ಎಂಟು ಶಾಸಕರ ಅಭಿವೃದ್ಧಿಗಾಗಿ ನಿಖಿಲ್ : ಸಿಎಂ ಕುಮಾರಸ್ವಾಮಿ

ಕೆ.ಆರ್.ಪೇಟೆ. ಏ.16- ನಾನು ನನ್ನ ಮಗನನ್ನು ರಾಜಕಾರಣಕ್ಕೆ ಬರಬೇಡ ಎಂದು ಉಪದೇಶ ಮಾಡಿದ್ದೆ. ನೀನು ಚಿತ್ರ ರಂಗದಲ್ಲಿ ಬೆಳಿ ಎಂದು ಹೇಳಿದೆ. ಇಲ್ಲಿನ ಎಂಟು ಜನ ಶಾಸಕರು ಅಭಿವೃದ್ಧಿಗಾಗಿ ನಿಖಿಲ್ ಬೇಕು ಅಂತಾ ಹಠ ಹಿಡಿದದು ಕರೆತಂದಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ನಾಳ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಲೋಕಸಭೆ ಚುನಾವಣೆಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಇಲ್ಲಿನ ಜನರಿಗೆ ಬೇಕಾಗಿರುವುದು, ತಾಲೂಕಿನ ಅಭಿವೃದ್ಧಿ, ಅವರ ಸಮಸ್ಯೆಗಳಿಗೆ ಪರಿಹಾರ. ದೇವೇಗೌಡರು ಲೋಕೋಪಯೋಗಿ, ನೀರಾವರಿ ಮಂತ್ರಿಯಾಗಿದ್ದಾಗ, ನೀರಾವರಿ ಸೌಲಭ್ಯ, ಸೇತುವೆ ಸಂಪರ್ಕ ಕಲ್ಪಿಸಿರುವುದರಿಂದ, ಅವರು ಯಾರನ್ನು ಅಭ್ಯರ್ಥಿ ಮಾಡಿದರೂ ಅವರನ್ನು ಶಾಸಕರಾಗಿ ಮಾಡಿದ್ದೀರಾ. ಇಲ್ಲಿಗೆ ಸಕ್ಕರೆ ಕಾರ್ಖಾನೆ ನೀಡಿದ್ದಾರೆ. ದೇವೇಗೌಡರು ರಾಜಕೀಯ ಜೀವನದಲ್ಲಿ ತಾಲೂಕಿನೊಂದಿಗೆ ಬಾಂದವ್ಯ ಇಟ್ಟಿಕೊಂಡಿದ್ದಾರೆ. ನಾನು ಕನಕಪುರ ಲೋಕಸಭೆಗೆ ನಿಂತಾಗ, ಅಲ್ಲಿನ ದೊಡ್ಡ ವ್ಯಕ್ತಿ ಚುನಾವಣೆಗೆ ನಿಂತಿದ್ದರು. ಯಾರು ಅಲ್ಲಿ ನಮ್ಮ ಪಕ್ಷದಿಂದ ನಿಲ್ಲಲ್ಲು ಸಿದ್ಧವಿರಲಿಲ್ಲ. ನಾನು ಆಗ ಮೈಸೂರಿನಲ್ಲಿ ಚಿತ್ರ ವಿತರಕನಾಗಿ ಕೆಲಸ ಮಾಡುತ್ತಿದೆ. ನಾನು ರಾಜಕೀಯಕ್ಕೆ ಬರಲು ಸಿದ್ಧವಿರಲಿಲ್ಲ. ಚುನಾವಣೆಯಲ್ಲಿ ನಿಂತು ಚುನಾವಣೆಯಲ್ಲಿ ಗೆದ್ದೆ. ನನ್ನ ಮನೆ ಬಾಗಲಿಗೆ ಬಂದ ಜನರನ್ನು ನಾನು ಯಾವ ಜಾತಿ ಅಂತಾ ಕೇಳಲಿಲ್ಲ. ಪ್ರಮಾಣಿಕವಾಗಿ ಕೆಲಸ ಮಾಡಿದ್ದೀನಿ. ಈ ಹಿಂದೆ ಇಲ್ಲಿ ಐದು ಜನ ಶಾಸಕರಾಗಿ ನೀಡಿದ ಆಶಿರ್ವಾದದಿಂದ ನಾನು ಸಿಎಂ ಆಗಿದ್ದೆ. ಆಗ ಹಲವಾರು ಸಬ್ ಸ್ಟೇಷನ್, ಇಂಜಿನಿಯರ್ ಕಾಲೇಜು, ಮಹಿಳಾ ಕಾಲೇಜ್ ನೀಡಿದ್ದೆ ಎಂದು ಹೇಳಿದರು.
ತಾಲೂಕಿನಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ. ಯಾರಾದರೂ ರಾಜಕಾರಣಿಗಳು ಬಂದು ನಿಮ್ಮ ಕಷ್ಟ ಸುಖಗಳ ಕೇಳಿದ್ರಾ. ಸಣ್ಣ ಹೆಣ್ಣು ಮಕ್ಕಳು ಗಂಡನ ಕಳೆದುಕೊಂಡು ವಿಧವೆ ಆದೊರಿಗೆ ಸಾಂತ್ವಾನ ಹೇಳಿದ್ರಾ. ನಾನು ಜಾತಿ ನೋಡದೆ ರೈತ ಆತ್ಮಹತ್ಯೆಗಳಾದ ಕುಟುಂಬಗಳಿಗೆ ಸಾಂತ್ವಾನ ಹೇಳಿ ಆರ್ಥಿಕ ಸಹಾಯ ನೀಡಿದೆ. ರಾಜ್ಯದಲ್ಲಿ ಯಾವನಾದರೂ ರಾಜಕಾರಣಿ ಭೇಟಿ ಕೊಟ್ಟಿದ್ದಾನಾ. ಇಲ್ಲ ಅದು ಕುಮಾರಸ್ವಾಮಿ ಮಾತ್ರ ಭೇಟಿ ಕೊಟ್ಟಿದ್ದು ಎಂದು ಹೇಳಿದರು.
ನಾನು ಕಣ್ಣೀರು ಹಾಕಬಾರದು ಅಂದುಕೊಂಡಿದೆ. ಆದರೆ ವಿಶ್ವನಾಥ್ ವೇದಿಕೆಯಲ್ಲಿದ್ದಾಗ ಭಾವನಾತ್ಮಕವಾಗಿ ನೀನು ಇಷ್ಟೆಲ್ಲ ಕೆಲಸ ಮಾಡುತ್ತಿದ್ದೀಯಾ, ನಿನಗಾಗಿ ಯಾರಿದ್ದಾರೆ ಎಂದು ಹೇಳಿದರು. ಅದು ನನ್ನ ಮನಸ್ಸಿನಲ್ಲಿ ಉಳಿದರಿಂದ ಕಣ್ಣೀರು ಹಾಕಬೇಕಾಯಿತು ಎಂದು ಹೇಳಿ ವೇದಿಕೆಯಲ್ಲಿ ಕಣ್ಣೀರಾಕಿದರು.
ನಾನು ಒಂದು ದಿನವೂ ನೆಮ್ಮದಿಯಿಂದ ಸರ್ಕಾರ ನಡೆಸಿಲ್ಲ. ಮಾಧ್ಯಮಗಳು ಸರ್ಕಾರ ಸಂಜೆ, ಬೆಳಗ್ಗೆ, ಯುಗಾದಿ ಹಬ್ಬ, ಸಂಕ್ರಾಂತಿ ಹಬ್ಬಕ್ಕೆ ಬೀಳುತ್ತೆ ಅಂತಾ ಡೆಡ್ ಲೈನ್ ಕೊಡುತಾ ಬಂದವು. ನಾನು ಇದೆನ್ನಲ್ಲ ಸಹಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಡಾ. ರಾಜ್ ಕುಮಾರ್ ನಿಧನರಾದಗ, ನಾನು ಸಿಎಂ ಆಗಿದೆ. ವಿಷಯ ಗೊತ್ತಾಗಿದ್ದು ತಡವಾಯಿತು. ಮಾಧ್ಯಮಗಳು ರಾಜ್ ತೀರಿದ್ದಾರೆ ಎಂದು ತಿಳಿಸಿದರು. ನಾನು ಸಮುಲತಾ ಬಗ್ಗೆ ಕೆಟ್ಟದಾಗಿ ಮಾತಾಡಲ್ಲ. ಆ ತಾಯಿಗೆ ಕೇಳತ್ತೀನಿ. ನಾನು ಅಂಬರೀಷ್ ಲೀನರಾದಗ ಅವರನ್ನು ನೋಡಿ ನಾನು ಹೊರಟಹೋಗಿದರೆ, ಅವರಿಗೆ ನೆರವು ಕೊಡುತ್ತಿದ್ದರೋ ಯಾರು ಎಂದು ಪ್ರಶ್ನಿಸಿದರು. ಆದರೆ, ನಾನು ಆಸ್ಪತ್ರೆಯಲ್ಲಿ ಉಳಿದುಕೊಂಡು, ಅವರು ಬದುಕಿದ ಮನೆ ಜೆಪಿ ನಗರಕ್ಕೆ ತಂದು, ವಿಧಿವಿಧಾನ ಮುಗಿಸಿ ಕಂಠೀರವ ಸ್ಟೇಡಿಯಂ ತೆಗೆದುಕೊಂಡು ಹೋದರೂ ಎಂದು ಹೇಳಿದರು.
