ಉತ್ತಮ ಆಡಳಿತಕ್ಕೆ ಮಾನಸಿಕ ಒತ್ತಡ ನಿರ್ವಹಣೆ ಅವಶ್ಯ ಡಾ. ಚೆಟ್ಟಿ

ಧಾರವಾಡ ಮೇ.29-ಉತ್ತಮ ಆಡಳಿತ ಮತ್ತು ಜನಸೇವೆಗೆ ಮಾನಸಿಕ ಒತ್ತಡ ನಿರ್ವಹಣೆ ಹಾಗೂ ಆರೊಗ್ಯಕರ ವಾತಾವರಣ ಅತ್ಯವಶ್ಯಕವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಪತಿ, ಡಾ. ಮಹಾದೇವ ಬಿ ಚೆಟ್ಟಿ ಅವರು ಕೃಷಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಸಿಬ್ಬಂದಿಗಳಿಗೆ ಆಯೋಜಿಸಿದ ಕೋವಿಡ್-19 ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ನಾವೆಲ್ಲರು ಸಹಕರಿಸಿ ಪ್ರಕೃತಿಯನ್ನು ಪೋಷಿಸುವ ಅವಶ್ಯಕತೆ ಇದೆ. ಈಗಿನ ಸಂದರ್ಭದಲ್ಲಿ ವಾತಾವರಣದ ಅತಿಯಾದ ದುರ್ಬಳಕೆ ಒಂದು ಪ್ರಮುಖ ಕಾರಣವೆಂದು ತಿಳಿಸುತ್ತಾ ಕೋವಿಡ್-19 ಲಾಕಡೌನ್ ವೇಳೆಯಲ್ಲಿ ಕೃಷಿ ವಿಶ್ವವಿದ್ಯಾಲಯ ರೈತರಿಗೆ ಅಗ್ರಿವಾರ್‍ರೂಮ್ ಮುಖಾಂತರ ನಿರಂತರವಾಗಿ ಸೇವೆ ಒದಗಿಸುತ್ತಿದೆ ಹಾಗೂ ಕೋವಿಡ್-19 ಬಗ್ಗೆ ಅರಿವನ್ನು ಮೂಡಿಸಿದೆ. ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೊವಿಡ್-19 ಪರಿಸ್ಥಿತಿಯಿಂದ ಉದ್ಭವವಾದ, ಮಾನಸಿಕ ಒತ್ತಡ ಮತ್ತುಆತಂಕವಾಗಿವುದು ಸಹಜ ಆದರೆ ಇದನ್ನು ಅರ್ಥಹಿಸಿಕೊಂಡು, ಒಪ್ಪಿಕೊಂಡು ನಿರ್ವಹಣೆ ಮಾಡುವುದುಅವಶ್ಯಕ ಎಂದು ಡಿಮಾನ್ಸ್, ಧಾರವಾಡ ಸಹ ಪ್ರಾಧ್ಯಾಪಕರಾದ ಡಾ. ಸುನಂದಾ  ಜಿ. ಟಿ ಅವರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕೋವಿಡ್-19 ಬಗ್ಗೆ ಅರಿತುಅದರ ವಿರುದ್ದ ಹೊರಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು. ಅವರು ಮಾತನಾಡುತ್ತಾ, ಈ ರೋಗವು ಸಾಮಾನ್ಯವಾಗಿ ಕೆಮ್ಮಿದಾಗ ಹಾಗೂ ಶಿನಿದಾಗ ಸಿಡಿಯುವ ದ್ರವದಿಂದ ಹರಡುತ್ತದೆ ಆದರೆ ಇತ್ತಿಚಿಗೆ ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಲ್ಲಿ ಕೋವಿಡ್-19 ದೃಡವಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೃತಿಗೆಡದೆ ಮಾನಸಿಕ ಸಮತೋಲನ, ನೈರ್ಮಲ್ಯ ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಿವುದರಿಂದ ಕೋವಿಡ್-19 ಮಹಾಮಾರಿಯನ್ನು ಸುಲಭವಾಗಿ ನಿರ್ವಹಿಸಬಹುದು.
ಡಿಮಾನ್ಸನ ಇನ್ನೊಬ್ಬ ಸಿಬ್ಬಂದಿ ಡಾ.ಆರ್ ಶ್ರೀವಾಣಿ, ಈಗಿರುವ ಪರಿಸ್ಥಿತಿಯಲ್ಲಿ ಪ್ರತಿಯೋಬ್ಬರು ತಮ್ಮನ್ನು ತಾವು ಆರೊಗ್ಯಕರ ಹಾಗೂ ರಚನಾತ್ಮಕ ರೀತಿಯಲ್ಲಿ ಬಿಂಬಿಸಿಕೋಳ್ಳಬೇಕು. ಒಂದು ವೇಳೆ ಶಂಕಿತರು ನಮ್ಮ ಸುತ್ತಮುತ್ತ ಕಂಡುಬಂದರೆ ಆ ಪರಿಸ್ಥಿತಿಯನ್ನು ಹೇಗೆ ಸಕಾರಾತ್ಮಕ ಮನೋಭಾವನೆಯಿಂದ ಎದುರಿಸಬೇಕು ಎಂದು ಅರಿವು ಮೂಡಿಸಿದರು. ಯೋಗ, ದ್ಯಾನ, ಸಮತೊಲನ ಆಹಾರ ಹಾಗೂ ರಚನಾತ್ಮಕ ಹವ್ಯಾಸಗಳನ್ನು ರೂಡಿಸಿಕೊಳ್ಳುವುದರಿಂದ ಕೋವಿಡ್-19 ಮಾನಸಿಕ ಖಿನ್ನತೆಯಿಂದ ಹೊರಬರಬಹುದು. ಈ ಕಾರ್ಯಕ್ರಮ ಕೃಷಿ ವಿಶ್ವವಿದ್ಯಾಲಯ ಧಾರವಾಡ ಶಿಕ್ಷಕೇತರ ಸಿಬ್ಬಂದಿಗಳಿಗೆ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮ ನಿರ್ವಹಣೆಡಾ ಕೆ ವಿ ಆಶಾಲತಾ ಮಾಡಿದರು. ಕಾರ್ಯಕ್ರಮದಲ್ಲಿ NAHEP-IDP  ಯೋಜನೆಯ ಮುಖ್ಯ ಸಂಯೋಜಕರಾದ ಡಾ.ಕೃಷ್ಣರಾಜ, ಆಡಳಿತಾಧಿಕಾರಿ  ಮಿರಜಕರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a Comment