ಉಪಚುನಾವಣೆಯಲ್ಲಿ ಜಯಗಳಿಸಿದರೆ ಸಿ.ಎಂ ಸ್ದಾನಕ್ಕೆ ರಾಜೀನಾಮೆ ನೀಡುವಿರಾ?:ಮುಖ್ಯಮಂತ್ರಿಗೆ ವಿ. ಶ್ರೀನಿವಾಸ್ ಪ್ರಸಾದ್ ಸವಾಲ್

ಮೈಸೂರು:ಫೆ.17- ನಂಜನಗೂಡು ಕ್ಷೇತ್ರ ಉಪಚುನಾವಣೆಯಲ್ಲಿ ನಾನು ಜಯಗಳಿಸಿದರೆ ನೀವು ನಿಮ್ಮ ಮುಖ್ಯಮಂತ್ರಿ ಸ್ದಾನಕ್ಕೆ ರಾಜೀನಾಮೆ ನೀಡುವಿರಾ? ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಎಸೆದಿದ್ದಾರೆ.
ಅವರಿಂದು ನಗರದ ಒಡನಾಡಿ ಸಂಸ್ಧೆಯಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೂಂದಿಗೆ ಮಾತನಾಡುತ್ತಾ ಈ ಚುನಾವಣೆ ಏನಿದ್ದರೂ ನಿಮ್ಮ ಹಾಗೂ ನನ್ನ ನಡುವಿನ ನೇರ ಸ್ಪರ್ಧೆಯಗಿದೆ ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿರುವುದರಿಂದ ಇದರಲ್ಲಿ ನಾನು ಸೋತರೆ ರಾಜಕೀಯದಿಂದ ನಿವೃತ್ತನಾಗುತೇನೆ. ಒಂದು ವೇಳೆ ನಾನು ಗೆದ್ದರೆ ನಿಮ್ಮ ಮುಖ್ಯಮಂತ್ರಿ ಸ್ದಾನಕ್ಕೆ ರಾಜೀನಾಮೆ ನೀಡುವಿರಾ? ಎಂದು ನೇರ ಸವಾಲು ಎಸೆದರು. ನಂಜನಗೂಡಿನಲ್ಲಿ ಕಾಂಗ್ರೆಸ್ ಗೆಲ್ಲುತ್ತಿತ್ತು ಪ್ರಸಾದ್ ಅಲ್ಲ ಎಂದು ಹೇಳಿದ್ದಾರೆ. ಇವತ್ತು ಅಂತಹ ಕಾಂಗ್ರೆಸ್ ಪಕ್ಷಕ್ಕೆ ಇಂದು 30 ಮಂದಿ ಅಭ್ಯರ್ಥಿ ಗಳಲ್ಲಿ ಒಬ್ಬರು ಆಯ್ಕೆಯಾಗುತ್ತಿಲ್ಲ.ಉಪಚುನಾವಣೆಯಲ್ಲಿ ನಿಮ್ಮ ಶಕ್ತಿ ಏನು ಅಂತ ತೋರಿಸುವಿರಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಒಬ್ಬ ಉಡಾಫೆ ವ್ಯಕ್ತಿ ಅಂತ ಜಗತ್ ಜಾಹಿರಾಗಿದೆ.ಆತ ವಿರೋಧ ಪಕ್ಷದ ನಾಯಕನಾಗಿದ್ದ ಆತನ ಪಕ್ಕದಲ್ಲಿ ಕೂರಲು ನಾಚಿಕೆಯಾಗುತ್ತಿತ್ತು. ಈ ರೀತಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಾಸ್ ಪ್ರಸಾದ್.ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ನೀಡುವ ಸಲುವಾಗಿಯೇ ಸಿದ್ದರಾಮಯ್ಯ ದುಷ್ಟಕೂಟ ರಚಿಸಿಕೊಂಡಿದ್ದಾರೆ.ಆ ಕೂಟದ ಮೂಲಕವೇ ಎಲ್ಲರನ್ನು ಸಮಾಧಾನ ಮಾಡುತ್ತಿದ್ದಾರೆ.ಸಿದ್ದರಾಮಯ್ಯರ ದುಷ್ಟಕೂಟಕ್ಕೆ ದಿಗ್ವಿಜಯಸಿಂಗ್ ಮುಖ್ಯಸ್ಥ. ತನ್ನ ಕೂಟದ ಮೂಲಕ ಹೈಕಮಾಂಡ್‌ಗೆ ಕಪ್ಪ ನೀಡುತ್ತಾ ತನ್ನ ಸ್ಥಾನ ಉಳಿಸಿಕೊಂಡಿರೋದು ನಿಜ.ಇಲ್ಲವಾಗಿದ್ದರೆ ಕಾಂಗ್ರೆಸ್‌ನಲ್ಲಿ ಆದ ಬೆಳವಣಿಗೆಗೆ ಯಾವತ್ತೋ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಎಂದು ಸಿಎಂ ಮೇಲೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್.ಮಹದೇವಪ್ಪ ಸಿದ್ದರಾಮಯ್ಯರ ಗುಲಾಮ. ಮೈಸೂರಿನಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಲೇವಡಿ. ಮಹದೇವಪ್ಪ ರಾಜಕೀಯದಲ್ಲಿ ಇರೋದೆ ಸಿದ್ದರಾಮಯ್ಯರಿಂದ. ಆತ ನಿಮ್ಮ ಲಾಯಲ್ಟಿಯಾಗಿರಬೇಕು ಆದ್ರೆ ಈಗ ಆತ ಗುಲಾಮನಾಗಿದ್ದಾನೆ. ಆತನಿಗೆ ಓಟು,ಹಣ ,ಅಧಿಕಾರ ಎಲ್ಲವನ್ನು ಕೊಟ್ಟಿದ್ದು ಸಿದ್ದರಾಮಯ್ಯನೇ.ಇವರೆಲ್ಲರ ಮೂಲಕ ಹೈಕಮಾಂಡ್ ಕಿವಿಊದಿ ಇವರಿಲ್ಲದಿದ್ದರೇ ಕಾಂಗ್ರೆಸ್ ಇಲ್ಲ ಅನ್ನೋ ಪರಿಸ್ಥಿತಿಗೆ ತಂದಿದ್ದಾರೆ. ಪರಿಣಾಮ ಎಐಸಿಸಿ ದುರ್ಬಲವಾಗಿಹೋಗಿದೆ. ಇದರಿಂದಾಗಿ ನನ್ನ ಮೇಲೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾನೆ.ಸಿದ್ದರಾಮಯ್ಯಗೆ ಮುಖ್ಯಮಂತ್ರಿಗಳ ಹುದ್ದೆಯ ಗೌರವವೇ ಗೊತ್ತಿಲ್ಲ.ಆತ ಸಿಎಂ ಆಗಿದ್ದು ರಾಜ್ಯದ ದುರದೃಷ್ಟಕರ ಎಂದು ವ್ಯಂಗವಾಡಿದರು

Leave a Comment