ಉಡುಪಿ ಶ್ರೀ ಕೃಷ್ಣ ಮಠದ ಬಾಗಿಲು ತೆರೆದ 15 ದಿನಗಳವರೆಗೆ ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ

ಉಡುಪಿ, ಮೇ 28  ದೇವಸ್ಥಾನ ಮತ್ತು ಇತರ ಪ್ರಾರ್ಥನಾ ಸ್ಥಳಗಳಲ್ಲಿ ಜೂನ್ 1 ರಿಂದ ಸಾರ್ವಜನಿಕರಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶ ನೀಡಲು ರಾಜ್ಯಸರ್ಕಾರ ಉದ್ದೇಶಿಸಿದ್ದರೂ ಸಹ 15 ದಿನಗಳವರೆಗೆ ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಮುಂದಿನ 10-15 ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ. ನಂತರ ಭಕ್ತರಿಗೆ ಮಠಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ವಿಶ್ವಪ್ರಿಯಾ ತೀರ್ಥ ಶ್ರೀಪಾದ ಮತ್ತು ಇಶಾಪ್ರಿಯ ತೀರ್ಥ ಅವರು ಗುರುವಾರ ಇಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊವಿಡ್-19ರ ಹಿನ್ನೆಲೆಯಲ್ಲಿ ಎಲ್ಲಾ ಧಾರ್ಮಿಕ ಉತ್ಸವಗಳನ್ನು ಮುಂದೂಡಲಾಗಿದೆ. ಕೊರೊನವೈರಸ್ ಹರಡುವಿಕೆ ತಡೆಯಲು ಭಕ್ತರು ಮನೆಗಳಲ್ಲೇ ಪ್ರಾರ್ಥನೆ ಮಾಡುವಂತೆ ಸೂಚಿಸಲಾಗಿದೆ ಎಂದು ಇಶಾಪ್ರಿಯಾ ತೀರ್ಥ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

Share

Leave a Comment