ಉತ್ತರ ಪ್ರದೇಶದಲ್ಲಿ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

ಲಖನೌ, ಫೆ ೨೨-ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯಲ್ಲಿ 12 ಲಕ್ಷ ಕೋಟಿ ಮೊತ್ತದ ಸರಿ ಸುಮಾರು 3 ಸಾವಿರ ಟನ್ ಚಿನ್ನದ ನಿಕ್ಷೇಪವನ್ನು ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ ಹಾಗೂ ಉತ್ತರ ಪ್ರದೇಶ ಭೂ ವಿಜ್ಞಾನ ಮತ್ತು ಗಣಿ ನಿರ್ದೇಶನಾಲಯ ಪತ್ತೆ ಮಾಡಿದೆ.
ಭಾರತದಲ್ಲಿ ಇದೂವರೆಗೂ ಸಿಕ್ಕ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸೋನ್ ಪಹಡಿಯಲ್ಲಿ 2, ಸಾವಿರದ 943. 26 ಟನ್ ಚಿನ್ನದ ನಿಕ್ಷೇಪ ಹಾಗೂ ಹಾರ್ಡಿಯಲ್ಲಿ 646.15 ಕೆ.ಜಿ. ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದೂ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ಅಧಿಕೃತ ಪತ್ರ ಹೊರಡಿಸಿತ್ತು.
ವಿಶ್ವ ಚಿನ್ನ ಮಂಡಳಿಯ ಪ್ರಕಾರ ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದ್ದು ಈಗ ಸೋನ್ ಭದ್ರಾ ಜಿಲ್ಲೆಯಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಇದೂವರೆಗಿನ ಚಿನ್ನದ ನಿಕ್ಷೇಪಗಳಿಗಿಂತ 5 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.
ಇ ಹರಾಜಿಗೆ ಸಿದ್ಧತೆ
ಸೋನ್ ಭದ್ರಾ ಜಿಲ್ಲೆಯಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪವನ್ನು ಇ ಟೆಂಡರಿಂಗ್ ಮೂಲಕ ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಚಿನ್ನದ ನಿಕ್ಷೇಪಗಳ ಬ್ಲಾಕ್ ಅನ್ನು ಹರಾಜು ಮಾಡಲು ಸರ್ಕಾರ 7 ಸದಸ್ಯರ ತಂಡವನ್ನು ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ ನಡೆಸಿ ಲಖನೌದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಇಂದು ವರದಿ ಸಲ್ಲಿಸಿದೆ.
ಸೋನ್ ಭದ್ರಾದಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಈ ಮುಂಚೆ ಬ್ರಿಟಿಷರು ಮೊದಲೇ ಆರಂಭಿಸಿದ್ದರೂ ಎನ್ನಲಾಗಿದೆ. ಈ ಸಂಬಂಧ 1992, 93 ರಲ್ಲಿ ಕೇಂದ್ರ ಭೂ ವಿಜ್ಞಾನ ತಂಡ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಸಂಶೋಧನೆ ಆರಂಭಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಡಾ. ಪೃಥ್ವಿ ಮಿಶ್ರಾ ಅವರು ಚಿನ್ನದ ನಿಕ್ಷೇಪ ಸಂಬಂಧ 2011 ರಲ್ಲಿ 2 ವಿಭಾಗಗಳಾಗಿ ವಿಗಂಡಿಸಿ ಚಿನ್ನ ಪತ್ತೆ ಮಾಡುವ ಕೆಲಸ ನಡೆದಿತು ಎಂದು ತಿಳಿಸಿದ್ದಾರೆ.
ಭೂಮಿಯಿಂದ ಒಂದು ಕಿ.ಮೀ ಆಳದಲ್ಲಿ 18 ಮೀಟರ್ ಎತ್ತರದಲ್ಲಿ ಈ ಚಿನ್ನದ ನಿಕ್ಷೇಪ ಇದೆ ಎಂದು ಅವರು ತಿಳಿಸಿದ್ದಾರೆ.

 

Leave a Comment