ಎನ್‌ಪಿಆರ್ ಜಾರಿಗೊಳಿಸದಿರಲೂ ಕೇರಳ ಬಿಗಿಪಟ್ಟು

ತಿರುವನಂತಪುರಂ, ಜ 20-ಸಿಎಎ ವಿರುದ್ದ  ಮೊದಲು ಬಂಡೆದ್ದು  ಸುಪ್ರಿಂ ಕದತಟ್ಟಿರುವ ಕೇರಳ ಈಗ ಇನ್ನೊಂದು ಹೆಜ್ಜೆ  ಮುಂದೆ ಹೋಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜಾರಿಗೊಳಿಸುವುದಿಲ್ಲ ಎಂದೂ ಬಿಗಿ  ಪಟ್ಟು ಹಿಡಿದಿದೆ.

ಆದರೆ   ಜನಗಣತಿಗೆ ಮಾತ್ರ  ಸಹಕರಿಸುವುದಾಗಿ ಕೇಂದ್ರ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮತ್ತು ರಾಜ್ಯ ಜನಗಣತಿ ನಿರ್ದೇಶಕರಿಗೆ ತಿಳಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಎನ್‌ಪಿಆರ್‌ಗೆ ‘ಇಲ್ಲ’ ಮತ್ತು ಜನಗಣತಿಗೆ ‘ಹೌದು’ ಎಂದು ಸಿಪಿಐ (ಎಂ) ಕೇಂದ್ರ ಸಮಿತಿ  ಕರೆ ನೀಡಿದ ಒಂದು ದಿನದ ನಂತರ ಸಂಪುಟ  ಈ ಮಹತ್ವದ ನಿರ್ಧಾರ  ತೆಗೆದುಕೊಂಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಪಿಆರ್ ಅನುಷ್ಠಾನದ ವಿರುದ್ಧ ವಿವಿಧ ಸಾಮಾಜಿಕ ಗುಂಪು, ಸಂಘಟನೆಗಳ ಪ್ರತಿಭಟನೆಯ ಭಯದಿಂದ ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ ಎಂದೂ ಉನ್ನತ ಮೂಲಗಳು ತಿಳಿಸಿವೆ.

Leave a Comment