ಉದ್ಘಾಟನೆಗೆ ಮುನ್ನವೇ ಬಿದ್ದ ರೋಪ್ ವೇ : ಇಬ್ಬರ ಸಾವು

ಜಮ್ಮು, ಜ. ೨೧- ಉದ್ಘಾಟನೆಗೆ ಮುನ್ನವೇ ರೋಪ್‌ವೇ ಬಿದ್ದು ಇಬ್ಬರು ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಪ್ರಧಾನಿ ನರೇಂದ್ರಮೋದಿ ಅವರು ರೋಪ್ ವೇ ಮತ್ತು ಕೇಬಲ್ ಕಾರ್ ಸೇವೆಯನ್ನು ಉದ್ಘಾಟಿಸಬೇಕಿತ್ತು.

ಆದರೆ ಉದ್ಘಾಟನೆಗೂ ಮೊದಲೆ ಕೆಳಗೆ ಬಿದ್ದು ಈ ದುರ್ಘಟನೆಯಲ್ಲಿ ಬಿಹಾರದ ರಾಕೇಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಹರಿಕೃಷ್ಣ ಅವರು ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಕಾಶ್ಮೀರ ಕಣಿವೆಯ ಜಮ್ಮುವಿನಲ್ಲಿ ರೋಪ್ ವೇ ಕೇಬಲ್ ಕಾರ್ ಕಾಮಗಾರಿ ಅಂತಿಮ ಹಂತದಲ್ಲಿದ್ದಾಗ ಅಣಕು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ವೇಳೆ ಕೇಬಲ್ ಕಾರ್ ರೋಪ್ ವೇ ನಿಂದ ಕಳಚಿಕೊಂಡು ಕೆಳಗೆ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment