ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ವಾಯು ಅತ್ಯವಶ್ಯ: ಪ್ರೊ.ಪಾಟೀಲ

ಧಾರವಾಡ, ಜೂ 16- ವಾಯುಮಾಲಿನ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮತ್ತು ಅಶುಧ್ಧ ವಾಯವು ಎಲ್ಲಾ ಜೀವಿಗಳ ಆರೋಗ್ಯದ ಸಮಸ್ಯೆಗಳನ್ನು ತೀವ್ರಗೊಳಿಸಲು ಕಾರಣವಾಗುತ್ತದೆ ಎಂದು ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಎಂ ಆರ್ ಪಾಟೀಲ ಹೇಳಿದರು. ಅವರು ದಿ ಇನ್‍ಸ್ಟಿಟ್ಯೂಶನ್ ಆಫ್ ಇಂಜನೀಯರ್ಸ ಸ್ಥಾನಿಕ ಕೇಂದ್ರ ಧಾರವಾಡ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮಾನವರು ದಿನಕ್ಕೆ ಸುಮಾರು 16ಕೆಜಿ  ವಾಯುವನ್ನು ಸೇವಿಸುತ್ತಾರೆ ಇದು ನೀರು ಮತ್ತು ಆಹಾರದ ಪ್ರಮಾಣಕ್ಕಿಂತ ಬಹಳ ಅಧಿಕವಾಗಿರುತ್ತದೆ.  ಆಹಾರ ಮತ್ತು ನೀರು ಇಲ್ಲದೆ ಕೆಲವು ದಿನಗಳವರೆಗೆ ಬದುಕಲು ಸಾಧ್ಯವಿದೆ ಆದರೆ ಗಾಳಿಯಿಲ್ಲದೆ/ವಾಯುವಿಲ್ಲದೆ ಕೆಲವು ನಿಮಿಷಗಳವರೆಗೆ ಬದುಕಲು ಸಾಧ್ಯವಿಲ್ಲ. ವಾಯು  ಸೇವನೆ ಇಷ್ಟೊಂದು ಮುಖ್ಯವಾಗಿರುವಾಗ ಅದರ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಮಾಡುವುದು ನಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಲ್ಲದೆ ವಾಯುಮಾಲಿನ್ಯದ ಮೂಲಕಾರಣಗಳು ಮತ್ತು ಸರಕಾರಗಳು, ವೃತ್ತಿಪರ ಎಂಜನೀಯರಗಳು ಮತ್ತು ರಾಷ್ಟ್ರದ ನಾಗರಿಕರು ಕೈಗೊಳ್ಳಬೇಕಾದ ಕ್ರಮಗಳನ್ನು ಅವರು ವಿವರಿಸಿದರು.
ವಾಯುಮಾಲಿನ್ಯದ ಗುಣಮಟ್ಟವನ್ನು ನಿಯಂತ್ರಿಸಲು ವಾಯುಮಾಲಿನ್ಯ ಗುಣಮಟ್ಟದ ಸೂಚಿಯನ್ನು ಸಾಧಿಸುವ ಅಗತ್ಯವನ್ನು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಸಿ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಡಾ.ರಮೇಶ ಚಕ್ರಸಾಲಿ ಅವರು ರಾಸಾಯನಿಕ, ಜೈವಿಕ ಮತ್ತು ಭೌತಿಕ ವಿದ್ಯಮಾನಗಳಿಂದ ಉಂಟಾಗುವ ಕಲ್ಮಶಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ.  ಕೈಗಾರಿಕಾ ಹೊರಸೂಸುವಿಕೆಯಿಂದ, ಪ್ರಾದೇಶಿಕವಾಗಿ ಆಮ್ಲ ಮಳೆ ಮತ್ತು ದ್ಯುತಿರಾಸಾಯುನಿಕ ಕ್ರಿಯೆಗಳಿಂದ ಮತ್ತು ಜಾಗತಿಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ವಾಯುಮಾಲಿನ್ಯ ಸಂಭವಿಸಬಹುದು.  ಪಳೆಯುಳಿಕೆ ಇಂಧನಗಳ ದಹನ, ಕೈಗಾರಿಕಾ ತ್ಯಾಜ್ಯ, ವಿಸರ್ಜನೆ, ಅಶುಧ್ದವಾದ ನೀರಿನ ಸಂಪನ್ಮೂಲಗಳು, ಕೀಟನಾಶಕಗಳ ಬಳಕೆ, ಕೀಟನಾಶಕಗಳ ರಸಗೊಬ್ಬರಗಳು, ತ್ಯಾಜ್ಯ ಉತ್ಪ್ಪಾದನೆ, ಭೂ ಭರ್ತಿ ಇತ್ಯಾದಿಗಳಿಂದಾಗಿ ಮಾಯುಮಾಲಿನ್ಯ  ಉಂಟಾಗುತ್ತದೆ. ವಾಯುಮಾಲಿನ್ಯವನ್ನು ಬದಲಾದ ಸನ್ನಿವೇಶದಲ್ಲಿ ನಿಯಂತ್ರಿಸಲು ಅವಕಾಶಗಳಿದ್ದು ಅದನ್ನು ಉಪಯೋಗಿಸುವುದಕ್ಕೆ ಈಗ ಸೂಕ್ತ ಸಮಯ ಎಂದು ಹೇಳಿದರು.   ನವೀಕರಿಸಬಹುದಾದ ಇಂಧನ ಮೂಲಗಳು, ಶಕ್ತಿ ದಕ್ಟತೆಯ ವ್ಯವಸ್ಥೆಗಳು, ಪರಸರ ಸ್ನೇಹಿ ಸಾಗಾಣಿಕೆ,  ತ್ಯಾಜ್ಯ ಉತ್ಟಾದನೆಯನ್ನು ಕಡಿಮೆ ಮಾಡುವುದರ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದರು.
ಪ್ರೊ.ವಸಂತ ದೇಸಾಯಿ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಹೇಳಿದರು. ಪ್ರೊ. ಎಂ.ಕೆ.ಮರಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎಸ್ ಎಸ್ ಕೆರೂರ ಸ್ವಾಗತ ಮತ್ತು ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Comment