ಉಪ- ಚುನಾವಣೆ 7 ಕ್ಷೇತ್ರಗಳಲ್ಲಿ ಕ.ರಾ.ಸ ಸ್ಪರ್ಧೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಅ ೨೧- ಡಿ. 5 ರಂದು ನಡೆಯುವ ಉಪ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಗಳು 7 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಮತ್ತು ಕರ್ನಾಟಕದ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸ್ಥಾಪಿಸಲ್ಪಟ್ಟಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟ್ರಾಚಾರದ ವಿರುದ್ಧ ಹೋರಾಟ ಮಾಡಿ ಜನಪರ ಆಡಳಿತ ನೀಡುವ ಆಶಯ ಹೊಂದಿದೆ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಮಹಾಲಕ್ಷ್ಮೀಲೇಔಟ್ ಕ್ಷೇತ್ರದಲ್ಲಿ ಪಿ. ಗಿರೀಶ್, ಕೆ.ಆರ್.ಪುರಂ ಕ್ಷೇತ್ರದಿಂದ ಜಗದೀಶ್, ಹಿರೇಕೆರೂರು ಕ್ಷೇತ್ರದಿಂದ ಜಯದೇವ ಕೆರೋಡಿ, ವಿಜಯನಗರ ಕ್ಷೇತ್ರದಿಂದ ಗಣೇಶ್, ಕಾಗವಾಡ ಕ್ಷೇತ್ರದಿಂದ ಪ್ರಶಾಂತ್ ಭಜಂತ್ರಿ, ಕೆ.ಆರ್.ಪೇಟೆ ಕ್ಷೇತ್ರದಿಂದ ಕೆ.ಎನ್. ಶಂಕರೇ ಗೌಡ, ಹುಣಸೂರು ಕ್ಷೇತ್ರದಿಂದ ತಿಮ್ಮಾ ಬೋವಿ, ಸ್ಪರ್ಧಿಸಲಿದ್ದಾರೆ.
ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಸದ್ಯದಲ್ಲಿಯೇ ಅವರ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Leave a Comment