ಎಚ್ಚೆತ್ತುಕೊಂಡ ಅಧಿಕಾರಿಗಳು

ಸ್ವಚ್ಛತೆ ಮಾಡುತ್ತಿರುವ ಕಾರ್ಮಿಕರು
ನಂಜನಗೂಡು. ಜು.4- ದೇವಸ್ಥಾನದ ಸುತ್ತ ಸ್ವಚ್ಛತೆ ಇಲ್ಲದೆ ಕಂಡಕಂಡಲ್ಲಿ ಕಸದ ರಾಶಿ ಕಂಡು ಸಂಜೆವಾಣಿ ಪತ್ರಿಕೆಯಲ್ಲಿ 2ನೇ ತಾರೀಕು ಇದರ ಬಗ್ಗೆ ಸುದ್ದಿಯಾಗಿತ್ತು ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ಧಿಯನ್ನು ದೇವಸ್ಥಾನ ಕಚೇರಿ ಅಧಿಕಾರಿಗಳು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ದೇವಸ್ಥಾನ ಸುತ್ತಮುತ್ತ ಬಿದ್ದಂತಹ ಕಸದ ರಾಶಿ ಪ್ಲಾಸ್ಟಿಕ್ ಬಾಟಲ್ ಬೆಳೆದಂತಹ ಹಸಿರು ಹುಲ್ಲುಗಳನ್ನು ತೆರವುಗೊಳಿಸಿ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ. ಇದರಿಂದ ದೇವಸ್ಥಾನ ಸುತ್ತಮುತ್ತ ಸಂಗ್ರಹ ಗೊಂಡಿದ ಕಸದ ರಾಶಿಗೆ ಇಂದು ಮುಕ್ತಿ ಬಂದಂತಾಗಿದ್ದು. ಇದರಿಂದ ಭಕ್ತಾದಿಗಳಿಗೆ ಉರುಳುಸೇವೆ ಮಾಡಲು ಅನುಕೂಲವಾಗಿದೆ ಇದೇ ರೀತಿ ಯಾವಾಗಲೂ ಸ್ವಚ್ಛತೆಯಿಂದ ಇದ್ದರೆ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ.

Leave a Comment