ಎಐಡಿಎಸ್‍ಒ ಜಿಲ್ಲಾಸಮ್ಮೇಳನ 26 ರಂದು

 

ಕಲಬುರಗಿ ಜು 18: ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‍ಒ ) ಜಿಲ್ಲಾ ಸಮ್ಮೇಳನ ಜುಲೈ 26 ರಂದು ನಗರದ ಕನ್ನಡಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಮಲ್ಲಿನಾಥ ಸಿಂಘೆ ಮತ್ತು ಕಾರ್ಯದರ್ಶಿ ಹಣಮಂತ ಎಸ್ ಎಚ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 10.45 ಕ್ಕೆ ರೈಲು ನಿಲ್ದಾಣದಿಂದ ಸರದಾರ ವಲ್ಲಭಭಾಯಿ ಪಟೇಲ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡಭವನದಲ್ಲಿ ನಡೆಯುವ ಸಭೆಯನ್ನು ಪ್ರೊ ಜಿ.ಎಂ ಮೇಟಿ ಉದ್ಘಾಟಿಸುವರು .ಎಐಡಿಎಸ್‍ಒ ರಾಜ್ಯಾಧ್ಯಕ್ಷ ಡಾ ಎನ್ ಪ್ರಮೋದ್ ,  ರಾಜ್ಯ ಸೆಕ್ರೇಟರಿಯೇಟ್ ಸಮಿತಿ  ಸದಸ್ಯ ಅಜಯ ಕಾಮತ್, ಎಸ್‍ಯುಸಿಐ (ಸಿ) ಕಾರ್ಯದರ್ಶಿ ಎಚ್ ವಿ ದಿವಾಕರ್, ಉಪಸ್ಥಿತರಿರುವರು .ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಸಮ್ಮೇಳನ ಚರ್ಚಿಸಲಿದ್ದು, ಎಐಡಿಎಸ್‍ಒ ಸದಸ್ಯತ್ವ ಅಭಿಯಾನ ಆರಂಭಿಸಲಾಗುವದು ಎಂದರು. ಸುದ್ದಿಗೋಷ್ಠಿಯಲ್ಲಿ  ಶರಣು ಹೇರೂರ,ಈರಣ್ಣ ಇಸಬಾ,ಸ್ನೇಹಾ ಕಟ್ಟಿಮನಿ ಉಪಸ್ಥಿತರಿದ್ದರು..

Leave a Comment