ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಅಪಾಯವಿಲ್ಲ : ಬಿಜೆಪಿಗೆ ಅಭಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ

ಕಲಬುರ್ಗಿ,ನ 11- ಉಪಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಬಿಜೆಪಿ ಸರ್ಕಾರಕ್ಕೆ ಅಪಾಯ ಎದುರಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಿಜೆಪಿ ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಯನ್ನು ತಳ್ಳಿಹಾಕಿದ ದೇವೇಗೌಡರು,ಸದ್ಯದ ಪರಿಸ್ಥಿತಿ ನೋಡಿದರೆ ಉಪ ಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ರಕ್ಷಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗಿದೆ ಎಂಬ ಸಂದೇಶ ನೀಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದ್ಯಕ್ಕೆ ಒಂದಾಗಲು ಸಾಧ್ಯವಿಲ್ಲ.ಹೀಗಾಗಿ ಬಿಜೆಪಿಗೆ ಉಪಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆ ದರೂ ಸರ್ಕಾರ ಪತನವಾಗುವು ದಿಲ್ಲ.ಬಿಜೆಪಿ ಪಕ್ಷದೊಳಗೆ ಆಂತರಿಕ ಸಮಸ್ಯೆ ಉಲ್ಬಣ ವಾಗದಿದ್ದರೆ ಮಧ್ಯಂತರ ಚುನಾವಣೆ ಎದುರಾಗುವ ಸಂಭವ ಇಲ್ಲ.ಉಪ ಚುನಾವಣೆಯಲ್ಲಿ ಎಲ್ಲಾ15 ಕ್ಷೇತ್ರ ಗಳಿಗೂ ಪಕ್ಷದ ಅಭ್ಯರ್ಥಿ ಹಾಕಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.

ಉಪಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಐದಾರು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲ ಪೈ ಪೋಟಿ ನೀಡಬಲ್ಲದು.ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಉಳಿದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುತ್ತೇವೆ.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪಕ್ಷದ ಶಕ್ತಿ ಇರುವ ಕಡೆ ಸ್ಪರ್ಧಿಸುತ್ತೇವೆ ಎಂದು ಅವರು ಹೇಳಿದರು.

ನಮ್ಮ ಪಕ್ಷಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಶಕ್ತಿ ಹೊಂದಿಲ್ಲ ಎಂಬುದ ನ್ನು ಒಪ್ಪಿಕೊಳ್ಳುತ್ತೇನೆ.ಆದರೆ ನನಗೆ ಈಗ ಪಕ್ಷ ಕಟ್ಟಬೇಕು,ಸಂಘಟನೆ ಮಾಡಬೇಕೆಂಬ ಹುಚ್ಚಿದೆ.ಉಪಚುನಾವಣೆಯಲ್ಲಿ ಹೋರಾಟ ಮಾಡುವುದು ನಿಶ್ಚಿತ ಎಂದು ಹೇಳುವ ಮೂಲ ಕ ಉಪ ಚುನಾವಣೆಯಲ್ಲಿ ಪೈಪೋಟಿ ನೀಡಲು ಸಿದ್ಧ ಎಂಬ ಸಂದೇಶ ನೀಡಿದರು.

2018ರ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯ ಮಂತ್ರಿ ಮಾಡಲು ಹೇಳಿದೆ.ಆದರೆ ಸೋನಿಯಾ ಗಾಂಧಿ ಖರ್ಗೆ ಅವರು ಬೇಡ ಎಂದು ಹೇಳಿದರು.ಹೀಗಾಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಆಯ್ಕೆಯಾದರು.ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಅವರು ಪ್ರಮುಖ ನಾಯಕರನ್ನು ತಮ್ಮ ಬಳಿ ಕಳುಹಿಸಿ ನಿಮ್ಮ ಮಗ ಮುಖ್ಯಮಂತ್ರಿಯಾಗಲಿ ಎಂದು ಹೇಳಿದರು.ವಿಪರ್ಯಾಸವೆಂದರೆ ಹೈಕಮಾಂಡ್ ಒಪ್ಪಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಖರ್ಗೆ ಹೇಳಿದ್ದರು ಎಂದು ಹೇಳುವ ಮೂಲಕ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ಕಾಂಗ್ರೆಸ್ ನಾಯಕರೇ ತಪ್ಪಿಸಿದರು ಎಂದು ಹೊಸ ವಿವಾದ ಹುಟ್ಟು ಹಾಕಿದರು.

ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಹೋಗಬೇಕು ಎಂದು ಕಲಬುರಗಿಗೆ ಬಂದಿದ್ದೇನೆ. ಇಲ್ಲಿ ಒಂದು ಕಾಲದಲ್ಲಿ ನಮ್ಮ ಶಕ್ತಿ ಬಹಳ ಇತ್ತು.ದುರಂತ ಅಂದರೆ ಈಗ ನಮ್ಮ ಶಕ್ತಿ ಕುಂದಿ ದೆ.ಹೀಗಾಗಿ ಜನರು ಪಕ್ಷಕ್ಕೆ ಶಕ್ತಿ ಕೊಟ್ಟರೆ ಮತ್ತೆ ಪಕ್ಷ ಕಟ್ಟುತ್ತೇನೆ.ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಮ್ಮ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ.ನಾನು ಈಗ ಸೋತಿದ್ದೇನೆ.13ನೇ ಲೋಕಸಭಾ ಚುನಾವಣೆಯಲ್ಲಿ ನಿಲುವುದಿಲ್ಲ ಎಂದು ಹೇಳಿ ಹೊರಗಡೆ ಬಂದಿದ್ದೆ.ಆದರೆ ವಿಧಿ ಎಳೆದು ಕೊಂಡು ತುಮಕೂರಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸುವಂತಾಯಿತು.ಆ ಮೂಲಕ ಮೂರ ನೇ ಸೋಲು ಕಂಡೆ,ಸೋತರೂ ಈ ವಯಸ್ಸಿನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದರು.

ನಮ್ಮ ಹೋರಾಟದಿಂದ ಜೆಡಿಎಸ್ ಪಕ್ಷ ಉಳಿದಿದೆ ಮತ್ತು ಬೆಳೆದಿದೆ.ಹೀಗಾಗಿ ಹೋರಾಡಲು ಇನ್ನಷ್ಟು ಶಕ್ತಿ ಕೊಡು ಎಂದು ದತ್ತಾತ್ರೆಯನ ಪಾದದ ಮೊರೆ ಹೋಗಿದ್ದೇನೆ.ಉಪಚುನಾವಣೆ ಯಲ್ಲಿ ಎಲ್ಲ ಸ್ಥಾನ ಗಳಿಗೂ ಅಭ್ಯರ್ಥಿ ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಎಲ್ಲ ಕಡೆ ನಮಗೆ ಪ್ರಬಲ ಅಭ್ಯರ್ಥಿಗಳಿಲ್ಲ.ಆದರೂ ಅಭ್ಯರ್ಥಿಗಳನ್ನು ಕಣಕ್ಕಿಳಿಸು ತ್ತೇವೆ,ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಮತದಾರರು ಅದನ್ನು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್,ಬಿಜೆಪಿ ಎರಡೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮಗಿಂತ ಮುಂದಿದ್ದಾರೆ ಎಂದರು.
ಮೈತ್ರಿ ಸರ್ಕಾರ ಪತನವಾಗಲು ಕಾರಣವೇನು ಏನು ಎಂದು ಈಗ ವಿಶ್ಲೇಷಣೆ ಮಾಡುವುದಿಲ್ಲ. ಬಿಜೆಪಿ ಪಕ್ಷ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ.5-6 ತಿಂಗಳು ಅಧಿಕಾರಕ್ಕಾಗಿ ಇವರು ಬಂದಿದ್ದಾರೆ.ಸದ್ಯ ಬಿಜೆಪಿಯ 106 ಶಾಸಕರಿದ್ದಾರೆ.ನಾನು ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗುವುದಿಲ್ಲ.ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗುವುದಿಲ್ಲ.ಈಗಲೇ ಚುನಾವಣೆ ನಡೆದರೆ ನಾವು ಅಧಿಕಾರಕ್ಕೆ ಬರುವುದಿಲ್ಲ.ಚುನಾವಣೆ ನಡೆದರೆ ಕಾಂಗ್ರೆಸ್ ಸರ್ಕಾರ ಅಧಿಕಾರ ಕ್ಕೆ ಬರುತ್ತದೆ. ಸಿದ್ದರಾಮಯ್ಯಗೆ ಆ ವರ್ಚಸ್ಸು ಇದೆ ಎಂದು ಲೇವಡಿ ಮಾಡಿದರು.

Leave a Comment