ಉಪ್ಪಾರ ವಿದ್ಯಾರ್ಥಿಗಳಿಗೆ ಪರೀಕ್ಷೆ ಕಾರ್ಯಾಗಾರ 23 ರಂದು

ಕಲಬುರಗಿ ಜು 17:ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಐಎಎಸ್ ಐಪಿಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ಧತೆಯ ತರಬೇತಿ ಕಾರ್ಯಾಗಾರವನ್ನು ಜುಲೈ 23 ರಂದು ನಗರದ ಜೇವರಗಿ ರಸ್ತೆ ಕೆಪಿಟಿಸಿಎಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಡಿ ವೈ ಉಪ್ಪಾರ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರತಿಷ್ಠಾನವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎ.ವಿ ಲೋಕೇಶಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಯುಸಿ ಡಿಪ್ಲೋಮಾ ಮತ್ತು ಪದವಿಯಲ್ಲಿ ತೇರ್ಗಡೆಯಾದ ಉಪ್ಪಾರ ಸಮಾಜದ ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವದು .ಸಮಾರಂಭದ ಸಾನಿಧ್ಯವನ್ನು ಜಗದ್ಗುರುಗಳಾದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ವಹಿಸುವರು. ಹೈಕೋರ್ಟ ನಿವೃತ್ತ ನ್ಯಾಯಾಧೀಶ ಎಚ್ ಬಿಲ್ಲಪ್ಪ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಜಗನ್ನಾಥ ಸಾಗರ ಡಿ ಅವರು ಕಾರ್ಯಕ್ರಮ ಉದ್ಘಾಟಿಸುವರು.ಪ್ರತಿಷಾನದ ಅಧ್ಯಕ್ಷ ಶರಣ್ ಬಂಡಿ ಅಧ್ಯಕ್ಷತೆ ವಹಿಸುವರು.ಸಮಾಜದ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ಪ್ರೊ ವೆಂಕಟೇಶ ನಿರಡಗಿ, ನಿಂಗಣ್ಣ ಹೊರಪೇಟೆ,ಸಿದ್ದು ಗೌಂಡಿ, ಸೇರಿದಂತೆ ಹಲವರಿದ್ದರು

Leave a Comment