ಉತ್ತಮ ಶಿಕ್ಷಕರಿಂದ ಉತ್ತಮ ವಿದ್ಯಾರ್ಥಿಗಳ ರೂಪ: ಮೇಯರ್ ಮೋದಿ

ಕಲಬುರಗಿ, ಜೂ. 19: ಉತ್ತಮ ಶಿಕ್ಷಕರಿಂದ ಉತ್ತಮ ಶಿಕ್ಷಣ ದೊರೆಯುತ್ತದೆ. ಉತ್ತಮ ಶಿಕ್ಷಕರಾದವರು ವಿದ್ಯಾರ್ಥಿಗಳನ್ನು ಉತ್ತಮ ರೂಪ ನೀಡಬೇಕು ಎಂದು ಕಲಬುರಗಿ ನಗರದ ಪ್ರಥಮ ಪ್ರಜೆ ಮೇಯರ ಶರಣಕುಮಾರ ಮೋದಿ ಕರೆ ನೀಡಿದರು.
ಹಳೆ ಜೇವರ್ಗಿ ರಸ್ತೆಯ ಗುರುಪಾದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮೂರನೇಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪೂರ್ವ ಭಾವಿಯಾಗಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದಲ್ಲಿ ಸಾಧಾರಣ ವ್ಯಕ್ತಿತ್ವವನ್ನು ಹೊಂದಿದ ನನಗೆ ಎಂ.ಬಿ. ಅಂಬಲಗಿಯಂತಹ ಶಿಕ್ಷಕರ ಚಾಟಿ ಏಟುನಿಂದ ಉತ್ತಮ ವ್ಯಕ್ತಿಯಾಗಿ ಸಮಾಜ ಮುಖಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಯುವಕರು ಉತ್ತಮ ಆರೋಗ್ಯ ಹೊಂದಿದರೆ ಉನ್ನತ ಶಿಕ್ಷಣಕ್ಕೆ ತೊಂದರೆಯಾಗುವದಿಲ್ಲ. ಅದಕ್ಕಾಗಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರು ಯೋಗವನ್ನು ಅಭ್ಯಾಸ ಮಾಡುವದರೊಂದಿಗೆ ನಿರೋಗಿಗಳಾಗಿ ಎಂದು ಮೋದಿ ಹೇಳಿದರು.
ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಅವರು ಮಾತನಾಡಿ ವಿದ್ಯಾರ್ಥಿ ಓದಿನ ಒತ್ತಡವನ್ನು ಎದುರಿಸಲು ಯೋಗ ಸಹಾಯಕವಾಗುತ್ತದೆ. ಈ ದಿಶೆಯಲ್ಲಿ ನೂತನ ವಿದ್ಯಾಯಲಯ ಮೈದಾನದಲ್ಲಿ ಜೂ. 21 ರಂದು ನಡೆಯುವ ಯೋಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಗುರುಪಾದೇಶ್ವರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಅಂಬಲಗಿ ಅವರು ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಬಡ ಪ್ರತಿಭವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಮೊದಲ ಆಧ್ಯತೆ ನೀಡಿ ಅವರಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಹಣ ಗಳಿಸುವದು ಮುಖ್ಯವಲ್ಲ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎನ್ನುವದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಎಲ್ಲರನ್ನು ಸ್ವಾಗತಿಸಿದರು.
ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಚ್ಛೇಂದ್ರನಾಥ ಮೂಲಗೆ ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಪ್ರಹ್ಲಾದ ಉಪಸ್ಥಿತರಿದ್ದರು.

Leave a Comment