ಈಗ ಚಿತ್ರ ನಟರು ಮಾತನಾಡುತ್ತಾರೆ. ಇಲ್ಲಿನ ರೈತರು ಸತ್ತಾಗ ಅವರೆಲಿದ್ದರು. ಅವರ ಅಭಿಮಾನಿಗಳೀಗ ಮಂಡ್ಯದ ಸ್ವಾಭಿಮಾನ ಎನ್ನುತ್ತಿದ್ದಾರೆ. ಅಂಬರೀಷ್ ತೀರಿಕೊಂಡಿದ್ದಾಗ ಅಣ್ಣ ಏನಾದರೂ ಮಾಡಿ ಮಂಡ್ಯಕ್ಕೆ ತನ್ನಿ ಎಂದು ಕೇಳಿಕೊಂಡಿದ್ದರು. ಯಾರಿಗೂ ದೇಶದ ಇತಿಹಾಸದಲ್ಲಿ ಯುದ್ದ ವಿಮಾನವನ್ನು ನೀಡಿರಲಿಲ್ಲ. ಅವರ ಮೃತದೇಹವನ್ನು ವಿಮಾನ ಯುದ್ಧದಲ್ಲಿ ತಂದವು. ಆಸ್ಪತ್ರೆಯಲ್ಲಿ ನನ್ನ ಮಗ ಮತ್ತು ಅಂಬಿ ಮಗ ಇಬ್ಬರು ಇದ್ದರು. ಆಗ ಹೇಳಿದೆ, ನೀವಿಬ್ಬರು ಅಣ್ಣ ತಮ್ಮಂದಿರಂತೆ ಇರಬೇಕು ಎಂದಿದೆ.
ಮಂಡ್ಯ ಜನರ ಮುಂದೆ ಸತ್ಯವೊಂದನ್ನು ಹೇಳಬೇಕಿದೆ. ಅಂಬಿಯನ್ನು ಮಂಡ್ಯಕ್ಕೆ ತರಲು ಚರ್ಚಿಸುವಾಗ, ಆ ತಾಯಿ ಮಗನನ್ನು ರೂಮೊಳಗೆ ಕರೆದೊಯ್ದು ಯಾವುದೇ ಕಾರಣಕ್ಕೂ ಮಂಡ್ಯಕ್ಕೆ ತೆಗೆದೊಯ್ದು ಹೋಗೋದು ಬೇಡ ಎಂದಿದ್ದರು. ಆ ತಾಯಿ, ಈಗ ಡ್ರಾಮ್ ಮಾಡ್ಕೊಂಡ ಇಲ್ಲಿ ತಿರಾಗಾಡ್ತಿದ್ದಾರೆ. ಅಂಬಿ ಇದ್ದಾಗ ಒಂದು ದಿನವೂ ಮಂಡ್ಯಕ್ಕೆ ಬರದವರು. ಈಗ ಮಂಡ್ಯ ಜನ ಋಣ ತೀರಿಸಬೇಕು ಎಂದು ಡ್ರಾಮಾ ಮಾಡುತ್ತಿದ್ದಾರೆ ಎಂದು ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ಮಾಧ್ಯಮಗಳಿಂದ ಬದುಕ ಬೇಕಿಲ್ಲ. ಏನಾದ್ರೂ ಬರೆದುಕೊಳ್ಳಿ. ನನ್ನನ್ನು ಬೆಳಸಿರೋದು ಈ ಜನ, ನಾನು ಬದುಕಿರೋದು ಇವರಿಗಾಗಿ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಹರಿಹಾಯ್ದರು, ಏನು ಬೇಕಾದರು ಬರೆದುಕೊಳ್ಳಿ, ನಾನು ಹೆದರುವುದಿಲ್ಲ ಎಂದು ಹೇಳಿದರು.
ಅದ್ಯಾವನೋ ಯಶ್ ಅಂತೆ, ಅವನು ಹೇಳತ್ತಾನೆ. ನಮ್ಮ ಪಕ್ಷ ಕಳ್ಳರ ಪಕ್ಷವಂತೆ. ನನ್ನ ಕಾರ್ಯಕರ್ತರು ಸುಮ್ಮನಿರೋದು ನಮ್ಮ ಕುಮಾರಣ್ಣನಿಗೆ ಏನು ಆಗಬಾರದು ಅಂತಾ. ನನ್ನ ಕಾರ್ಯಕರ್ತರ ಬಗ್ಗೆ ಅವನಿಗಿನ್ನೂ ಗೊತ್ತಿಲ್ಲ. ನಾನು ಇಂತಹರನ್ನು ನಿರ್ಮಾಣ ಮಾಡಿದ್ದೀನಿ. ನಮ್ಮಿಂದಲೇ ಸಂಪಾದನೆ ಮಾಡಿರೋದು. ಅವರೇನು ಕಷ್ಟಪಟ್ಟಿ ಏನುಸಂಪಾದನೆ ಮಾಡಿಲ್ಲ. ಸಿನಿಮಾದಲ್ಲಿ ಬರೋದನ್ನ ನಂಬಬೇಡಿ. ನಮ್ಮ-ನಿಮ್ಮ ಜೀವನದಲ್ಲಿ ನಡೆಯೋದು ನಿಜ. ಅವರನ್ನು ನಂಬಬೇಡಿ ಎಂದು ಯಶ್ ವಿರುದ್ಧ ಹರಿಹಾಯ್ದರು.
