ಋತುಸ್ರಾವದ ವೇಳೆ ಆಹಾರದ ಬಗ್ಗೆ ಎಚ್ಚರ ಇರಲಿ

ಮಹಿಳೆಯರ ಋತುಸ್ರಾವದ ವೇಳೆ ಹೊಟ್ಟೆ ನೋವು, ಜೊತೆಗೆ ಹೊಟ್ಟೆ ಉಬ್ಬರ ಎರಡು ಜೊತೆಯಾದರೆ ಮಹಿಳೆಯರಿಗೆ ನರಕ ಯಾತನೆ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಕೆಲ ಸಲಹೆಗಳು ಇಲ್ಲಿವೆ.

ಬಾಳೆಹಣ್ಣು, ಟೊಮ್ಯಾಟೊ ಮೊದಲಾದ ಹಣ್ಣುಗಳಲ್ಲಿ ಪೊಟ್ಯಾಶಿಯಂ ಹೆಚ್ಚಿರುತ್ತದೆ. ಇವು ನಿಮ್ಮ ದೇಹದಲ್ಲಿ ನೀರಿನಾಂಶ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ ಹಾಗೂ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಯುವ ಫ್ಯಾಟ್ಸ್ ಆಹಾರಗಳಾದ ನಟ್ಸ್, ಚಿಯಾ ಸೀಡ್ಸ್, ಸಲೋಮ್ ಮೊದಲಾದವುಗಳನ್ನು ಸೇವಿಸಿ. ಇದರೊಂದಿಗೆ ಡ್ರೈ ಫ್ರುಟ್ಸ್ ಕೂಡ ಸೇವಿಸಿ. ಇದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ಯಾವ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುತ್ತದೆ, ಅಂತಹ ಆಹಾರಗಳನ್ನು ಸೇವಿಸಿ. ಅಂದರೆ ಕಲ್ಲಂಗಡಿ ಹಣ್ಣು, ನಿಂಬೆ ಜ್ಯೂಸ್, ಶುಂಠಿ, ಸೌತೆಕಾಯಿಯನ್ನು ಸೇವಿಸಿ. ಇದು ಪಿರಿಯಡ್ಸ್ ಸಮಯದಲ್ಲಿ ನಿಮಗೆ ಆರಾಮ ನೀಡುತ್ತದೆ.

ಎಷ್ಟು ಸಾಧ್ಯವಾಗುತ್ತದೆ ಅಷ್ಟು ನೀರನ್ನು ಸೇವಿಸಿ. ಪಿರಿಯಡ್ಸ್ ಸಮಯದಲ್ಲಿ ಎಷ್ಟು ನೀರು ಸೇವನೆ ಮಾಡಿದರೂ ಉತ್ತಮ. ನೀರು ಕುಡಿದರೆ ದೇಹ ಕ್ಲೀನ್ ಆಗುತ್ತದೆ, ಇದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಕಂಡು ಬರೋದಿಲ್ಲ.

ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಿದರೆ ಅದು ದೇಹದಲ್ಲಿನ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ. ಆದುದರಿಂದ ಪಿರಿಯಡ್ಸ್ ಸಮಯದಲ್ಲಿ ಸಾಧ್ಯವಾದಷ್ಟು ಉಪ್ಪನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ. ಪ್ಯಾಕೇಜ್ ಆಹಾರ, ಸೂಪ್, ಸಾಸ್, ಮಾಂಸಾಹಾರಗಳ ಸೇವನೆ ಮಾಡಬೇಡಿ.

ಕಾಫಿ ಸೇವನೆಯಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಕ್ರಿಯೆಯ ಮೇಲೆ ತುಂಬಾ ಪರಿಣಾಮ ಉಂಟಾಗುತ್ತದೆ. ಆದುದರಿಂದ ಕಾಫಿ ಸೇವನೆ ಮಾಡುವ ಅಭ್ಯಾಸ ಒಳ್ಳೆಯದಲ್ಲ.

Leave a Comment