‘ಎಚ್.ಡಿ.ಕೆ ದೊಡ್ಡವರ ಮಾತು ಕೇಳಿದ್ರೆ, ಇಂತಪ ಪರಿಸ್ಥಿತಿ ಬರುತ್ತಿರಲಿಲ್ಲ’: ಎಚ್.ಡಿ.ರೇವಣ್ಣ

ಮಂಡ್ಯ ಸೆ.12. ‘ಮಾಜಿ ಸಿಎಂ ಕುಮಾರಸ್ವಾಮಿ ಎಂತಹವರನ್ನು ನಂಬ್ತಾರೆ, ಒಳ್ಳೆಯವರನ್ನು, ಕಳ್ಳರನ್ನು ನಂಬ್ತಾರೆ, ಕುಮಾರಣ್ಣ ಅವತ್ತು ದೊಡ್ಡವರ ಮಾತು ಕೇಳಿದಿದ್ರೆ ಇಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡ ಅವರು ಅಂದು ಕುಮಾರಸ್ವಾಮಿಗೆ ನಾರಾಯಣಗೌಡನಿಗೆ ಎರಡನೇ ಬಾರಿ ಟಿಕೆಟ್ ಕೊಡಬೇಡಪ್ಪ. ಅವೆಲ್ಲ ಹೋಟೆಲ್ನಲ್ಲಿ ಚೆಂಗ್ಲು ಬಿದ್ದಿವೆ. ಅವರು ಇರಲ್ಲ ಅಂದಿದ್ರು. ಆದ್ರೆ ಕುಮಾರಸ್ವಾಮಿ ಮಾತು ಕೊಟ್ಟಿದ್ದೇನೆ ಎಂದು ಟಿಕೆಟ್ ಕೊಟ್ಟು ಈಗ ಗೋಳಾಡುತ್ತಿದ್ದಾರೆ. ಅವರು ಎಲ್ಲಿ ಮೇವು ಸಿಗುತ್ತೆ ಅಲ್ಲಿ ಇರೋವವರು. ಮೇವು ಕಡಿಮೆ ಆಗ್ತಿದ್ದಂತೆ ಹಾಗೆ ಹೋಗ್ತಾರೆ. ಕುಮಾರಣ್ಣ ಹೋಟೇಲ್ನಲ್ಲಿ ಇರುವವರನ್ನು ಕರೆದುಕೊಂಡು ಬಂದು ಚುನಾವಣೆಯಲ್ಲಿ ನಿಲ್ಲಿಸಿದರು.ಅವರು ಪಕ್ಷಕ್ಕೆ ದ್ರೋಹ ಬಗೆದ್ರು. ಈತನಿಗೆ ಆ ದೇವರೇ ಶಿಕ್ಷೆ ಕೊಡ್ತಾನೆ ಎಂದು ಕಿಡಿಕಾರಿದರು.

ಇನ್ನು ಕೆ.ಆರ್.ಪೇಟೆ ಕ್ಷೇತ್ರದ ಕಡೆ ಯಾರೂ ಬೊಟ್ಟು ಮಾಡುವಂತಿಲ್ಲ. ಇಲ್ಲಿನ ಜನತೆ ದೇವೇಗೌಡ್ರ ಕುಟುಂಬಕ್ಕಾಗಿ ದುಡಿದಿದ್ದಾರೆ. ಹಾಗಾಗಿ ದೇವೇಗೌಡರಿಗೂ ಕೂಡ ಕೆ.ಆರ್.ಪೇಟೆ ಬಗ್ಗೆ ವಿಶೇಷ ಒಲವಿದೆ ಎಂದು ಹೇಳಿದರು. ಹದಿನಾಲ್ಕು ತಿಂಗಳ ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅಷ್ಟು ನೋವು ತಿಂದಿದ್ದಾರೆ. ಬೇರೆಯವರಾಗಿದ್ದರೆ ಖಂಡಿತ ಆ ನೋವು ತಡೆದುಕೊಳ್ಳುತ್ತಿರಲಿಲ್ಲ. ಮೈತ್ರಿ ಸರ್ಕಾರದ ವೇಳೆ ರಾಜ್ಯದ ಸಾವಿರಾರು ರೈತರ ಕೋಟ್ಯಂತರ ರೂ. ಸಾಲ ಮನ್ನಾ ಆಗಿದೆ. ಆದರೆ ಈಗನ ಸರ್ಕಾರ ರೈತರತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಬಿಜೆಪಿವಿರುದ್ಧ ಹರಿಹಾಯ್ದರು.

ಇದೇ ವೇಳೆ, ಅನರ್ಹ ಶಾಸಕ ನಾರಾಯಣಗೌಡ ಅವರ ಬಗ್ಗೆ ಕಿಡಿಕಾರಿದ ರೇವಣ್ಣ, ಅವನು‌ ಕಮೀಷನ್ ಶಾಸಕನಾಗಿದ್ದ. ನಾನು ಲೋಕೋಪಯೋಗಿ ಇಲಾಖೆಯಲ್ಲಿ ನೂರಾರು ಕೋಟಿ ಕಾಮಗಾರಿ ಮಾಡಿದ್ದೇನೆ. ಇದನ್ನು ಯಾವುದೇ ಯಡಿಯೂರಪ್ಪ ನಿಲ್ಲಿಸೋಕೆ‌ ಆಗಲ್ಲ. ಶಾಸಕನಾಗಿದ್ದ ನಾರಾಯಣಗೌಡ ಕಾಮಗಾರಿಗಳಲ್ಲಿ ನೂರಾರು ಕೋಟಿ ಕಮೀಷನ್ ನುಂಗಿದ್ದಾ‌ನೆ ಎಂದು ಗಂಭೀರ ಆರೋಪ ಮಾಡಿದರು…

Leave a Comment