ಉತ್ತರ ಕೊರಿಯಾ ಮೇಲೆ ಜಪಾನ್ ಉಪಗ್ರಹ ಕಣ್ಣು

ಜಪಾನ್ ಶುಕ್ರವಾರ (ಮಾ. 17) ನೂತನ ಬೇಹುಗಾರಿಕಾ ಉಪಗ್ರಹವನ್ನು ಕಕ್ಷೆಗೆ ಹಾರಿಸಿದೆ.

ಉತ್ತರ ಕೊರಿಯಾ ಪರಮಾಣು ಪರೀಕ್ಷೆಗಳನ್ನು ನಡೆಸುವುದು ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೂಲಕ ನೆರೆಯ ರಾಷ್ಟ್ರಗಳಿಗೆ ಭಾರಿ ಬೆದರಿಕೆ ಆತಂಕ ಸೃಷ್ಟಿಸಿದೆ.

ಜಪಾನ್ ಮೊನ್ನೆ ಶುಕ್ರವಾರ (ಮಾ. 17) ನೂತನ ಬೇಹುಗಾರಿಕಾ ಕ್ಷಿಪಣಿಯನ್ನು ಉಡಾವಣೆ ಮಾಡಿದೆ.

ವಿಶ್ವಸಂಸ್ಥೆ ನಿಷೇಧಿವಿದ್ದರೂ, ಪರಮಾಣು ಅಸ್ತ್ರಗಳ ಅಭಿವೃದ್ಧಿ, ಖಂಡಾಂತರ ಕ್ಷಿಪಣಿಗಳ ಉಡಾವಣೆಯಲ್ಲಿ ತೊಡಗಿರುವ ಉತ್ತರ ಕೊರಿಯಾ ಮೇಲೆ ಈ ಕ್ಷಿಪಣಿ ನಿಗಾ ಇಟ್ಟಿರುತ್ತದೆ.

ರಾಡಾರ್ – 5 ಹೆಸರಿನ ಈ ಬೇಹುಗಾರಿಕಾ ಉಪಗ್ರಹವನ್ನು ಹೊತ್ತ ಹೆಚ್ 11 ಎ ರಾಕೆಟ್ ಅನ್ನು ಪನೇಗಾ ಶಿಮಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

ಉತ್ತರ ಕೊರಿಯಾದ ಮುಂದಿನ ಪರಮಾಣು ನಡೆಯ ಮೇಲೆ ಕಣ್ಣಿಡುವ ಹಿನ್ನಲೆಯಲ್ಲಿ ಈ ಉಪಗ್ರಹವನ್ನು ಹಾರಿಸಲಾಗಿದೆ.

ಜಪಾನ್‌ನ ದಕ್ಷಿಣ ಭಾಗದ ಪನೇಗಾ ಶಿಮಾ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ರಾತ್ರಿ ಭಾರತೀಯ ಕಾಲಮಾನ 10.20ಕ್ಕೆ ಉಡಾವಣೆ ಮಾಡಲಾಗಿದೆ.

ಜಪಾನ್‌ನ ಹೆಚ್ 11 ಎ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿರುವ ಈ ಬೇಹುಗಾರಿಕಾ ಉಪಗ್ರಹ ಕಕ್ಷೆಯಿಂದಲೇ ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮಗಳನ್ನು ವೀಕ್ಷಿಸಲಿದೆ.

ಉತ್ತರ ಕೊರಿಯಾದ ಪರಮಾಣು ದುಸ್ಸಾಹಸಗಳ ಮೇಲೆ ಕಣ್ಣಿಟ್ಟಿರುವುದರ ಜೊತೆಗೆ ಭೂ ವಾತಾವರಣದಲ್ಲಿಯ ಏರುಪೇರು, ಪ್ರಾಕೃತಿಕ ವಿಕೋಪ, ಇತ್ಯಾದಿ ಮಾಹಿತಿಗಳನ್ನು ಇದು ಭೂ ಕೇಂದ್ರಕ್ಕೆ ರವಾನಿಸುತ್ತದೆ.

ಮಾಹಿತಿ ಸಂಗ್ರಹ ಉಪಗ್ರಹ ಉಡಾವಣೆ ಯೋಜನೆಯನ್ನು ಜಪಾನ್ 1998 ರಲ್ಲಿಯೇ ಕೈಗೆತ್ತಿಕೊಂಡಿದೆ.

ಉತ್ತರ ಕೊರಿಯಾ ಪರೀಕ್ಷಾರ್ಥ ಹಾರಿಸಿದ ಕ್ಷಿಪಣಿ ತನ್ನ ದೇಶದ ಮೇಲೆ ಹಾದುಹೋದ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಪಾನ್ ಚುರುಕುಗೊಳಿಸಿದೆ.

ಉತ್ತರ ಕೊರಿಯಾ ನಿರಂತರವಾಗಿ ಪರಮಾಣು ಪರೀಕ್ಷೆ ಮತ್ತು ಖಂಡದ ಕ್ಷಿಪಣಿ ಉಡಾವಣೆಯಲ್ಲಿ ತೊಡಗಿದೆ.

ಖಂಡಾಂತರ ಕ್ಷಿಪಣಿ ಉಡಾವಣೆ ಮಾಡುವ ಮೂಲಕ ಭಾರಿ ವಿರೋಧಕ್ಕೆ ಗುರಿಯಾಗಿರುವ ಉತ್ತರ ಕೊರಿಯಾ ಮತ್ತೊಂದು ಪರಮಾಣು ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಖಂಡಾಂತರ ಕ್ಷಿಪಣಿ ಉಡಾವಣೆಗೆ ವಿಶ್ವಸಂಸ್ಥೆಯ ನಿಷೇಧವಿದ್ದರೂ, ಉತ್ತರ ಕೊರಿಯಾ ಅದನ್ನು ಲೆಕ್ಕಿಸದೆ ಇತ್ತೀಚೆಗೆ 4 ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಅವುಗಳಲ್ಲಿ ಎರಡು ಜಪಾನ್ ಸ್ವಾಮ್ಯದ ಸಮುದ್ರದಲ್ಲಿ ಬಿದ್ದಿದ್ದವು.

ಉತ್ತರ ಕೊರಿಯಾದ ಈ ಅಪ್ರಚೋದಿತ ನಡೆಗೆ ದಕ್ಷಿಣ ಕೊರಿಯಾ, ಜಪಾನ್, ಅಮೆರಿಕ ಕಟು ಎಚ್ಚರಿಕೆ ನೀಡಿದ್ದವು.

ಪ್ರಚೋದನೆ ನೀಡಿದರೆ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಲಿದೆ ಎಂದು ಅಮೆರಿಕಾ ಎಚ್ಚರಿಸಿದೆ.

-ಉತ್ತನೂರು ವೆಂಕಟೇಶ್

Leave a Comment