ಉಸಿರಿರುವತನಕ ಕಲಿಕೆ ನಿಲ್ಲಬಾರದು:ಡಾ|| ಸಹಸ್ರಬುದ್ಧೆ

ಬಳ್ಳಾರಿ, ಮೇ.14: ಕೊನೆಯ ಉಸಿರಿರುವತನಕ ಕಲಿಕೆ ನಿಲ್ಲಿಸಬಾರದು ಇಂದು ಜ್ಞಾನವು ಇಂಟರ್ ನೆಟ್ ಮೂಲಕ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳಲ್ಲಿ ದೊರೆಯುತ್ತಿದೆ. ಅದನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಇತ್ತೀಚಿನ ಸಂಗತಿಗಳೊಂದಿಗೆ ಸದಾ ನೀವು ನವೀಕರಿಸಿಕೊಳ್ಳುತ್ತಿರಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಪ್ರೊ|| ಅನಿಲ್ ಡಿ ಸಹಸ್ರಬುದ್ಧೆ ಹೇಳಿದರು.

ಅವರಿಂದು ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು.

ಜಗತ್ತಿನ ಇತರೇ ರಾಷ್ಟ್ರಗಳಿಗಿಂತ ಯುವ ಶಕ್ತಿಯಲ್ಲಿ ಭಾರತ ಮುಂದಿದ್ದು ಉನ್ನತ ಶಿಕ್ಷಣದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದ್ದು ಸಮಾನತೆ ಮತ್ತು ಗುಣಮಟ್ಟದ ಶಿಕ್ಷಣದ ಯೋಜನೆಹೊಂದಬೇಕಿದೆ ಪ್ರತಿಯೊಬ್ಬ ಪದವೀಧರರಿಗೆ ಉದ್ಯೋಗ ಸಿಗುವ ಶಿಕ್ಷಣ ನೀಡುವುದು ವಿವಿಗಳ ಗುರಿಯಾಗಬೇಕೆಂದರು. ಉತ್ತಮ ಸಂವಹನ ಕೌಶಲ್ಯ, ಶಿಸ್ತು, ಸಮಸ್ಯೆ ಪರಿಹಾರ ಮಾಡುವ ಸಾಮರ್ಥ್ಯ, ನಿರ್ಣಾಯಕ ಚಿಂತನೆ ವಿಶ್ಲೇಷಣಾತ್ಮಕ ಸಾಮರ್ಥ್ಯದ ಶಿಕ್ಷಣ ಇನ್ನು ದೊರೆಯುತ್ತಿಲ್ಲ. ಇದುವೆ ಶಿಕ್ಷಣದ ಬಹುದೊಡ್ಡ ತೊಡಕಾಗಿದೆ. ಅದಕ್ಕಾಗಿ ಕಲಿಕೆ ಸಂದರ್ಭದಲ್ಲಿಯೇ ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆ ನಡುವೆ ಸಂವಹನ ಮತ್ತು ಸಹಭಾಗೀತ್ವದ ಕಲಿಕೆ ಆಗಬೇಕು. ಆ ಮೂಲಕ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸ್ಮಾರ್ಟ್ ಆಫ್ ಇಂಡಿಯಾ ಯೋಜನೆಗಳ ಪ್ರಯೋಜನವಾಗಲಿದೆಂದರು.

ಇಂದು ಉಪಕರಣಗಳು ಮತ್ತು ತಂತ್ರಗಳ ಬಳಕೆ ಇನ್ನೂ ಸಮರ್ಪಕವಾಗಿಲ್ಲ. ಅದಕ್ಕಾಗಿ ನಿರಂತರ ಕಲಿಕೆ ಮೂಲಕ ತಂತ್ರಜ್ಞಾನ ಸಂಪೂರ್ಣ ಬಳಕೆಗೆ ವಿವಿಗಳು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸಿಕೊಡಬೇಕು, ಜಗತ್ತಿನಲ್ಲಿ ಕ್ರಾಂತಿ ಸೃಷ್ಟಿಸಿರುವ ಆರ್ಥಿಕ ಬೆಳವಣಿಗೆಗೆ ಜ್ಞಾನವೇ ಮೂಲಾಧಾರವಾಗಿದೆ. ಅದಕ್ಕಾಗಿ ನೀವು ಕನಸು ಮತ್ತು ಆಕಾಂಕ್ಷೆಗಳನ್ನು ಕೈಬಿಡದೆ ಯಶಸ್ಸನ್ನು ಪಡೆಯಬೇಕು, ನಿಮ್ಮ ಗುರಿಯನ್ನು ಉತ್ಸಾಹ ಮತ್ತು ಬದ್ಧತೆಯೊಂದಿಗೆ ಅನುಸರಿಸಿ ಉತ್ತಮ ಆರೋಗ್ಯದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ನಿಮ್ಮ ದೇಹ ಆತ್ಮಗಳಲ್ಲಿ ಸಾಮರಸ್ಯ ಮತ್ತು ಪರಿಪೂರ್ಣತೆ ಪಡೆಯಿರಿ ಆಗ ಮಾತ್ರ ನಿಮ್ಮ ಕನಸುಗಳು ಈಡೇರಲು ಸಾಧ್ಯ ಈ ದೇಶದ ಅಭಿವೃದ್ಧಿ ಹೊಂದಲು ನಿಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಹಾರೈಸಿದರು.

 

Leave a Comment