ಬಸ್ ದುರಂತದಲ್ಲಿ ಐದು ವರ್ಷದ ಮಕ್ಕಳು ಸತ್ತಾಗ, ಕಣ್ಣಲ್ಲಿ ನೀರು ಹಾಕಿದೆ. ಏನಪ್ಪ ದೇವರು ಇಷ್ಟೊಂದು ಕಟುಕು. ಈ ಮಕ್ಕಳನ್ನು ಏಕೆ ಕೊಟ್ಟ ಅನಕೊಂಡೆ. ಸಂತೆಬಾಚಹಳ್ಳಿ ಹೋಬಳಿಗೆ ಏತ ನೀರಾವರಿ ಕೋಟಿ. ಶೀಳನೆರೆ,ಬೂಕನಕೆರೆ ಹೋಬಳಿಗೆ ಐವತ್ತು ಕೋಟಿ ಕೊಟ್ಟಿದ್ದೀನಿ. ಜಿಲ್ಲೆಗೆ ಒಂಬತ್ತು ಸಾವಿರ ಕೋಟಿ ನೀಡಿದ್ದೀನಿ. ಇದಕ್ಕೆ ಬಿಜೆಪಿಯವರು ಮಂಡ್ಯ ಬಟೆಟ್ ಎಂದು ಅವಹೇಳನ ಮಾಡಿದ್ದಾರೆ. ಅಂತವರ ಬೆಂಬಲ ಪಡೆದು ಅಂಬರೀಷ್ ಹೆಸರು ಉಳಿಸಲು ಬಂದೆ. ಮಂಡ್ಯ ಜಿಲ್ಲೆ ಕೆಲಸ ಮಾಡತ್ತಾನೆ ಅಂತಾ ಹೇಳತ್ತಿದ್ದಾರೆ ಎಂದು ಸುಮಲತಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಇಸ್ರೆಲ್ಗೆ ಹೋದಾಗಲೇ ಸಾಯಬೇಕಿತ್ತು. ಅಲ್ಲಿಗೆ ಹೋದಾಗ ಅನಾರೋಗ್ಯಕ್ಕೊಳಗಾದೆ.ಅಲ್ಲಿನ ವೈದ್ಯರು ಅಡ್ಮಿಟ್ ಆಗಿ ಅಂದ್ರು. ಆಗ ನಾನು ಹೇಳದೆ. ನಾಲ್ಕು ದಿನ ಬದುಕುವ ಮಾತ್ರೆ ನೀಡಿ ಸಾಕು. ನಾನು ಚಿಕಿತ್ಸೆಗೆ ಬಂದಿಲ್ಲ. ಇಲ್ಲಿನ ಕೃಷಿಯ ಅಧ್ಯಯನಕ್ಕೆ ಬಂದಿದ್ದೀನಿ. ಇದನ್ನ ನಮ್ಮ ಜನಕೆ ಪರಿಚಯಿಸಬೇಕು ಎಂದು ಚಿಕಿತ್ಸೆ ಪಡೆಲಿಲ್ಲ ಎಂದು ಹೇಳಿದರು.
ಪಾಂಡವಪುರ, ಮಂಡ್ಯ ಸಕ್ಕರೆ ಕಾರ್ಖಾನೆ ಉಳಿವಿಗೆ ಹಣ ನೀಡುತ್ತಿದ್ದೀನಿ. ರಸ್ತೆ ಬದಿ ವ್ಯಾಪಾರಿಗಳಿಗೆ ಭದ್ರತೆಯಿಲ್ಲದೆ ಆಧಾರ್ ಕಾರ್ಡ್ ಮೂಲಕ ಹತ್ತು ಸಾವಿರ ಸಾಲ ನೀಡತ್ತಿದ್ದೇನೆ ಎಂದು ಹೇಳಿದರು. ನಾಲೆಗೆ ನೀರು ಬಿಡಿಸುವಂತೆ ನಾರಾಯಣಗೌಡರ ಮೇಲೆ ನೀವು ತಿರುಗಿ ಬಿದ್ದಿದ್ರಿ. ನೀರಾವರಿ ಅಧಿಕಾರಿಗಳು ನೀರು ಬಿಡಕ್ಕಾಗಲ್ಲ ಎಂದಿದ್ದರು. ಅಧಿಕಾರಿಗಳಿಗೆ ನಾನು ಹೇಳಿದೆ ಡೋಂಟ್ ವರಿ ನೀರು ಬಿಡಿ ಅಂದೆ. ನೀರು ಬಿಟ್ರು. ನಿಮ್ಮ ಕಬ್ಬನ್ನು ಒಣಗಲು ಬಿಟ್ನಾ ಎಂದರು.
