ಉತ್ತರ ಕರ್ನಾಟಕ ಪ್ರತ್ಯೇಕರಾಜ್ಯ  ಅನಿವಾರ್ಯ

ಕಲಬುರಗಿ ಮಾ14: ಆಂಧ್ರ ತೆಲಂಗಾಣದ ಮಾದರಿಯಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ  ಉತ್ತರ ಕರ್ನಾಟಕ ಭಾಗಕ್ಕೆ ಸತತವಾಗಿ ಆಗುತ್ತಿರುವ ಅನ್ಯಾಯ ಶಾಶ್ವತವಾಗಿ ದೂರವಾಗಲಿದೆ . ಆದ್ದರಿಂದ ಉತ್ತರ ಕರ್ನಾಟಕ  ಪ್ರತ್ಯೇಕ ರಾಜ್ಯ ಅನಿವಾರ್ಯ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಡಾ ಎ.ಎಸ್ ಭದ್ರಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಹೋರಾಟಕ್ಕೆ ಹೊಸದಾಗಿ ಅಸ್ತಿತ್ವಕ್ಕೆ ಬಂದ   ಡಾ ಅಯ್ಯಪ್ಪ ನೇತೃತ್ವದ ಜನಸಾಮಾನ್ಯರ ಪಕ್ಷ (ಜೆಎಸ್‍ಪಿ)ವು ಬೆಂಬಲ ನೀಡಿದೆ,ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಜನಸಾಮಾನ್ಯರ ಪಕ್ಷದ ವತಿಯಿಂದ ಚುನಾವಣಾ ಕಣಕ್ಕಿಳಿಯಲಿದೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ  ಕೇಂದ್ರದ ಪ್ರತ್ಯೇಕ ಬಜೆಟ್ ದೊರೆಯಲಿದ್ದು,ಚಿಕ್ಕ ರಾಜ್ಯವಾಗುವದರಿಂದ ಆಡಳಿತ ಚುರುಕುಗೊಳ್ಳವದು. ನೆನೆಗುದಿಗೆ ಬಿದ್ದ ಅನೇಕ ಯೋಜನೆಗಳು ಕಾರ್ಯಗತಗೊಳ್ಳುವವು ಮತ್ತು ಕನ್ನಡ ಮಾತನಾಡುವ ಎರಡು ರಾಜ್ಯಗಳಾಗುವದು ಹೆಮ್ಮೆಯ ವಿಷಯ ಎಂದರು

ಸುದ್ದಿಗೋಷ್ಠಿಯಲ್ಲಿ ಪ್ರೊ ಶಿವರಾಜ ಪಾಟೀಲ, ಶಿವಕವಿ ಹಿರೇಮಠ ಜೋಗೂರ, ಶಾಂತಾ ವಾಲಿ ಉಪಸ್ಥಿತರಿದ್ದರು

Leave a Comment