ಎಚ್ಕೆಆರ್ಡಿಬಿ ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ

ಕಲಬುರಗಿ ಫೆ 13:  ಸಿದ್ದರಾಮಯ್ಯ ಅವರ ಸರಕಾರ ಆಡಳಿತಕ್ಕೆ ಬಂದ ನಂತರ ಹೈಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ಆಗ್ರಹಿಸಿದೆ.

ಇಂದು ಆಯೋಜಿಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಹವಕ್ತಾರ ಶಶೀಲ ನಮೋಶಿ,ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮೊದಲಾದವರು ರಾಜ್ಯ  ಸರಕಾರವನ್ನು ಆಗ್ರಹಿಸಿದರು.

ಬಣ್ಣಬಣ್ಣದ ಜಾಹೀರಾತಿನಲ್ಲಿ ಸರಕಾರದ ಸಾಧನೆ ಬಗ್ಗೆ ಹೇಳಿಕೊಳ್ಳುದಕ್ಕೂ ವಾಸ್ತವವಾಗಿಯೂ ತುಂಬಾ ಅಂತರವಿದೆ

ಹೈಕಪ್ರ ಅಭಿವೃದ್ಧಿಮಂಡಳಿಗೆ 4 ಸಾವಿರ ಸಾವಿರ ಕೋಟಿ ನೀಡಿದ್ದಾಗಿ ಜನಶೀರ್ವಾದ ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರು ಹೇಳಿಕೊಂಡು ಬರುತ್ತಿದ್ದಾರೆ. ಇದರ ಸ್ಪಷ್ಟ ಚಿತ್ರಣ ಜನತೆಗೆ ಗೊತ್ತಾಗಬೇಕು.371(ಜೆ) ಅಡಿ 20 ಸಾವಿರ ಹುದ್ದೆ ಭರ್ತಿ ಮಾಡಿದ್ದಾಗಿ ರಾಜ್ಯ ಸರಕಾರ ಹೇಳಿಕೊಳ್ಳುತ್ತಿದ್ದು,ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ ಇದ್ದವು ಭರ್ತಿ ಮಾಡಿದ್ದೆಷ್ಟು ಅಂಕಿಅಂಶ ಪ್ರಕಟಿಸಬೇಕು ಎಂದರು

ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ ರಾಹುಲ್ ಗಾಂಧಿ ಅವರು ಕಳೆದ ಮೂರು ದಿನಗಳ ಜನಾಶೀರ್ವಾದ ಯಾತ್ರೆಯಲ್ಲಿ ಅದೇ ರಾಗ ಅದೇ ಹಾಡುತ್ತ ಬಂದಿದ್ದಾರೆ.  ರಾಹುಲ್ ಗಾಂಧಿ ಪ್ರವಾಸದಿಂದಾಗಿ ಕಲಬುರಗಿ ಜೇವರಗಿಯಲ್ಲಿ ಸಾಮಾನ್ಯ ಜನ ಪರಿತಪಿಸುವಂತಾಗಿದೆ

ಮೇಲ್ನೋಟಕ್ಕೆ ಮೃದುಹಿಂದುತ್ವ ಎಂದು ತೋರಿಸಿಕೊಳ್ಳುತ್ತ ಮಠಮಂದಿರ ಸುಪರ್ದಿಗೆ ರಾಜ್ಯ ಸರಕಾರ ಮುಂದಾಗಿದ್ದು ವಿಪರ್ಯಾಸ ಎಂದರು.

ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಇಂಗಿನ ಮಾತನಾಡಿ ರಾಜ್ಯ ಸರಕಾರ ತೊಗರಿ ಕಡಲೆ ಖರೀದಿ ತಕ್ಷಣ ಆರಂಭಿಸಬೇಕು ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು

ಸುದ್ದಿಗೋಷ್ಠಿಯಲ್ಲಿ  ಬಿ.ಜಿ ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ,ರೇವೂನಾಯಕ ಬೆಳಮಗಿ,ದಯಾಘನ ಧಾರವಾಡಕರ್,ಸುಭಾಷ ಬಿರಾದಾರ, ಶರಣು ನಿಗ್ಗುಡಗಿ ಸಂಗಣ್ಣ ಇಜೇ

Leave a Comment