ಉಪಹಾರ್ ದುರಂತ : ಪರಿಹಾರತ್ಮಾಕ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಫೆ 20 -ದೆಹಲಿಯ ಉಪಹಾರ್ ಚಿತ್ರ ಮಂದಿರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಚಿತ್ರ ಮಂದಿರದ ಮಾಲೀಕರ ವಿರುದ್ಧ ಸಲ್ಲಿಸಿದ್ದ ಪರಿಹಾರತ್ಮಾಕ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಮತ್ತು ಅರುಣ್ ಮಿಶ್ರಾ ಅವರ ನ್ಯಾಯಪೀಠ ಗುರುವಾರ ಪರಿಹಾರ ಅರ್ಜಿಯನ್ನು ತಿರಸ್ಕರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಜೈಲು ಶಿಕ್ಷೆಯಿಂದ ಪಾರಾಗಲು ಇಬ್ಬರು ಕೈಗಾರಿಕೋದ್ಯಮಿಗಳಿಗೆ ದೊಡ್ಡ ಪರಿಹಾರ ದೊರಕಿದಂತಾಗಿದೆ.

ಮೂವರು ನ್ಯಾಯಾಧೀಶರ ನ್ಯಾಯಪೀಠ, ಫೆಬ್ರವರಿ 9, 2017 ರಂದು 2: 1 ಬಹುಮತದ ತೀರ್ಪಿನ ಮೂಲಕ, 78 ವರ್ಷದ ಸುಶೀಲ್ ಅನ್ಸಾಲ್ ಅವರ ” ವಯಸ್ಸಿಗೆ ಸಂಬಂಧಿಸಿದ ತೊಡಕುಗಳನ್ನು ಪರಿಗಣಿಸಿ ಅವರಿಗೆ ಶಿಕ್ಷೆಯನ್ನು ವಿಧಿಸಿತ್ತು.

ಆದರೂ ಈ ಪ್ರಕರಣದಲ್ಲಿ ಉಳಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ಸುಶೀಲ್ ಅನ್ಸಾಲ್ ಕಿರಿಯ ಸಹೋದರ ಗೋಪಾಲ್ ಅನ್ಸಾಲ್ ಗೆ ಆದೇಶಿಸಿದೆ. 23 ವರ್ಷಗಳ ಹಿಂದೆ ಸಂಭವಿಸಿದ ಚಿತ್ರ ಮಂದಿರದ ಅಗ್ನಿ ದುರಂತದಲ್ಲಿ 56 ಜನರು ಮೃತಪಟ್ಟಿದ್ದರು.

Leave a Comment