‘ಉರಿ’ ಬಳಿಕ ಬಾಲಾಕೋಟ್ ಸರ್ಜಿಕಲ್ ದಾಳಿ: ಘಟಾನುಘಟಿ ನಿರ್ಮಾಪಕರಿಂದ ಚಿತ್ರಕ್ಕೆ ಸಿದ್ಧತೆ

ಇತ್ತೀಚೆಗೆ ಸರ್ಜಿಕಲ್ ದಾಳಿ ಆಧರಿಸಿದ ‘ಉರಿ’ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಈಗ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಿ 300ಕ್ಕೂ ಅಧಿಕ ಭಯೋತ್ಪಾದಕರನ್ನು ಹತ್ಯೆ ಮಾಡಿದ ಚಿತ್ರ ತಯಾರಾಗಲಿದೆ.

ಬಾಲಿವುಡ್‌ನ ಖ್ಯಾತ ನಿರ್ಮಾಪಕ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಟೀ – ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್, ಕಿರುತೆರೆಯ ನಿರ್ಮಾಪಕರಾದ ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಒಗ್ಗೂಡಿ, ಜೈಷ್ ಇ ಮಹ್ಮದ್ ಉಗ್ರ ಸಂಘಟನೆಯ ಮೇಲೆ ಭಾರತೀಯ ವಾಯುಪಡೆ ಫೆಬ್ರವರಿ 26 ರಂದು ದಾಳಿ ನಡೆಸಿ, ಧ್ವಂಸ ಮಾಡಿದ ಘಟನೆಯನ್ನು ತೆರೆಯ ಮೇಲೆ ಮರುಚಿತ್ರೀಕರಿಸಲು ಮುಂದಾಗಿದೆ.

ಎಲ್ಲಾ ಅಂದುಕೊಂಡಂತೆ ಆದರೆ, ಈ ವರ್ಷದ ಅಂತ್ಯದಲ್ಲೇ ಬಾಲಾಕೋಟ್ ಮೇಲೆ ದಾಳಿ ನಡೆಸಿ, ಉಗ್ರರನ್ನು ಮಟ್ಟಹಾಕಿದ ಚಿತ್ರ ಸೆಟ್ಟೇರಲಿದೆ.
ಚಿತ್ರವನ್ನು ಭಾರತೀಯ ವಾಯುಪಡೆಗೆ ಗೌರವ ಸಲ್ಲಿಸಲು ನಿರ್ಮಾಣ ಮಾಡಲಾಗುತ್ತಿದೆ.

ಚಿತ್ರದಿಂದ ಬರುವ ಬಹುಪಾಲು ಆದಾಯವನ್ನು ಸಶಸ್ತ್ರ ಪಡೆಗಳ ಕ್ಷೇಮಾಭಿವೃದ್ಧಿ ನಿಧಿಗೆ ನೀಡಲು ನಿರ್ಮಾಪಕರು ಮುಂದಾಗಿದ್ದಾರೆ.

ಈಗಾಗಲೇ ಚಿತ್ರಕ್ಕಾಗಿ ಸಿದ್ಧತೆಗಳು ಮತ್ತು ಸಂಶೋಧನೆಗಳನ್ನು ಈ ತಂಡ ಆರಂಭಿಸಿದ್ದು, ಶೀಘ್ರ ಚಿತ್ರೀಕರಣ ಮಾಡಲು ಮುಂದಾಗಿದೆ. ಒಂದು ಬಾರಿ ಕಥೆ ಅಂತಿಮವಾದ ಬಳಿಕ ಚಿತ್ರಕ್ಕೆ ತಾರಾಗಣ ಸೇರಿದಂತೆ, ಇನ್ನುಳಿದ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಳ್ಳಲು ನಿರ್ಮಾಪಕರಾದ ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಮಹಾವೀರ್ ಜೈನ್ ಹಾಗೂ ಅಭಿಷೇಕ್ ಕಪೂರ್ ಮುಂದಾಗಿದ್ದಾರೆ.

ಘಟಾನುಘಟಿ ನಿರ್ಮಾಪಕರು ಒಟ್ಟುಗೂಡಿ ‘ಸರ್ಜಿಕಲ್ ಸ್ಟ್ರೈಕ್ – 2.0’  ಚಿತ್ರ ನೀಡಲು ಮುಂದಾಗಿದ್ದು, ಈ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು, ಪಾಕಿಸ್ತಾನದ ಏರ್ ಫೋರ್ಸ್ ಎಫ್ – 16 ಹೊಡೆದುರುಳಿಸಿದ ವಿಷಯ ಸೇರಿದಂತೆ, ಹತ್ತು ಹಲವು ವಿಷಯಗಳು ಅಡಕವಾಗಿರಲಿವೆ.

‘ಉರಿ’ ಚಿತ್ರದ ಬಳಿಕ ಬಾಲಾಕೋಟ್‌ನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಆಧರಿಸಿ ಬಾಲಿವುಡ್‌ನ ಖ್ಯಾತ ನಿರ್ಮಾಪಕರು, ‘ಸರ್ಜಿಕಲ್ ಸ್ಟ್ರೈಕ್ 2.0’ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಚಿತ್ರ ಈ ವರ್ಷದ ಮಧ್ಯಭಾಗದಿಂದ ಆರಂಭವಾಗುವ ಸಾಧ್ಯತೆ ಇದೆ.

Leave a Comment