ಉತ್ತಮ ರಿಮೇಕ್ ಪಟಾಕಿ…

ತೆಲುಗಿನ ಪಟಾಶ್ ಸಿನೆಮಾದ ಮೊದಲ ಪ್ರದರ್ಶನ ನೋಡುತ್ತಿದ್ದಂತೆ ಸಾಯಿಕುಮಾರ್ ಕರೆಮಾಡಿ ಚಿತ್ರ ತುಂಬಾ ಚೆನ್ನಾಗಿದೆ ಅದರ ಹಕ್ಕನ್ನು ತೆಗೆದುಕೊಳ್ಳಿ ನಾನೆ ನಟಿಸ್ತೇನೆ ಅಂತ ಹೇಳಿದ್ದರು ಅವರಿಂದಾಗಿ ಈಗ ಪಟಾಕಿ ಚಿತ್ರವಾಗಿದೆ. ಕಮರ್ಷಿಯಲ್ ಆಗಿ ವರ್ಕ್‌ಔಟ್ ಆಗುತ್ತದೆ ಎಂದೇ ರಿಮೇಕ್ ಪಟಾಕಿ ಚಿತ್ರ ಮಾಡಿದ್ದು ಕ್ಲಾಸ್ ಮತ್ತು ಮಾಸ್ ಎರಡೂ ವರ್ಗಕ್ಕೂ ಚಿತ್ರ ಇಷ್ಟವಾಗುತ್ತದೆ ಎಂದು ನಿರ್ಮಾಪಕ ಎಸ್. ವಿ. ಬಾಬು ಮುಕ್ತವಾಗಿಯೇ ಹೇಳಿದರು.

ಪಟಾಕಿ ಚಿತ್ರ ಮೂಲ ಚಿತ್ರಕ್ಕಿಂತ ಉತ್ತಮವಾಗಿ ಮೂಡಿಬಂದಿದೆ ಕನ್ನಡಿಗರು ಒಪ್ಪುವ ರೀತಿಯಲ್ಲಿ ಮಂಜು ಸ್ವರಾಜ್ ಚಿತ್ರ ನಿರ್ದೇಸಿದ್ದಾರೆ. ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗಣೇಶ್ ಅವ್ರನ್ನು ಪೊಲೀಸ್ ಅಧಿಕಾರಿಯಾಗಿ ತೋರಿಸಲು ಸಾಧ್ಯವೇ ಇಲ್ಲ ಎನ್ನುವಂಥ ಪ್ರತಿಕ್ರಿಯೆಗಳು ಬಂದಿತ್ತು. ಆದರೆ ಟ್ರೇಲರ್ ಬಿಡುಗಡೆಯಾದ ಮೇಲೆ ಸಾಧ್ಯವೆನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಪಟಾಕಿ ಚಿತ್ರದ ಟ್ರೇಲರ್ ವೀಕ್ಷಣೆಯಲ್ಲಿ ಮತ್ತು ಎನ್‌ಜಿ ಶಾಟ್‌ನಿಂದ ಟ್ರೇಲರ್ ತಂದಿದ್ದರಲ್ಲಿ ಪಟಾಕಿ ಪ್ರಥಮದ ದಾಖಲೆ ಮಾಡಿದೆ ಎಂದು ಮಂಜುಸ್ವರಾಜ್ ತುಂಬು ವಿಶ್ವಾಸದಿಂದ ಹೇಳಿದರು.

ಸ್ವಮೇಕ್‌ಗಿಂತ ರಿಮೇಕ್ ಚಿತ್ರ ಮಾಡುವುದು ಹೆಚ್ಚು ಚಾಲೆಂಜಿಂಗ್ ಎನ್ನುವುದು ಅವರ ಈಗಿನ ಸ್ವಅನುಭವವಂತೆ. ಕನ್ನಡ ಪ್ರೇಕ್ಷಕರು ಲಾಜಿಕ್ ಇಲ್ಲದೆ ಸಿನೆಮಾವನ್ನು ಒಪ್ಪಿಕೊಳ್ಳದೆ ಇರುವುದರಿಂದ ತೆಲುಗಿನ ಚಿತ್ರಕ್ಕಿಂತ ಸುಮಾರು ಶೇಕಡ ೪೫ರಷ್ಟು ಬದಲಾವಣೆ ಮಾಡಿಕೊಂಡು ಕನ್ನಡೀಕರಿಸಿದ್ದಾರಂತೆ.

