ಎನ್​ಆರ್​ಸಿ, ಸಿಎಎ ವಿರುದ್ಧ ತಣ್ಣಗಾಗದ ಆಕ್ರೋಶ; ಆಕ್ಷೇಪಾರ್ಹ ಬರಹ

ಬೆಂಗಳೂರು (ಜನವರಿ 14); ಕೇಂದ್ರ ಸರ್ಕಾರದ ವಿವಾದಾತ್ಮಕ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಯ ವಿರುದ್ಧ ನಗರದಲ್ಲಿ ಹೊತ್ತಿಕೊಂಡಿರುವ ಬೆಂಕಿ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಕಿಡಿಗೇಡಿಗಳು ಎನ್ಆರ್ಸಿ, ಸಿಎಎ ಮತ್ತು ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಅಂಗಡಿ ಮುಂಗಟ್ಟುಗಳಲ್ಲಿ ರಾತ್ರೋರಾತ್ರಿ ಆಕ್ಷೇಪಾರ್ಹ ಬರವಣಿಗೆಯನ್ನು ಬರೆಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.
ನಗರದ ಪ್ರತಿಷ್ಠಿತ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಎಲ್ಲಾ ಅಂಗಡಿ ಶೆಲ್ಟರ್ಗಳ ಮೇಲೆ ಕೆಲವು ಕಿಡಿಗೇಡಿಗಳು ನಿನ್ನೆ “ನೋ ಸಿಎಎ, ಎನ್ಆರ್ಸಿ” ಮತ್ತು “ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ನೀಡಿ”, “ನರೇಂದ್ರ ಮೋದಿ ಒಬ್ಬ ಕೋಮುವಾದಿ”, “ಫ್ರೀ ಕಾಶ್ಮೀರ”ಎಂದು ಬರೆದಿದ್ದಾರೆ. ಪರಿಣಾಮ ಇಂದು ಬೆಳಗ್ಗೆ ಚರ್ಚ್ ಸ್ಟ್ರೀಟ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕಬ್ಬನ್ ಪಾರ್ಟ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಡಿಸಿಪಿ ಚೇತನ್ ಸಿಂಗ್ ಸಹ ಸ್ಥಳಕ್ಕೆ ತೆರಳಿ ವಾಸ್ತವ ವರದಿ ಪಡೆದಿದ್ದಾರೆ. ಅಲ್ಲದೆ, ಚರ್ಚ್ ಸ್ಟ್ರೀಟ್ನಲ್ಲಿರುವ ಎಲ್ಲಾ ಅಂಗಡಿಗಳ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನೂ ಪರಿಶೀಲಿಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಲಾಗುವುದು ಎಂದು

Leave a Comment