ನನ್ನ ಮಗ ನಿಖಿಲ್ ನನಗಿಂತಲೂ ಬಡವರಿಗೆ ಸ್ಪಂದಿಸುವ ಮನಸಿನವನು. ನಮ್ಮ ಕುಟಂಬದಲ್ಲಿ ಬೆಳದಿರುವವನ್ನು. ಅವನನ್ನು ನಿಮ್ಮ ಮಡಿಲಿಗೆ ಹಾಕಿದ್ದೀನಿ. ಅವನಿಗೆ ಅಭಯ ಹಸ್ತ ನೀಡಿ. ಯಾವುದೇ ಅಪಪ್ರಚಾರಕ್ಕೆ ಒಳಗಾಗದೆ ನಿಖಿಲ್ ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಮಾತನಾಡಿ, ಭಾರತದಲ್ಲಿ ಎರಡು ತತ್ವಗಳ ನಡುವೆ ಸಂಘರ್ಷ ನಡೀತಿದೆ. ನಕಲಿ ರಾಷ್ಟ್ರವಾದಿಗಳು, ಬಹುತ್ವವಾದಿಗಳ ತತ್ವದಲ್ಲಿ ಚುನಾವಣೆ ನಡೀತೀದೆ. ಮೋದಿ ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳು ಎಂಬಂತಾಗಿದೆ. ಬಿಜೆಪಿಯವರು ಮಂಡ್ಯದ ಬಜೆಟ್ ಅಂದ್ರು. ಇವತ್ತು ಹಿಂಬಾಗಿಲಿಂದ ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾರನ್ನು ಬಿಟ್ಟಿದ್ದಾರೆ. ಸುಮಲತಾ ಸ್ವತಂತ್ರ್ಯ ಅಭ್ಯರ್ಥಿ ಅಲ್ಲ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಹೇಳಿದರು.
ವೈವಾಹಿಕ ಜೀವನಕ್ಕೆ ಸಂಬಂಧಿಸಿದ ತಲಾಖ್ ಕಾನೂನು ಏನು ಮಾಡಿದ್ರಿ. ತ್ರಿವಳಿ ತಲಾಖ್ಗೆ ಮೂರು ವರ್ಷ ಜೈಲು ಶಿಕ್ಷೆ ಮಾಡಿದ್ದೀರಿ. ನಿಮ್ಮನ್ನು ಪ್ರಶ್ನೆ ಮಾಡ್ತೀನಿ ಮೋದಿ. ನಿಮ್ಮ ಧರ್ಮ ಪತ್ನಿ ನಿಮ್ಮ ಜೊತೆಗಿಲ್ಲ. ಹಾಗಾದ್ರೆ ನಿಮಗೆ ಎಷ್ಟು ವರ್ಷ ಜೈಲಿಗೆ ಹಾಕಬೇಕು. ಒಬ್ಬರಿಗೊಂದು ಕಾನೂನು ಮಾಡಲು ಜನ ತಂತ್ರದಲ್ಲಿ ಅವಕಾಶವಿಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದರು.
ಕುಮಾರಸ್ವಾಮಿ ಸರ್ಕಾರ ಬಂದ ನಂತರ ಕರ್ನಾಟಕಕ್ಕೆ ನರೇಗಾದಲ್ಲಿ ಹಣ ಬಿಡುಗಡೆ ಆಗಿಲ್ಲ. ಉದ್ಯೋಗ ಕೊಡುತ್ತೀನಿ ಅಂದು ಉದ್ಯೋಗ ಕಿತ್ತುಕೊಳ್ಳುತ್ತಿದ್ದೀರಿ. ಅಂಬರೀಷ್ ಅವರ ಕುಟುಂಬ, ಕುಮಾರಸ್ವಾಮಿ ಕುಟುಂಬ ಎಷ್ಟು ಚೆನ್ನಾಗಿತ್ತು. ಹೀಗಾಗಿ ಅವರು ಅಗಲಿದ ಸಮಯದಲ್ಲಿ ಮುಖ್ಯಮಂತ್ರಿಗಳು ಬಹಳ ಗೌರವಯುತವಾಗಿ ಕಳಿಸಿಕೊಟ್ರು. ಅಂಬರೀಷ್ ಸಮಾಧಿಗೆ ವರನಟ ರಾಜ್ಕುಮಾರ್ ಪಕ್ಕದಲ್ಲಿ ಜಾಗ ಮಾಡಿಕೊಟ್ರು. ಆದ್ರೆ ಇವತ್ತು ಕೆಲವರು ಸೇರಿಕೊಂಡು ಎರಡು ಕುಟುಂಬದ ನಡುವೆ ವಿಷ ಬೀಜ ಬಿತ್ತಿದ್ರು. ಆ ವಿಷ ಬೀಜ ಬಿತ್ತಿದವರು ಯಾರೆಂದು ನಿಮಗೆಲ್ಲ ಗೊತ್ತು ಎಂದು ತಿಳಿಸಿದರು.
