ಉಮೇಶ್ ಕತ್ತಿಗೂ ಮಂತ್ರಿಗಿರಿ ಸಿಗಬೇಕು – ರಮೇಶ್ ಜಾರಕಿಹೊಳಿ

ಬೆಂಗಳೂರು.ಫೆ.14. ಕಮಲ ಪಕ್ಷದ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೂ ಸಚಿವಸ್ಥಾನ ಸಿಗಬೇಕೆಂದು ನನ್ನ ಆಶಯ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಉಮೇಶ್ ಕತ್ತಿ ಬಹಳ ಹಿರಿಯರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಶಯ. ಅವರಿಗೂ ಸಚಿವ ಸ್ಥಾನ ಸಿಕ್ಕರೆ ಬೆಳಗಾವಿಗೆ ಮತ್ತೊಂದು ಸ್ಥಾನ ಲಭ್ಯವಾದಂತಾಗುತ್ತದೆ. ಇದು ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು. ಇನ್ನು ತಾವು ಬೆಳಗಾವಿ ಜಿಲ್ಲಾ ಉಸ್ತುವಾರಿಯೇ ಬೇಕು ಅಂತಾ ಕೇಳಿಲ್ಲ. ಇದೇ ಕಾರು, ಇದೇ ಕೊಠಡಿ ಬೇಕು ಅಂತಾನೂ ಕೇಳಿಲ್ಲ. ಸಿಎಂ ಯಾವುದನ್ನ ಕೊಟ್ಟಿದ್ದಾರೋ ಅದನ್ನ ತೆಗೆದುಕೊಂಡಿದ್ದೇನಷ್ಟೇ ಎಂದು ಸ್ಪಷ್ಟಪಡಿಸಿದರು.

ಸತೀಶ್ ಜಾರಕಿಹೊಳಿ ದುರುದ್ದೇಶದೊಂದಿಗೆ ಮಾತನಾಡುವುದನ್ನು ಬಿಡಲಿ. ಅವರು ತಾಳ್ಮೆಯಿಂದ ಒಳ್ಳೆಯ ತನದಿಂದ ನಡೆದರೆ ಅವರಿಗೆ ಕಾಂಗ್ರೆಸ್ನಲ್ಲಿ ಉತ್ತಮ ಭವಿಷ್ಯ ಇದೆ ಎಂದು ಪುನರುಚ್ಚರಿಸಿದರು…

Leave a Comment