ಉಪ ಕಾಲುವೆಗಳಿಂದ ದೇವಸಮುದ್ರ ಬಳಿ ಪೈಪ್‍ಗಳ ತೆರವು.

ಕಂಪ್ಲಿ:ಜು.25. ತಾಲೂಕಿನ ದೇವಸಮುದ್ರ ಬಳಿಯ ವಿತರಣೆ ಕಾಲುವೆಯಿಂದ ನೀರನ್ನು ಕದಿಯಲು ಹಾಕಿಕೊಂಡ ಅನಧಿಕೃತ ಪೈಪ್ಗಳನ್ನು ಹೊಸಪೇಟೆ ಉಪ ವಿಭಾಗದ ಸಹಾಯಕ ಆಯುಕ್ತ ಪಿ.ಎನ್.ಲೋಕೋಶ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಇಂದು ಬೆಳಗಿನ ಜಾವ ತೆರವುಗೊಳಿಸಿದ್ದಾರೆ.

ಈ ಸಂಧರ್ಭದಲ್ಲಿ ರೈತರು ಇಲ್ಲಿನ ಜಮೀನನ್ನು ಆಯಕಟ್ಟಿಗೆ ಸೇರಿಸಬೇಕು. ಮತ್ತು ಇಲ್ಲವೇ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಸಬೇಕೆಂದು ಮನವಿ ಮಾಡಿದರು. ಆದರೆ ಎಸಿ ಪಿ.ಎನ್.ಲೋಕೇಶ್ ಅವರು. ಮೇಲ್ಭಾಗದಲ್ಲಿ ಅಕ್ರಮವಾಗಿ ನೀವು ನೀರು ಪಡೆಯುತ್ತಿರುವುದರಿಂದ ಕೆಳ ಭಾಗಕ್ಕೆ ನೀರು ಬರುತ್ತಿಲ್ಲವೆಂದು ರೈತರ ದೂರಿನ ಮೇರೆಗೆ ಪೈಪ್ಗಳನ್ನು ತೆರವುಗೊಳಿಸುತ್ತಿದೆ, 40 ಅನಧಿಕೃತ ಪೈಪ್ ಗಳಿರುವ ಮಾಹಿತಿ ಇದ್ದು, ಸಂಜೆ ಒಳಗೆ ಎಲ್ಲಾ ಅಕ್ರಮ ಪೈಪ್ ಗಳನ್ನು ತೆರವುಗೊಳಿಸಲಾಗುವುದು. ಮತ್ತೊಮ್ಮೆ ಅನಧಿಕೃತ ಪೈಪ್ಗಳನ್ನು ಅಳವಡಿಸಿಕೊಂಡರೆ, ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಎಂ.ರೇಣುಕಾ, ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಸಿಪಿಐ ಡಿ.ಹುಲುಗಪ್ಪ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Comment