ಸಾಧುಕೋಕಿಲ ಪಾತ್ರ ತೆಲುಗಿನಲ್ಲಿ ಇರಲೇ ಇಲ್ಲ ಕನ್ನಡದಲ್ಲಿ ಸೃಷ್ಟಿಸಿದ್ದಾರಂತೆ. ಚಿತ್ರದ ಬಿಡುಗಡೆ ಹತ್ತಿರಾಗುತ್ತಿರುವುದರಿಂದ ಪ್ರಸವ ವೇದನೆ ಮತ್ತು ಮಗುಹುಟ್ಟುವ ಸಂಭ್ರಮದ ಮಿಶ್ರಭಾವದಲ್ಲಿ ಅವರಿದ್ದಾರೆ.

ಗಣೇಶ್ ತಂಗಿಯಾಗಿ ನಟಿಸಿರುವ ಪ್ರಿಯಾಂಕ, ಒಳ್ಳೆ ಪಾತ್ರ ಮಾಡಿದ್ದು, ಈ ಸಿನೆಮಾ ತನಗೆ ಉತ್ತಮ ಭವಿಷ್ಯ ರೂಪಿಸುತ್ತದೆನ್ನುವ ಆಶಯದಲ್ಲಿದ್ದಾಳೆ. ಸ್ವತಃ ಪೊಲೀಸ್ ಅಧಿಕಾರಿಯ ಮಗಳಾಗಿರುವ ರನ್ಯ ಇದರಲ್ಲಿ ಗಣೇಶ್ ಮನಸಿನಲ್ಲಿ ಪ್ರೀತಿಯ ಪಟಾಕಿ ಸಿಡಿಸುವ ಹುಡುಗಿಯಾಗಿ ನಟಿಸಿದ್ದಾರೆ.

ಇಲ್ಲಿ ಗಣೇಶ್ ಪೊಲೀಸ್ ಅಧಿಕಾರಿಯಾಗಿರುವುದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಅವರ ಪ್ರೀತಿಸುವ ಹುಡುಗಿ ಮಾತ್ರ ಎಂದ ರನ್ಯ, ತಾವು ನಟಿಸುವ ಸಿನೆಮಾ ಬಗ್ಗೆ ಅಪ್ಪ-ಅಮ್ಮನ ಬಳಿ ಚರ್ಚಿಸುತ್ತಾರಂತೆ.

ಎಲ್ಲಾ ಮನೆಯಲ್ಲೂ ಇರುವ ಹುಡುಗಿಯಂತೆ ತಾನೂ ಇದ್ದೇನೆ ಭಿನ್ನತೆ ಎಂದರೆ ಹೆಚ್ಚು ಶಿಸ್ತಿನಲ್ಲಿ ಬೆಳೆದಿರುತ್ತೇವೆ ಎಂದು ಪೊಲೀಸ್ ಅಧಿಕಾರಿಯವರ ಮಗಳಾಗಿರುವುದರಿಂದ ಜೀವನ ಶೈಲಿಯಲ್ಲಿ ಇರಬಹುದಾದ ವಿಭಿನ್ನತೆ ಕುರಿತಾದ  ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಿಸಿದಳು.
ಗಣೇಶ್ ಅವರಿಂದ ನಟನೆಯನ್ನು ಸಾಕಷ್ಟು ಕಲಿತಿರುವುದನ್ನು ಖುಷಿಯಾಗಿ ಹಂಚಿಕೊಂಡಳು.

Leave a Comment