ಎಂಜಿನಿಯರ್‌ಗಳಿಗೊಂದು ಸಂದೇಶ..

ಹೊಸ ಕಲಾವಿದರೇ ಸೇರಿಕೊಂಡು ನಿರ್ಮಿಸಿ,ನಿರ್ದೇಶಿಸಿರುವ ಚಿತ್ರ “ಎಂಜಿನಿಯರ್. ನೃತ್ಯ ಶಾಲೆ ನಡೆಸುತ್ತಿರುವ ವಿನಯ್ ರತ್ನಸಿದ್ಧಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಇದು. ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ನೃತ್ಯ ಶಾಲೆಯ ವಿದ್ಯಾರ್ಥಿಗಳು.

“ಎಂಜಿನಿಯರ್ ಚಿತ್ರದಲ್ಲಿ ಬರೊಬ್ಬರಿ ಎಂಟು ನಾಯಕಿಯರಿದ್ದಾರೆ. ಇನ್ನೂ ಇಬ್ಬರು ನಾಯಕಿಯರು ಇರಬಹುದಿತ್ತು ಅನ್ನಿಸಿದರೆ ಆಶ್ಚರ್ಯವಿಲ್ಲ ಎನ್ನುವ ಮಾತು ಚಿತ್ರ ನೋಡಿದ ಮಂದಿಯಿಂದ ಬರಬಹುದು ಎನ್ನುತ್ತಲೇ ಮಾತಿಗಿಳಿದರು ನಿರ್ದೇಶಕ ವಿನಯ್ ರತ್ನಸಿದ್ಧಿ.

ಎಲ್ಲರ ಜೀವನದಲ್ಲಿ ನಡೆಯುವ ಕಥೆ ಮತ್ತು ತಿರುಳನ್ನು ಚಿತ್ರ ಒಳಗೊಂಡಿದೆ. ಚಿತ್ರ ನೋಡುತ್ತಿದ್ದರೆ ನಿಜ ಜೀವನಕ್ಕೆ ಹತ್ತಿರವಾಗುವ ಹಾಗೆ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ದೃಶ್ಯದಲ್ಲಿ ಸಂದೇಶವಿದೆ. ಸಂದೇಶದ ಜೊತೆಗೆ ಮನರಂಜನೆಗೂ ಆದ್ಯತೆ ನೀಡಲಾಗಿದೆ. ಚಿತ್ರ ೧ ಗಂಟೆ ೪೪ ನಿಮಿಷಗಳ ಅವಧಿಒಳಗೊಂಡಿದೆ.

ಎಂಜಿನಿಯರ್‌ಗಳು ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ. ಇದರಿಂದ ಅನಾಹುತ ಕಟ್ಟಿಟ್ಟಬುತ್ತಿ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಬರುವ ಸಮಸ್ಯೆಗಳೆಲ್ಲವೂ ಎದುರಿಸಬೇಕೆನ್ನುವ ಕಿವಿಮಾತನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಮತ್ತು ತಂಡಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ಚಿತ್ರಕ್ಕೆ ಅಮರೇಂದ್ರ ವರ್ಮಾ, ಚಂದನ, ಸುಮ ಮತ್ತು ಪ್ರಭು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಅದರಲ್ಲಿ ಚಂದನ ನಾಯಕಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶಮಾ ತಾಜ್ ಮತ್ತಿತರಿದ್ದಾರೆ. ಬೆಂಗಳೂರು ಸುತ್ತ ಮುತ್ತ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದ್ದು ೪೦ ಲಕ್ಷದಲ್ಲಿ ಚಿತ್ರವನ್ನು ಪೂರ್ಣಗೊಳಿಸಲಾಗಿದೆ.

ನಾಯಕರಾಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ರವಿದೇವ್ ಸಂಗೀತ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರವನ್ನು ಸದ್ಯದಲ್ಲಿಯೇ ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕಿದೆ.

Leave a Comment