ಎದೆ ಹಾಲುಣಿಸುವ ತಾಯಿ ಆಹಾರ ಕ್ರಮ….

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ ಮಾಡಿದ್ರೆ ಹಾಲು ಉತ್ಪತ್ತಿಯಾಗುತ್ತದೆ. ಹೆರಿಗೆಯಾದ ನಂತರ ಕೆಲವೊಂದು ಆಹಾರ ಸೇವನೆ ಮಾಡುವುದು ಬಹಳ ಮುಖ್ಯ.

ಆಹಾರದ ಜೊತೆ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಹಾಲು ಹೆಚ್ಚಾಗುತ್ತದೆ. ಆದರೆ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವನೆ ಮಾಡಬೇಡಿ.

ಮೆಂತೆ ಸೇವನೆ ಬಹಳ ಒಳ್ಳೆಯದು. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಜೀವಸತ್ವ ಹಾಗೂ ಖನಿಜಾಂಶ ಹೆಚ್ಚಿರುತ್ತದೆ. ಇದು ಎದೆ ಹಾಲು ಹೆಚ್ಚು ಮಾಡುತ್ತದೆ.ಹಾಲಿನ ಸೇವನೆ ಮಾಡುವುದರಿಂದ ಮಹಿಳೆಯ ಕ್ಯಾಲ್ಸಿಯಂ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಮಹಿಳೆಯರು ಅವಶ್ಯವಾಗಿ ಹಾಲಿನ ಸೇವನೆ ಮಾಡಬೇಕು. ಬ್ರೌನ್ ರೈಸ್ ಸೇವನೆ ಮಾಡುವುದರಿಂದಲೂ ಎದೆ ಹಾಲು ಹೆಚ್ಚಾಗುತ್ತದೆ.

ನೀರು ಹಾಗೂ ಹಣ್ಣುಗಳ ಸೇವನೆಯನ್ನು ಅವಶ್ಯವಾಗಿ ಮಾಡಬೇಕು. ಮಗು ಜನಿಸಿದ ನಂತ್ರ ಮೂರು ತಿಂಗಳವರೆಗೆ ನೀರು ಕುಡಿಯಲು ಹಿರಿಯರು ಬಿಡುವುದಿಲ್ಲ. ಕಟ್ಟುನಿಟ್ಟಿನ ಪಥ್ಯ ಮಾಡುವಂತೆ ಸಲಹೆ ನೀಡುತ್ತಾರೆ. ಆದ್ರೆ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದ್ರೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನೀರನ್ನು ಅವಶ್ಯವಾಗಿ ಸೇವನೆ ಮಾಡಿ. ಜೊತೆಗೆ ಜೀವಸತ್ವ ಹಾಗೂ ಖನಿಜಾಂಶ ಹೆಚ್ಚಿರುವ ಹಣ್ಣನ್ನು ಸೇವಿಸಿ.

ಬಾದಾಮಿ ಹಾಗೂ ಒಣ ಹಣ್ಣುಗಳಲ್ಲಿ ಪ್ರೋಟೀನ್ ಹಾಗೂ ವಿಟಮಿನ್ ಇ ಅಂಶ ಹೆಚ್ಚಿರುತ್ತದೆ. ಇದು ದೇಹ ದಣಿವಾಗದಂತೆ ನೋಡಿಕೊಳ್ಳುತ್ತದೆ.

Leave a Comment