ಉಪಚುನಾವಣೆಯಲ್ಲಿ ಯಾರಿಗೆ ಬೆಂಬಲಿಸಬೇಕೆಂದು ಸಂಸದೆ ಸುಮಲತಾರಿಗೆ ಗೊತ್ತಿದೆ- ಶ್ರೀರಾಮುಲು

ಮಂಡ್ಯ : ಕೆ.ಆರ್.ಪೇಟೆ ಉಪಚುನಾವಣಾ ಅಖಾಡ ರಂಗೇರಿದ್ದು, ಸಂಸದೆ ಸುಮಲತಾ ಯಾರಿಗೆ ಬೆಂಬಲ ಕೊಡಲಿದ್ದಾರೆಂಬುದು ಕುತೂಹಲ ಮೂಡಿಸಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಸುಮಲತಾ ತಾವು ಯಾರಿಗೆ ಬೆಂಬಲ ನೀಡಬೇಕೆಂಬ ಬಗ್ಗೆ ನಿಲುವು ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದು, ಸಂಸದೆ ಸುಮಲತಾ ಅವರಿಗೆ ಯಾರಿಗೆ ಬೆಂಬಲಿಸಬೇಕೆಂದು ಗೊತ್ತಿದೆ ಎಂದು ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಂಸದೆ ಸುಮಲತಾ ಅವರೊಂದಿಗೆ ಪ್ರಧಾನಿ ಮೋದಿ, ಅಮಿತ್ ಶಾ ಚರ್ಚಿಸಿದ್ದಾರೆ. ಸುಮಲತಾ ಅವರಿಗೆ ಯಾರಿಗೆ ಬೆಂಬಲಿಸಬೇಕು, ಯಾರಿಗೆ ಬೆಂಬಲಿಸಬಾರದು ಎಂದು ಅವರಿಗೆ ಗೊತ್ತಿದೆ. ಅವರು ಈ ಭಾಗದ ನಾಯಕಿ, ಎಂಪಿ. ಕೂಡ ಆಗಿದ್ದಾರೆ. ಅವರು ತೀರ್ಮಾನ ಕೈಗೊಳ್ಳಲಿದ್ದಾರೆಂದು ಹೇಳಿದರು

Leave a Comment