‍ನಲ್ಲಿ ಈ ಕುರಿತು ಚಕಾರ ಎತ್ತದಿರುವದು ನಿರಾಸೆ ಮೂಡಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಗದೀಶ ಮುಲಗೆ,ನಾಗನಾಥ ಭೋಸಲೆ, ಲಲಿತಾ ಪಾಟೀಲ,ಶರಣಬಸಪ್ಪ ಹಂಚೆ,ಅಮೀರ ಅರಬ್, ಅನೀಲಕುಮಾರ ಶಿಂಧೆ ಸೇರಿದಂತೆ ಹಲವರಿದ್ದರು…

Leave a Comment