ಎಂ.ಬಿ ಪಾಟೀಲ ಕ್ಷಮೆ ಯಾಚನೆಗೆ ಮಠಾಧೀಶರ ಆಗ್ರಹ

ಕಲಬುರಗಿ ಸ 13: ಸಿದ್ಧಗಂಗಾಶ್ರೀಗಳ ಹೇಳಿಕೆಯನ್ನು ತಿರುಚಿ  ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ ಅವರು ಮಠದ ಹೆಸರನ್ನು ದುರುಪಯೋಗ ಮಾಡಿಕೊಂಡು ಶ್ರೀಗಳಿಗೆ ಅವಮಾನ ಎಸಗಿದ್ದು ಕೂಡಲೇ  ಅವರು ರಾಜ್ಯದ  ಜನತೆಯ ಕ್ಷಮೆ ಯಾಚಿಸಬೇಕೆಂದು  ಕಲಬುರಗಿ ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ರೇವಣಸಿದ್ಧ ಶಿವಾಚಾರ್ಯರು ಆಗ್ರಹಿಸಿದರು.
ಸಿದ್ದಗಂಗಾ ಶ್ರೀಗಳು ವೀರಶೈವ ಲಿಂಗಾಯತ ಒಂದೇ ಎಂದು ಹೇಳಿದ್ದು, ಸಚಿವರು ಇದಕ್ಕೆ ವಿರುದ್ಧವಾಗಿ  ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿರುವದು ಖಂಡನೀಯ. ಅವರು ನೈತಿಕತೆ ಇದ್ದರೆ ಕೂಡಲೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ರೇವಣಸಿದ್ಧ ಶಿವಾಚಾರ್ಯರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು
ನಾಡಿನ ಗುರು ವಿರಕ್ತ ಮಠಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಸಚಿವ ಪಾಟೀಲರ ವರ್ತನೆಯಿಂದ ರಾಜ್ಯದ ಜನತೆಗೆ ನೋವಾಗಿದೆ.ಕೆಲವು ಮಠಾಧೀಶರು ಉಂಡ ಮನೆಯ ಜಂತಿ ಎಣಿಸುತ್ತಿದ್ದು ಅವರು ಮಠಗಳನ್ನು ಖಾಲಿ ಮಾಡಬೇಕೆಂದು ಹೇಳಿಕೆ ನೀಡಿದ್ದು ಅವರ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತಿದೆ. ಎಂಬಿ ಪಾಟೀಲ, ವಿನಯ ಕುಲಕರ್ಣಿ ಸೇರಿದಂತೆ ಆಡಳಿರೂಢ ಸರಕಾರದ ಕೆಲವು ಸಚಿವರು ಧರ್ಮ ಒಡೆಯುವ ಕೆಲಸದ ಮುಂಚೂಣಿಯಲ್ಲಿರುವದು ಖಂಡನೀಯ. 24 ರಂದು ಕಲಬುರಗಿ ನಗರದಲ್ಲಿ ನಡೆಯುತ್ತಿರುವದು ಲಿಂಗಾಯತ ಸಮಾವೇಶ ಅಲ್ಲ .ಅದು  ಕಾಂಗ್ರೆಸ್ ಸಮಾವೇಶ. ವೀರಶೈವ ಲಿಂಗಾಯತ ಬೇರೆ ಬೇರೆ ಎಂದು  ಒಡೆದು ಆಳುವ ಈ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬೇಕು.
ಸಚಿವರ  ಧರ್ಮದ್ರೋಹದ  ವರ್ತನೆಯನ್ನು ಸರ್ವಥಾ ಖಂಡಿಸುತ್ತ ಇವರನ್ನು ಮಂತ್ರಿ ಸ್ಥಾನದಿಂದ ಕೈ ಬಿಡುವಂತೆ ಆಗ್ರಹಿಸಿಲು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಡಗಂಚಿ ,ಹೊನ್ನಕಿರಣಗಿ, ಆಂದೋಲಾ,ಪಾಳಾ, ಮಹಾಗಾಂವ, ಶಕಾಪುರ, ದೇವಾಪುರ.ವೆಂಕಟಬೇನೂರ ಮಠಾಧೀಶರು ಸೇರಿದಂತೆ ಚಂದ್ರಶೇಖರ ಹಿರೇಮಠ,ನಾಗಲಿಂಗಯ್ಯ ಮಠಪತಿ ಹಾಗೂ ಹಲವರಿದ್ದರು

Leave a Comment