ಕುಮಾರಸ್ವಾಮಿ ಕೆಲಸ ಅಂಬರೀಷ್ ಅಭಿಮಾನಿಗಳು ಮೆಚ್ಚಬೇಕು. ಕೆಲವೊಂದು ಸಮಯದಲ್ಲಿ ಸತ್ಯ ಸಮಾಧಿ ಆಗುತ್ತೆ. ಆದರೆ ಸತ್ಯ ನೀವು ಅರ್ಥ ಮಾಡಿಕೊಳ್ಳಬೇಕು. ಅಂಬರೀಷ್ ಎಂದೂ ಕೂಡ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಿರಲಿಲ್ಲ. ಆದರೆ ಇಂದು ಅಂಬಿ ಕುಟುಂಬ ಕೋಮುವಾದಿ ಜೊತೆ ಕೈ ಜೋಡಿಸಿದ್ರು. ಅಂತಹ ಸನ್ನಿವೇಶ ಕೆಲವು ಕುಹಕಿಗಳು ನಿರ್ಮಾಣ ಮಾಡಿಬಿಟ್ಟರು. ಅಂಬಿ ಕುಟುಂಬ ಬಿಜೆಪಿಗೆ ಶರಣಾಗಿದ್ದು ಯಾರು ಕ್ಷಮಿಸುವ ಆಗಿಲ್ಲ ಎಂದು ತಿಳಿಸಿದರು.
ಮತ್ತೆ ಭಾರತದಲ್ಲಿ ಮೈತ್ರ ಪಕ್ಷ ಬರುತ್ತೆ ಎನ್ನಲಾಗುತ್ತಿದೆ. ಹಾಗೇನಾದ್ರು ಮೈತ್ರಿ ಪಕ್ಷ ಬಂದರೆ ಮತ್ತೆ ದೇವೇಗೌಡರಿಗೆ ಪ್ರಧಾನಿ ಆಗುವ ಅವಕಾಶವಿದೆ. ಮುಂದಿನ ಭಾರತ ಸರ್ಕಾರ ಮೈತ್ರಿ ಮತ್ತು ಪ್ರಾಂತ್ಯ ಪಕ್ಷಗಳ ಸರ್ಕಾರ. ಎಲ್ಲ ಪ್ರಾಂತೀಯ ಪಕ್ಷಗಳು ರಾಷ್ಟದಲ್ಲಿ ಸರ್ಕಾರ ನಿರ್ಮಾಣ ಮಾಡುವ ಅನಿವಾರ್ಯತೆ ಬಂದಿದೆ. ಈ ಅನಿವಾರ್ಯತೆಯಲ್ಲಿ ದೇವೇಗೌಡರು ಮತ್ತೆ ಪ್ರಧಾನಿ ಆಗುವುದನ್ನು ಯಾರೂ ಇಲ್ಲ ಅನ್ನೋಕೆ ಆಗಲ್ಲ. ಬಹಳ ಜನ ವಂಶ ರಾಜಕಾರಣ ಎನ್ನುತ್ತಾರೆ. ವಂಶ ರಾಜಕಾರಣ ಜಗತ್ತಿನ ಎಲ್ಲ ದೇಶದಲ್ಲಿದೆ. ಅಲ್ಬೇನಿಯ ದೇಶದಲ್ಲಿ ೫೦ ವರ್ಷದಿಂದ ಒಂದೇ ಕುಟುಂಬ ಆಡಳಿತ ನಡೆಸುತ್ತಿದೆ. ಲಾಲೂಪ್ರಸಾದ್, ಕರುಣಾನಿಧಿ ಸೇರಿದಂತೆ ಹಲವರು ವಂಶ ರಾಜಕಾರಣ ಮಾಡುತ್ತಿದ್ದಾರೆ.
