ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಕೌಶಲ್ಯಾಧಾರಿತ ಉಚಿತ ತರಬೇತಿ

ದಾವಣಗೆರೆ, ಅ, 17 – ನಗರದ ಎಂಇಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯಾಧಾರಿತ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ಕಲ್ಪಿಸಲಾಗುವುದು. ಇದೇ ಅ. 21 ರಂದು ತರಬೇತಿ ಪ್ರಾರಂಭವಾಗಲಿದೆ ಎಂದು ಕಾಲೇಜಿನ ಪ್ರಾಚಾರ್ಯ ವೆಂಕಟೇಶ್ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ 10+2 ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿಗಳಿಗೆ ಟೆಲಿಕಾಮ್ ಕಸ್ಟಮರ್ ಕೇರ್ ರಿಲೇಷನ್ ಶಿಪ್, ಡಾಟಾ ಎಂಟ್ರಿ ಆಪರೇಟಿಂಗ್, ಸೇಲ್ಸ್ ಅಸೋಸಿಯೇಟ್ ಎಂಬ ಕೌಶಲ್ಯಾಧಾರಿತ ಉಚಿತ ತರಬೇತಿಯನ್ನು ನೀಡಲಾಗುವುದು. ಇದಲ್ಲದೆ ಶೇ. 100 ರಷ್ಟು ಉದ್ಯೋಗವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದಾಗಿದೆ. ಎರಡುವರೆ ತಿಂಗಳ ತರಬೇತಿ ಇದಾಗಿದ್ದು, ಬೆಳಗ್ಗೆ ಹಾಗು ಮಧ್ಯಾಹ್ನ 2 ಬ್ಯಾಚ್ ಗಳಿವೆ. ಬಡ ಹಾಗೂ ನಿರುದ್ಯೋಗಿಗಳಿಗೆ ಈ ತರಬೇತಿಗಳಿಂದ ಅನುಕೂಲವಾಗಲಿದೆ. ತರಬೇತಿಗೆ ಹಾಜರಾಗಲು ಕೆಲ ನಿಬಂಧನೆಗಳನ್ನು ಅಳವಡಿಸಲಾಗಿದೆ. ಪ್ರತಿನಿತ್ಯ ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ, ತರಬೇತಿ ಪಡೆದ ನಂತರ ಸೂಕ್ತ ಉದ್ಯೋಗವಕಾಶ ಲಭ್ಯವಿದ್ದು, ಉದ್ಯೋಗಕ್ಕೆ ಬದ್ದರಾಗಿರಬೇಕು. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಉದ್ಯೋಗ ಅವಕಾಶ ಸಿಗಬಹುದು. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9880436414, 9964868683 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆ.ಎಂ.ಪ್ರದೀಪ್, ನಂದೀಶ್, ಜೆ.ಪಿ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
17dph1

Leave a Comment