ಉತ್ತರಖಂಡ ಕಾಡಿನಲ್ಲಿ ದರ್ಶನ್ ಪೋಟೋಗ್ರಾಫಿ

ಬೆಂಗಳೂರು, ಜ ೨೭- ಬಹುನಿರೀಕ್ಷೆಯ ರಾಬರ್ಟ್ ಚಿತ್ರೀಕರಣ ಮುಗಿಸಿದ ಚಾಲೆಜಿಂಗ್ ಸ್ಟಾರ್ ದರ್ಶನ್ ಮತ್ತೆ ಉತ್ತರಖಂಡ್ ಕಾಡಿನಲ್ಲಿ ಸುತ್ತಾಡಿ ಪ್ರಾಣಿ, ಪಕ್ಷಿಗಳ ಸುಂದರ ಕ್ಷಣಗಳನ್ನು ಸೆರೆ ಹಿಡಿಯುವಲ್ಲಿ ತೊಡಗಿಕೊಂಡಿದ್ದಾರೆ.
ಮೊದಲಿನಿಂದಲೂ ವೈಲ್ಡ್ ಲೈಫ್ ಫೋಟೋಗ್ರಫಿ ಬಗ್ಗೆ ಆಸಕ್ತಿ ಹೊಂದಿರುವ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳ ಮೇಲೆ ತುಸು ಹೆಚ್ಚು ಪ್ರೀತಿ. ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ಅಥವಾ ನೆಚ್ಚಿನ ಪ್ರಾಣಿಗಳ ಜತೆ ಕಾಲ ಕಳೆಯುವ ದರ್ಶನ್ ಇದೀಗ ಮತ್ತೆ ಕ್ಯಾಮಾರ ಹಿಡಿದು ಕಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದರ ಬಗ್ಗೆ ಸ್ವತಃ ದರ್ಶನ್ ಅವರೇ ಜಾಲತಾಣದಲ್ಲಿ ಪೋಟೋ ಪ್ರಕಟಿಸಿದ್ದಾರೆ.
ಈ ಹಿಂದೆ ದರ್ಶನ್ ತಾವು ಸೆರೆ ಹಿಡಿದ ಅಪರೂಪದ ಫೋಟೋಗಳನ್ನು ಪ್ರದರ್ಶನಕ್ಕಿಟ್ಟು ಅದರಿಂದ ಬಂದ ಹಣವನ್ನು ವನ್ಯ ಜೀವಿಗಳ ನೆರವಿಗೆ ನೀಡಿ ಗಮನ ಸೆಳೆದಿದ್ದರು. ಈ ಬಾರಿ ದರ್ಶನ್ ಈ ಬಾರಿ ಕ್ಯಾಮರಾ ಹೆಗಲೇರಿಸಿಕೊಂಡು ಹೋಗಿದ್ದು ಉತ್ತರಖಂಡನ ಸತ್ತಾಲ್ ಕಡೆ ಹೊರಟಿದ್ದಾರೆ. ಸತ್ತಾಲ್‌ನ ಸುಂದರ ತಾಣಗಳಲ್ಲಿ ಕ್ಯಾಮರಾ ಜೊತೆ ಸುತ್ತಾಡುತ್ತಿರುವ ದರ್ಶನ್ ಪಕ್ಷಿಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಖ್ಯಾತ ಫೋಟೋಗ್ರಾಫರ್ ಲೀಲಾ ಅಪ್ಪಾಜಿ ಜೊತೆ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಿದ್ದಾರೆ.
ಸತ್ತಾಲ್ ಭಾರತದ ಸುಂದರ ತಾಣಗಳಲ್ಲಿ ಒಂದು. ಓಕ್ ಮತ್ತು ಪೈನ್ ಮರಗಳ ದಡ್ಡ ಕಾಡುಗಳ ನಡುವೆ ಸರೋವರಗಳ ಗುಂಪು ಇದೆ. ಭಾರತದ ಕೆಲವು ಹಾಳಾಗದ ಸುಂದರ ಶುದ್ಧ ಜಲಮೂಲಗಳಲ್ಲಿ ಸತ್ತಾಲ್ ಕೂಡ ಒಂದು. ಏಳು ಸರೋವಾರಗಳ ನಾಡು ಎಂದೆ ಖ್ಯಾತಿಗಳಿಸಿರುವ ಸತ್ತಾಲ್ ವಲಸೆ ಹಕ್ಕಿಗಳಿಗೆ ಸ್ವರ್ಗವಾಗಿದೆ. ವೈವಿದ್ಯಮಯವಾದ ಪಕ್ಷಿಗಳನ್ನು ಈ ಕಾಡಿನಲ್ಲಿ ನೋಡಬಹುದು.
ಕಳೆದ ಕೆಲವು ತಿಂಗಳ ಹಿಂದೆ ದರ್ಶನ್ ಕೀನ್ಯಾದ ಮಾಸಾಯಿ ಮಾರ ಎಂಬ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಾಣಿಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು ತಂದಿದ್ದರು. ಈಗ ಮತ್ತೆ ದರ್ಶನ್ ಕಾಡಿನತ್ತ ಪ್ರಯಾಣ ಬೆಳೆಸಿದ್ದು, ಯಾವೆಲ್ಲಾ ಪೋಟೋಗಳು ಅವರ ಕೈಚಳಕದಲ್ಲಿ ಹೊತ್ತು ತರಲಿದ್ದಾರೆ ಎಂಬುದು ಕುತುಹಲ ಮೂಡಿಸಿದೆ.

Leave a Comment