ಪ್ರಜ್ವಲ್, ದೇವೇಗೌಡರು, ನಿಖಿಲ್ ಗೆಲ್ಲುತ್ತಾರೆ. ಭಾರತದಲ್ಲಿ ತಾತನ ಜೊತೆ ಮೊಮ್ಮಕ್ಕಳು ಪಾರ್ಲಿಮೆಂಟ್ಗೆ ಹೋಗೋದು ಹೆಮ್ಮೆ. ಅದರಲ್ಲಿ ತಪ್ಪೇನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ನೆರದಿದ್ದ ಜನರಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮಾತನಾಡಿ, ಸುಮಲತಾ ಯಡಿಯೂರಪ್ಪ, ಎಸ್ ಎಂ ಕೃಷ್ಣ ಅವರ ಆಶಿರ್ವಾದವನ್ನು ಪಡೆದಿದ್ದಾರೆ. ಆದರೆ, ನೀವಿಬ್ಬರು ಪ್ರಚಾರಕ್ಕೆ ಬರಬೇಡಿ ಮುಸ್ಲಿಂಮರು ಮತ ಹಾಕಲ್ಲ.ಚುನಾವಣೆ ಬಳಿಕ ಬಿಜೆಪಿ ಸೇರುತ್ತೇನೆ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಮಾಜಿ ಸಚಿನ ಕಾಂಗ್ರೆಸ್ ನ ರೆಹಮಾನ್ ಖಾನ್ ನೆರಳಿನಲ್ಲಿ ತಾಲೂಕಿನ ಹಲವರು ರಾಜಕೀಯ ಮಾಡಿದ್ದಾರೆ. ಅವರು ಹೇಳುವಂತೆ ಇಲ್ಲಿನ ಕೆಲವು ಕಾಂಗ್ರೆಸಿಗರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಕೆಲಸ ಮಾಡಬೇಕು. ಇಲ್ಲದಿದ್ದರೇ ಅವರ ರಾಜಕೀಯ ಅಸ್ತಿತ್ವ ಉಳಿದುಕೊಳ್ಳಲ್ಲ. ನಾನು ಈ ಮಾತನ್ನ ಹೇಳಲು ನನಗೆ ಹಕ್ಕಿದೆ. ನಾನು ಹಲವು ಬಾರಿ ಇಲ್ಲಿನ ಮುಖಂಡರಿಗೆ ರಾಜಕೀಯ ನೆರವು ನೀಡಿದ್ದೀನಿ ಎನ್ನುವ ಮೂಲಕ ಇಲ್ಲಿನ ಕಾಂಗ್ರೆಸ್ ಮುಖಂಡರಿಗೆ ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಮಾತನಾಡಿ, ದೇಶದ ಬುದ್ದಿವಂತರು ಯೋಚಿಸುತ್ತಿದ್ದಾರೆ. ನಮ್ಮ ಸಂವಿಧಾನ ಉಳಿಯುತ್ತೋ, ಇಲ್ವಾ ಎಂಬುದರ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಐಕ್ಯತೆ ಉಳಿಯಬೇಕು. ದೇಶ ಉಳಿಯಬೇಕು. ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಸುಮಲತಾ ಪಕ್ಷೇತರ ಅಭ್ಯರ್ಥಿ ಅಲ್ಲ. ಬಿಜೆಪಿ ಅಭ್ಯರ್ಥಿ, ಯಡಿಯೂರಪ್ಪನ ಅಭ್ಯರ್ಥಿ. ಸುಮಲತಾ ಗೆಲ್ಲಲ್ಲ. ಗೆದ್ದರೂ ಬಿಜೆಪಿಗೆ ಹೋಗತ್ತಾರೆ.ಹಾಗಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ದೆಹಲಿಯಲ್ಲಿ ಬಿಜೆಪಿಸಂಸದ ನನ್ನ ಕೈ ಹಿಡಿದು ಹೇಳುತ್ತಾನೆ. ಖಾನ್ ಸಾಹೇಬರೇ ಕಾಂಗ್ರೆಸ್ ಪಕ್ಷ ಉಳಿಸಿ. ಇಲ್ಲದಿದ್ರೆ, ಸರ್ವಾಧಿಕಾರ ಬರುತ್ತದೆ. ನನಗೆ ಹೇಳಿದ್ದು ಬಿಜೆಪಿ ಸಂಸದ. ಮತ್ತೇ ಬಿಜೆಪಿ ಬಂದ್ರೆ ಸಂವಿಧಾನ ಉಳಿಯಲ್ಲ. ಸರ್ವಾಧಿಕಾರ ತರುತ್ತಾರೆ. ಆದ್ದರಿಂದ ನೀವೆಲ್ಲ ದೇಶಕ್ಕಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಉಪ ಸಭಾಪತಿ ಕೃಷ್ಣರೆಡ್ಡಿ ಮಾತನಾಡಿ, ಮೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಈ ವೇಳೆ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರಲಿಲ್ಲ. ಆದ್ದರಿಂದ ಜೆಡಿಎಸ್ ಮುಖಂಡರು ಕೋಮುವಾದಿ ಪಕ್ಷವನ್ನು ದೂರವಿಡಲು ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತು. ಬೆಂ.