ಉಡುಪಿ ನಗರಸಭೆ ಅಧೀಕ್ಷಕರಿಗೆ ಬಿಜೆಪಿ ಮುಖಂಡನಿಂದ ಹಲ್ಲೆ

ಉಡುಪಿ, ಜು.೧೭- ನಗರಸಭೆಯ ಆರೋಗ್ಯ ಅಧೀಕ್ಷಕರಿಗೆ ನಗರಸಭಾ ಸದಸ್ಯರೊಬ್ಬರು ಹಲ್ಲೆ ನಡೆಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆರೋಗ್ಯ ಅಧೀಕ್ಷಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸನ್ನ ಕುಮಾರ್ ಹಲ್ಲೆಗೊಳಗಾದ ಉಡುಪಿ ನಗರಸಭಾ ಅಧೀಕ್ಷಕ. ಇವರಿಗೆ ಮಲ್ಪೆ ವಡಬಾಂಡೇಶ್ವರ ವಾರ್ಡ್ ಬಿಜೆಪಿ ಸದಸ್ಯ ಯೋಗೀಶ್ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಯೋಗೀಶ್ ಇಂದು ಆರೋಗ್ಯ ಅಧೀಕ್ಷಕರ ಕಚೇರಿಗೆ ಆಗಮಿಸಿ ವಾರ್ಡ್‌ನ ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿ ಏಕವಚನದಲ್ಲಿ ನಿಂದಿಸಿ ಕಣ್ಣಿನ ಭಾಗ ಹಲ್ಲೆ ನಡೆಸಿರುವುದಾಗಿ ಪ್ರಸನ್ನ ಕುಮಾರ್ ದೂರಿದ್ದಾರೆ. ಈ ಸಂಬಂಧ ಪ್ರಸನ್ನ ಕುಮಾರ್ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment