ಉಪ್ಪಳ ಅಪಘಾತ ಪ್ರಕರಣ

ಗಾಯಗೊಂಡಿದ್ದ ಮಗು ಮೃತ್ಯು
ಮಂಗಳೂರು, ಜು.೧೧- ರಾಷ್ಟ್ರೀಯ ಹೆದ್ದಾರಿ ೬೬ರ ಉಪ್ಪಳ ಸಮೀಪದ ನಯಬಝಾರ್‌ನಲ್ಲಿ ಸೋಮವಾರ ಬೆಳಗ್ಗೆ ಲಾರಿ ಮತ್ತು ತೂಫಾನ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟು, ೧೨ ಮಂದಿ ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಪೈಕಿ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದೆ. ಮೃತ ಮಗುವನ್ನು ಅಪಘಾತದಲ್ಲಿ ಮೃತಪಟ್ಟಿದ್ದ ನಸೀಮಾ ಎಂಬವರ ಪುತ್ರಿ ಫಾತಿಮಾ(೧ ವರ್ಷ ೬ ತಿಂಗಳು) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಉಳಿದ ೧೧ ಮಕ್ಕಳನ್ನು ವಾರ್ಡ್‌ಗೆ ದಾಖಲಿಸಲಾಗಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರ ಮೂಲ ತಿಳಿಸಿವೆ. ಸಚಿವ ಯುಟಿ ಖಾದರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

Leave a Comment