ದಕ್ಷಿಣದ ಅಭ್ಯರ್ಥಿ ಹೇಳತ್ತಾರೆ. ಬಿಜೆಪಿಗೆ ಮತ ಹಾಕಲಿಲ್ಲ ಅಂದ್ರೆ, ಅವರು ಪಾಕಿಸ್ತಾನಿಗಳು. ಅಂಬೇಡ್ಕರ್ ವಿಗ್ರಹಗಳನ್ನು ನೆಲಸಮ ಮಾಡಬೇಕು ಅಂತಾರೆ. ಈಶ್ವರಪ್ಪ ಹೇಳತ್ತಾರೆ. ಮುಸ್ಲಿಮರಿಗೆ ನಾವು ಟಿಕೆಟ್ ಕೊಡಲ್ಲ. ಅವರಿಗೆ ಕೊಟ್ರೆ ಅವರ ಮನೆ ಕಸ ತೊಡಿಯಬೇಕಾಗುತ್ತದೆ ಎಂದು ಕೋಮುವಾದ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಸರ್ಜಿಕಲ್ಸ್ಟ್ರೈಕ್ ಅನ್ನು ಸಂಭ್ರಮಿಸುತ್ತದೆ. ಯಾವುದೇ ಸರ್ಕಾರ ಇಂತಹ ಸಂಭ್ರಮವನ್ನು ಮಾಡಿಲ್ಲ.ಮುದ್ರಾ ಯೋಜನೆ ಮೂಲಕ ಲಕ್ಷಾಂತರ ಜನರಿಗೆ ಸಾಲ ನೀಡಿದ್ದೀವಿ ಅಂತಾ ಮೋದಿ ಹೇಳುತ್ತಾರೆ. ಈವರೆಗೂ ಯಾರಿಗೂ ಸಾಲ ಕೊಟ್ಟಿಲ್ಲ. ಮೋದಿ ಭಾವನಾತ್ಮಕವಾಗಿ ಜನರನ್ನು ಮರಳು ಮಾಡುತ್ತಿದ್ದಾರೆ. ನನ್ನ ತಾಯಿ ಈಗಲೂ ಎಲ್ಲಿಯಾದರೂ ಹೋಗಬೇಕಾದರೇ ಅವರ ಹತ್ರ ದುಡಿಲ್ಲ ಅಂತಾ ಹೇಳತ್ತಾರೆ. ಮೋದಿಗೆ ಸರ್ಕಾರ ಬಂಗಳೆ ನೀಡಿದೆ. ಅವರನ್ನು ಜತೆಯಲ್ಲಿ ಇರಿಸಿಕೊಳ್ಳಬೇಡಿ ಅಂತಾ ಹೇಳಿದ್ದಾರಾ. ನೋಟ್ ಬ್ಯಾನ್ ಮಾಡಿದಾಗ ಯಾರು ಅವರ ತಾಯಿಯನ್ನು ಎಟಿಎಮ್ ಮುಂದೆ ನಿಲ್ಲಿಸಿಲ್ಲ. ಆದರೆ, ಮೋದಿ ಅವರ ತಾಯಿಯನ್ನು ರಸ್ತೆಯಲ್ಲಿ ನಿಲ್ಲಿಸಿ ಮಾಧ್ಯಮಗಳ ಮೂಲಕ ಪ್ರಚಾರ ಪಡೆದಿದ್ದಾರೆ. ಇಂತಹ ಕೀಳು ಮಟ್ಟಕ್ಕಿಳಿಯಬಾರದು. ಸುಮಲತಾ ಬಿಜೆಪಿ ಅಭ್ಯರ್ಥಿ. ಅವರು ಚುನಾವಣೆ ಬಳಿಕ ನೋಡತ್ತೀನಿ ಅಂದ್ರೂ ಕೈಗೆ ಸಿಗಲ್ಲ ಎಂದು ಲೇವಡಿ ಮಾಡಿದರು.
ಸಮಾವೇಶದಲ್ಲಿ ಕಾಂಗ್ರೆಸ್ ನ ರೆಹಮಾನ್ ಖಾನ್, ಅವರ ಅಪ್ತ ಮಾಜಿ ಕೆಯುಎಫ್ ಡಿ ಐ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಪಿಎಲ್ ಡಿ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್ ಇದ್ದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾದಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಯಾವುದೇ ಮುಖಂಡರು ವೇದಿಕೆ ಹತ್ತಿರಲಿಲ್ಲ.
ಶಾಸಕ ನಾರಾಯಣಗೌಡ, ಮಾಜಿ ಜಿಪಂ ಅಧ್ಯಕ್ಷೆ ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಜಿಪಂ ಸದಸ್ಯ ಬಿ.ಎಲ್.ದೇವರಾಜು, ಎಚ್.ಟಿ.ಮಂಜು, ರಾಮದಾಸ್, ಮುಖಂಡರಾದ ಎ.ಆರ್.ರಘು, ಶ್ರೀನಿವಾಸ್, ಕೃಷ್ಣೇಗೌಡ, ಪುರಸಭೆ ಸದಸ್ಯ ಸಂತೋಷ್, ಹೇಮಂತ್ ಕುಮಾರ್, ಎಪಿಎಂಸಿ ಅಧ್ಯಕ್ಷ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಸೇರಿದಂತೆ ಹಲವರಿದ್ದರು
ಚಿತ್ರ ಶೀರ್ಷಿಕೆ: 15 ಕೆ.ಆರ್.ಪಿ.01 ಪಟ್ಟಣದ ನಾಳ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಲೋಕಸಭೆ ಚುನಾವಣೆಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ಬೃಹತ್ ಬಹಿರಂಗ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡಿದರು.

Leave a Comment