ಉತ್ತಮ ಪುಸ್ತಕ ಹೊರ ತರಲಿ-ಬಿ.ಗೋಪಾಲ

ರಾಯಚೂರು.ನ.06- ತಿರುಪತಿ ಅವರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ ಪುಸ್ತಕಗಳನ್ನು ಹೊರ ತರಲಿ ಎಂದು ಪ್ರಜಾ ಪರಿವರ್ತನಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಗೋಪಾಲ ಹೇಳಿದರು.
ಸ್ಥಳೀಯ ರಂಗಮಂದಿರದಲ್ಲಿ ತಿರುಪತಿ ನರಸಪ್ಪ ಮ್ಯಾಗೇರಿ ಅವರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. 1932 ರಲ್ಲಿ ಇಂಗ್ಲೆಂಡ್‌ನಲ್ಲಿ ದುಂಡು ಮೇಜಿನ ಪರಿಷತ್ ಸಭೆ ನಡೆಯಿತು. 1989 ರಲ್ಲಿ 18ನೇ ವರ್ಷದೊಳಗಿನ ಯುವಕರಿಗೆ ಕಡ್ಡಾಯವಾಗಿ ಮತ ಚಲಾಯಿಸುವ ಹಕ್ಕು ಜಾರಿಗೊಳಿಸಲಾಗಿದೆ. ಅಲ್ಲದೇ, ಮೂಢನಂಬಿಕೆಯಿಂದ ದೂರ ಉಳಿದು ಶಿಕ್ಷಣವಂತರಾಗುವಂತೆ ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷ ಗತಿಸಿದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು, ಶ್ರೀಮಂತರಾಗಿ ಉಳಿದಿರುವುದರಿಂದ ಸಮಾಜವೂ ಬದಲಾವಣೆ ಹೊಂದಿಲ್ಲವೆಂದರು. ಉಮೇಶ ಕೆ. ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ ಅವರು, ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ ಎಂದರು.
ಕೆ.ಶಾಂತಪ್ಪ, ಡಾ.ಬಿ.ಆರ್.ಅಂಬೇಡ್ಕರ್, ಗೌತಮ್ ಬುದ್ಧ, ಜ್ಯೋತಿ ಬಾಪೂಲೆ ಹಾಗೂ ಜಗಜ್ಯೋತಿ ಬಸವಣ್ಣನವರ ಆದರ್ಶ ಗುಣಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ನರಸಪ್ಪ ಮ್ಯಾಗೇರಿ, ಜಂಬಣ್ಣ ನೀಲಗಲ್, ನವೀನ್ ದೊಡ್ಡಮನಿ, ನೀಲಕಂಠರಾಯ ಪೂಜಾರಿ, ಅಯ್ಯಣ್ಣ ಪೂಜಾರಿ, ಪರಮಾನಂದ, ಶಿವಕುಮಾರ, ಪ್ರಕಾಶ, ರಂಗನಾಥ, ವೆಂಕಟೇಶ ಇತರರು ಉಪಸ್ಥಿತರಿದ್ದರು.

Leave a Comment