ಋತುಚಕ್ರದ ಅತಿ ರಕ್ತಸ್ರಾವ

 

ಏನಿದು ಅತಿಯಾದ ರಕ್ತಸ್ರಾವ? :

ಋತುಚಕ್ರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ’ಅತಿರಕ್ತಸ್ರಾವ’ ಎನ್ನುತ್ತಾರೆ. ಸಾಮಾನ್ಯವಾಗಿ ೩೦ರಿಂದ ೪೦ ಎಂಎಲ್’ನಷ್ಟು ರಕ್ತಸ್ರಾವ ಆಗುತ್ತದೆ. ಅದಕ್ಕೂ ಹೆಚ್ಚಿನ ರಕ್ತಸ್ರಾವ ಆದಾಗ ಸುಸ್ತಾಗುತ್ತಾರೆ. ಅದರಿಂದ ಅವರ ದೈನಂದಿನ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ.

ಇದು ಎಷ್ಟು ಸಾಮಾನ್ಯ?

ಶೇ. ೨೫ರಷ್ಟು ಮಹಿಳೆಯರು ಜೀವನದ ಯಾವುದಾದರೂ ಹಂತದಲ್ಲಿ ಈ ಸಮಸ್ಯೆ ಎದುರಿಸುತ್ತಾರೆ.

ಅತಿಯಾದ ರಕ್ತಸ್ರಾವಕ್ಕೆ ಏನು ಕಾರಣ?

ಅತಿಯಾದ ರಕ್ತಸ್ರಾವಕ್ಕೆ ಹಲವು ಕಾರಣಗಳಿರಬಹುದು. ಬಹಳಷ್ಟು ಪ್ರಕರಣಗಳಲ್ಲಿ ಯಾವುದೇ ನಿಖರ ಕಾರಣ ಕಂಡುಬರುವುದಿಲ್ಲ.

ಹಾರ್ಮೋನು 

ಹಾರ್ಮೋನು ಏರುಪೇರಿನಿಂದಾಗಿ ಋತುಚಕ್ರ ಏರುಪೇರಾಗಿ ಆದು ಗರ್ಭಕೋಶದ ಪದರಿನ ಮೇಲೆ ದುಷ್ಪರಿಣಾಮ ಉಂಟಾಗಿ ರಕ್ತಸ್ರಾವಕ್ಕೆ ಕಾರಣವಾಗಬಹುದು. ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೊಮ್ ಇದ್ದಾಗ, ಥೈರಾಯ್ಡ್ ಸಮಸ್ಯೆ ಇದ್ದಾಗ ಕೂಡ ಹೀಗಾಗಬಹುದು. ಕೆಲವರಿಗೆ ಋತುಚಕ್ರ ಪ್ರಾರಂಭ ಮತ್ತು ನಿಲ್ಲುವ ಸಮಯದಲ್ಲೂ ರಕ್ತಸ್ರಾವ ಆಗಬಹುದು.

ಗರ್ಭಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು

ಫೈಬ್ರಾಯ್ಡ್ ಗೆಡ್ಡೆಗಳು (ಕ್ಯಾನ್ಸರ್ ರಹಿತ) ಇದ್ದರೂ ಹೀಗಾಗಬಹುದು. (ಫೈಬ್ರಾಯ್ಡ್ ಪಾಂಪ್ಲೆಟ್ ನೋಡಿ.)

ಗರ್ಭಕೋಶದ ಒಳಭಾಗದಲ್ಲಿ ದುರ್ಮಾಂಸ (ಎಂಡೊಮೆಟ್ರಿಯಲ್ ಪಾಲಿಪ್ಸ್) ಬೆಳೆದಿದ್ದರೂ ಹೀಗಾಗಬಹುದು.

ಗರ್ಭಕೋಶದಲ್ಲಿ ಊತ (ಅಡಿನೋಮಯೋಸಿಸ್) ಇದ್ದರೂ ಕೂಡ ಹೀಗಾಗಬಹುದು.

ಗರ್ಭಕೋಶದ ಪದರಿನ ಮೇಲೆ ಕ್ಯಾನ್ಸರ್ ಅಥವಾ ಕ್ಯಾನ್ಸರ್’ಪೂರ್ವ ಲಕ್ಷಣಗಳು ಗೋಚರಿಸಿದಾಗಲೂ ಹೀಗಾಗಬಹುದು.  ಈ ಕೆಳಕಂಡ ಮಹಿಳೆಯರಲ್ಲಿ ಅದರ ಪ್ರಮಾಣ ಹೆಚ್ಚಿಗೆ ಇರುತ್ತದೆ.

೪೫ ಮೀರಿದ ಮಹಿಳೆಯರಲ್ಲಿ

೯೦ ಕಿಲೋಗೂ ಹೆಚ್ಚಿನ ತೂಕ ಹೊಂದಿದವರಲ್ಲಿ

ಮಕ್ಕಳು ಆಗದೇ ಇರುವ ಮಹಿಳೆಯರಲ್ಲಿ

ಕುಟುಂಬದಲ್ಲಿ ಗರ್ಭಕೋಶದ ಕ್ಯಾನ್ಸರ್ ಇತಿಹಾಸ ಹೊಂದಿರುವವರಲ್ಲಿ.

ರಕ್ತ ಕುರಿತಾದ ಸಮಸ್ಯೆಗಳು

ರಕ್ತ ತೆಳ್ಳಗಾಗಿಸಲು ತೆಗೆದುಕೊಳ್ಳುವ ಕೆಲವು ಬಗೆಯ ಔಷಧಿಗಳಿಂದಲೂ ರಕ್ತಸ್ರಾವ ಉಂಟಾಗಬಹುದು ಹೀಗಿದ್ದಾಗ ದೇಹದ ಬೇರೆ ಭಾಗದಲ್ಲಿ ರಕ್ತಸ್ರಾವ ಆಗುತ್ತಿದ್ದರೂ ಕೂಡ ಅದು ಬೇಗ ನಿಯಂತ್ರಣಕ್ಕೆ ಬರುವುದಿಲ್ಲ.

ಅತಿರಕ್ತಸ್ರಾವದಿಂದ ಏನೇನು ಸಮಸ್ಯೆ ಆಗಬಹುದು?

ಕೌಟುಂಬಿಕ ಹಾಗೂ ಇತರೆ ಚಟುವಟಿಕೆಗಳಿಗೆ  ತೊಂದರೆ ಆಗಬಹುದು. ಸ್ಯಾನಿಟರಿ ಪ್ಯಾಡ್’ಗಳನ್ನು ಕೊಂಡುಕೊಳ್ಳಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ರಕ್ತಹೀನತೆ ಉಂಟಾಗಿ ಅತಿಯಾಗಿ ಸುಸ್ತು ಕಾಡುತ್ತದೆ.

ಏನೇನು ಪರೀಕ್ಷೆ ಬೇಕಾಗಬಹುದು?

ಅತಿರಕ್ತಸ್ರಾವದ ಸಮಸ್ಯೆಗೆ ನಿರ್ದಿಷ್ಟ ಪರೀಕ್ಷೆ ಇಲ್ಲವಾದುದರಿಂದ ವೈದ್ಯರು ಹಲವು ಪರೀಕ್ಷೆ ಮಾಡಿಸಲು ಹೇಳುತ್ತಾರೆ.

Leave a Comment