ಉಪ ಚುನಾವಣೆಯಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ: ದೇವೇಗೌಡ

 

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ನ.11- ರಾಜ್ಯದಲ್ಲಿ ನಡೆಯಲಿರುವ 15 ವಿಧಾನ ಸಭಾ ಮತಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಹೇಳಿದರು.

ನಗರದ ಐವಾನ ಇ ಶಾಹಿ ಅತಿಥಿಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ 4-5 ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆಯನ್ನು ಜೆಡಿಎಸ್ ಪಕ್ಷ ನೀಡಲಿದ್ದು, ರಾಜ್ಯದ ಸಮ್ಮೀಶ್ರ ಸರ್ಕಾರ ಫತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಅವರು ಹೇಳಿದರು.

ಯಾರ ಮನೆಯ ಬಾಗಿಲಿಗೆ ನಾವು ಹೋಗುವುದಿಲ್ಲ ಏನಿದ್ದರಿಗ ಪಕ್ಷದ ಬಲವರ್ಧನೆ ಮತ್ತು ಸಂಘಟನೆಗಾಗಿ ಸಮಯವನ್ನು ಮೀಸಲಿಡಲಾಗುವುದೆಂದ ಅವರು, ಒಂದು ಕಾಲದಲ್ಲಿ ಹೈಕ ಭಾಗದಲ್ಲಿ ನಮ್ಮ ಪಕ್ಷ ಗಟ್ಟಿಯಾಗಿತ್ತು ಇಲ್ಲಿ ಪುನರ ಆ ಶಕ್ತಿಯನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ತಾವು ಈ ಪ್ರವಾಸ ಕೈಗೊಂಡಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಕರ್ತರ ಸಹಕಾರ ಮತ್ತು ಬೆಂಬಲದೊಂದಿಗೆ ಜೆಡಿಎಸ್ ಪಕ್ಷವನ್ನು ಥಳಮಟ್ಟದಲ್ಲಿ ಗಟ್ಟಿಗೊಳಿಸಲು ಪಕ್ಷದ ಪ್ರಮುಖರ ಸಭೆಯನ್ನು ನಡೆಸುತ್ತಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪಾ ಕಾಶಂಪೂರ, ಶಾಸಕ ನಾಗನಗೌಡ ಕಂದಕೂರ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಹಲವರಿದ್ದರು.

@12bc = ಖರ್ಗೆಯನ್ನು ಸಿಎಂ ಮಾಡಲು ನಿರಾಕರಿಸಿದ ಹೈಕಮಾಂಡ

ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಯ ವೇಳೆ ತಮ್ಮನ್ನು ಅಂದು ಕಾಂಗ್ರೆಸ್ ಹೈಕಮಾಂಡ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಂಪರ್ಕಿಸಿ ನನ್ನ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದಾಗಿ ಹೇಳಿದಾಗ ನಾನಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡುವಂತೆ ಹೇಳಿದ್ದೆ ಅದಕ್ಕವರು ಒಪ್ಪಿರಲಿಲ್ಲ.

ಎಚ್.ಡಿ.ದೇವೇಗೌಡ

ಮಾಜಿ ಪ್ರಧಾನಿಗಳು

..

Leave a Comment