ಉದ್ಯಮದತ್ತ ವಾಲುತ್ತಿರುವ ಪತ್ರಿಕೋದ್ಯಮ : ಸುರೇಶ್ ಕಳವಳ

ಬೆಂಗಳೂರು, ಸೆ. ೧೨- ಪತ್ರಿಕೋದ್ಯಮ ಇಂದು ಉದ್ಯಮದತ್ತ ವಾಲುತ್ತಿರುವುದು ಬಹಳ ಗಂಭೀರವಾದ ವಿಚಾರ. ಹಾಗೂ ಆತಂಕಕಾರಿ ವಾತಾವರಣ ಸೃಷ್ಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಇಂದಿಲ್ಲಿ ಹೇಳಿದ್ದಾರೆ.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಎಫ್.ಕೆ.ಸಿ.ಸಿ.ಐ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಕರ್ತ ಹಾಗೂ ಉದ್ಯಮ ಕುರಿತ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪತ್ರಿಕೋದ್ಯೋಮ ಈಗಾಗಲೇ ಉದ್ಯಮವಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರ ಸ್ಥಿತಿಗತಿ ಬಗ್ಗೆ ಸಾಕಷ್ಟು ಚರ್ಚೆಯಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಇಂದು ಪತ್ರಕರ್ತರು ವಿಪರೀತ ಜ್ವರ ಸಾಕಷ್ಟು ಸಮಸ್ಯೆಗಳ ಮಧ್ಯೆಯೂ ಕೆಲಸ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ ಅದರಲ್ಲೂ ಯುವ ಪತ್ರಕರ್ತರ ಸ್ಥಿತಿ ಶೋಚನೀಯವಾಗಿದೆ.

ಈ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಜೊತೆಗೆ ಅನೇಕ ಸವಾಲುಗಳು ಎದುರಾಗುತ್ತದೆ. ಆದರೆ ಪತ್ರಕರ್ತರಿಗೆ ಯಾವುದೇ ಗ್ಯಾರಂಟಿಯಿಲ್ಲ. ಇಂತಹ ಒತ್ತಡ ಪರಿಸ್ಥಿತಿಯಲ್ಲೂ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ.ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತರನ್ನು ಉದ್ಯಮಗಳಾಗಿ ನೋಡುವುದೇ ಕಷ್ಟ. ನಿರ್ಭೀತಿಯಾಗಿ ಎಲ್ಲ ವಿಚಾರವನ್ನು ಬಯಲಿಗೆಳೆದು ವರದಿ ಮಾಡುವುದೇ ಬೇರೆ. ಇದು ಉದ್ಯಮವಾದರೆ ಕೇವಲ ಲಾಭ, ನಷ್ಟದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ಎಂದು ತಿಳಿಸಿದರು.

ಈ ಬಗ್ಗೆ ಉತ್ತಮ ಚಿಂತನೆಯನ್ನು ಶುರುವಾಗಿದೆ. ಇದು ಮುಂದುವರೆದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಅವಶ್ಯಕತೆಯಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಎಫ್.ಕೆ.ಸಿ.ಸಿ.ಐನ ಮಾಜಿ ಅಧ್ಯಕ್ಷ ತಲ್ಲಮ್ಮ ವೆಂಕಟೇಶ್, ಎಂ.ಎಸ್.ಎಂ.ವಿ.ನ ಹೆಚ್ಚುವರಿ ನಿರ್ದೇಶಕರಾದ ಹೊನ್ನಮಾನೆ ವಿಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಆರ್. ರಾಜು, ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಿ. ಆರ್. ಜನಾರ್ಧನ್, ಕರ್ನಾಟಕ ಪತ್ರಕರ್ತ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಂದ್ರ ಕುಮಾರ್, ಮತ್ತಿತರರು ಭಾಗವಹಿಸಿದ್ದರು.

Leave a Comment