ಎಡಿಟಿಂಗ್ ಹಂತದಲ್ಲಿ ‘ಏರೆಗಾವು ಕಿರಿಕಿರಿ’

ಮಂಗಳೂರು, ಜು.೧೭- ಅದ್ಧೂರಿಯಾಗಿ ಕೋಟಿ ವೆಚ್ಚದಲ್ಲಿ ‘ಏರೆಗಾವುಯೇ ಕಿರಿಕಿರಿ’ ಚಿತ್ರ ನಿರ್ಮಿಸಿರುವ ಶೆಟ್ಟರು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ದೀಪಾವಳಿ ಹೊತ್ತಲ್ಲಿ ತುಳುವರ ಮುಂದೆ ಬರುವ ಇರಾದೆಯಲ್ಲಿದ್ದಾರೆ. ವೇಗಸ್ ಫಿಲಮ್ಸ್ ಲಾಂಛನದಲ್ಲಿ ರೋಶನ್ ವೇಗಸ್ ನಿರ್ಮಿಸುತ್ತಿರುವ ರಾಮ್ ಶೆಟ್ಟಿ ನಿರ್ದೇಶನದ ಏರೆಗಾವುಯೇ ಕಿರಿಕಿರಿ ತುಳು ಸಿನಿಮಾದ ಎಡಿಟಿಂಗ್ ಕೆಲಸ ಆರಂಭಗೊಂಡಿದೆ. ಸಿನಿಮಾದ ನಿರ್ಮಾಪಕ ರಾಮ್ ಶೆಟ್ಟಿ, ಎಡಿಟರ್ ನಾಸಿರ್ ಹಕೀಂ, ಕ್ಯಾಮರಾ ಮ್ಯಾನ್ ರವಿಚಂದನ್ ಮತ್ತು ನಿರ್ಮಾಪಕ ರೋಶನ್ ವೇಗಸ್ ಎಡಿಟಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.
ಏರೆಗಾವುಯೆ ಕಿರಿಕಿರಿ ತುಳು ಸಿನಿಮಾಕ್ಕೆ ಬ್ರಹ್ಮಾವರದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣಗೊಂಡಿತ್ತು. ಸಿನಿಮಾದಲ್ಲಿ ಹಾಸ್ಯ ಮನರಂಜನೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಈ ಸಿನಿಮಾದ ಮೂಲಕ ರವಾನಿಸಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಾಮ್ ಶೆಟ್ಟಿ ತಿಳಿಸಿದ್ದಾರೆ. ತಾರಾಗಣದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಮಹಮ್ಮದ್ ನಹೀಮ್ ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಹರೀಶ್ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ದಿನೇಶ್ ಕೋಡಪದವು, ಪ್ರದೀಪ್ ಚಂದ್ರ, ಸುನೀಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ಶ್ರೀಜಿತ್ ವಸಂತ ಮುನಿಯಾಲ್, ಪ್ರಿಯಾಮಣಿ, ಪವಿತ್ರ ಶೆಟ್ಟಿ- ಡಿಬಿಸಿ ಶೇಖರ್, ಕುಮಾರಿ ಕುಶಿ ಚಂದ್ರಶೇಖರ್ ಮೊದಲಾದವರಿ ದ್ದಾರೆ. ರಾಮ್‌ದಾಸ್ ಸಸಿಹಿತ್ಲು ಚಿತ್ರದ ಸಹನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣ ರವಿ ಚಂದನ್ ಅವರದ್ದಾಗಿದ್ದರೆ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರಕತೆ ಸಚಿನ್ ಶೆಟ್ಟಿ ಕುಂಬ್ಳೆ ಅವರದ್ದಾಗಿದ್ದು, ಸಂಭಾಷಣೆ-ಸಾಹಿತ್ಯ ಡಿಬಿಸಿ ಶೇಖರ್ ಅವರದ್ದಾಗಿದ್ದು ಸಂಕಲನ ನಾಸಿರ್ ಹಕೀಮ್. ಮದನ್ ಹರಿಣಿ ನೃತ್ಯ ಸಂಯೋಜಿಸಿದ್ದರೆ ಮಾಸ್‌ಮಾದ ಸಾಹಸ ನಿರ್ದೇಶಕರಾಗಿದ್ದಾರೆ. ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಕಲಾ ನಿರ್ದೇಶನ ದೇವಿ ಪ್ರಕಾಶ್, ಮೇಕಪ್ ಜೆ.ಎನ್. ಅಶೋಕ್, ವಸ್ತ್ರಾಲಂಕಾರ ರಾಮ್ ಕುಮಾರ್, ಸ್ಟಿಲ್ ರಾಮ್‌ಪ್ರಸಾದ್, ನಿರ್ಮಾಣ ನಿರ್ವಹಣೆ -ಶಿವಾರ್ಜುನ್ ದಿನೇಶ್ ಜೋಗಿ, ಕಾರ್ಯಕಾರಿ ನಿರ್ಮಾಪಕರು -ನಿಕ್ಷಿತ್‌ರಾವ್ ನಿಧಿರಾವ್ ಚಿತ್ರತಂಡದ ಜೊತೆಗಿದ್ದಾರೆ.

Leave a Comment