ಉದ್ಯಮಿಯಾಗಿ ಸಲ್ಮಾನ್ ಖಾನ್!

ಮುಂಬೈ, ಜೂ 21 -ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್, ತಮ್ಮ ಮುಂಬರುವ ‘ಇಂಶಾಅಲ್ಲಾ’ ಚಿತ್ರದಲ್ಲಿ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ‘ಇಂಶಾಅಲ್ಲಾ’ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿ ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಲ್ಮಾನ್, ಬನ್ಸಾಲಿಯ ‘ಹಮ್ ದಿಲ್ ದೇ ಚುಕೆ ಸನಂ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ 40 ವರ್ಷದ ಅಮೆರಿಕ ಉದ್ಯಮಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆಲಿಯಾ ಈ ಚಿತ್ರದಲ್ಲಿ ನಟಿ ಆಗಬೇಕೆಂದು ಕನಸು ಕಾಣುವ 20 ವರ್ಷದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಅರ್ಧ ಭಾಗವು ‘ಜಬ್ ಪ್ಯಾರ್ ಕಿಸೀಸೆ ಹೋತಾ ಹೈ’ ಹಾಗೂ ಇನ್ನರ್ಧ ಭಾಗವು ‘ಜಾನಂ ಸಮ್ಜಾ ಕರೋ’ ಚಿತ್ರಕ್ಕೆ ಹೋಲಿಕೆ ಆಗುತ್ತದೆ ಎಂಬ ಮಾತುಗಳು ಬಿಟೌನ್ ದಲ್ಲಿ ಕೇಳಿಬರುತ್ತಿವೆ.

ಈ ಚಿತ್ರವು 2020ರ ರಂಜಾನ್ ಹಬ್ಬದಂದು ಬಿಡುಗಡೆಗೊಳ್ಳಲಿದೆ.

Leave a Comment