ಉಡುಪಿಯಲ್ಲಿ ಅತ್ಯಧಿಕ 17 ಸೆಂ.ಮೀ. ಮಳೆ

ಬೆಂಗಳೂರು, ಜೂನ್‍ 13 – ರಾಜ್ಯದ ಕರಾವಳಿಯ ಬಹುತೇಕ ಕಡೆ, ಒಳನಾಡಿನ ಕೆಲ ಕಡೆ ಮಳೆಯಾಗಿದೆ.
ಉಡುಪಿ 17, ಕೋಟಾ 13, ಮುಲ್ಕಿ, ಕೊಲ್ಲೂರು, ಗೇರುಸೊಪ್ಪ, ಮಾಣಿ 12, ಮಂಗಳೂರು 11, ಕಾರ್ಕಳ 10, ಕದ್ರಾ, ಮಂಗಳೂರು ವಿಮಾನ ನಿಲ್ದಾಣ,ಶಿರಾಳಿ,ಕುಮಟಾ 8, ಮೂಡಬಿದಿರೆ, ಹೊನ್ನಾವರ, ಮಂಚಿಕರೆ 7, ಪಣಂಬೂರು, ಭಟ್ಕಳ, ಸಿದ್ದಾಪುರ, ಹೊಸನಗರ 6, ಮಾಣಿ, ಕುಂದಾಪುರ, ಕಾರವಾರ, ಕ್ಯಾಸಲ್ ರಾಕ್, ಭಾಗಮಂಡಲ, ಶೃಂಗೇರಿ 5, ಬೆಳ್ತಂಗಡಿ, ಧರ್ಮಸ್ಥಳ, ವಿರಾಜಪೇಟೆ, ಕಳಸಾ, ಜಯಪುರ 4, ಪುತ್ತೂರು, ಗೋಕರ್ಣ, ಅಂಕೋಲ, ತಾಳಗುಪ್ಪ, ತ್ಯಾಗರ್ಥಿ,ಮೂಡಿಗೆರೆ, ಕಮ್ಮರಡಿ, ಕೊಪ್ಪ 3, ಬಂಟ್ವಾಳ, ಕಿರವಟ್ಟಿ, ಲೋಂಡಾ, ಮಡಿಕೇರಿ,ಅನವಟ್ಟಿ, ಬಾಳೆಹೊನ್ನೂರಿನಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ.
ಶುಕ್ರವಾರ ಬೆಳಿಗಿನವರೆಗೆ ಮುನ್ಸೂಚನೆಯಂತೆ, ಕರಾವಳಿಯ ಬಹುತೇಕ ಕಡೆ,ಒಳನಾಡಿನ ಕೆಲ ಕಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.
ಮೀನುಗಾರಿಕೆ ಎಚ್ಚರಿಕೆ: ರಾಜ್ಯದ ಕರಾವಳಿಯಲ್ಲಿ ನೈರುತ್ಯ ದಿಕ್ಕಿನಿಂದ 35-45 ಕಿ.ಮೀ.ನಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ರಾಜ್ಯ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ 13-06-2019ರ ಮಧ್ಯಾಹ್ನ 14:30ರಿಂದ 14-06-2019ರ ರಾತ್ರಿ 11:30 ರವರೆಗೆ ಸಮುದ್ರದಲ್ಲಿ 3.5ರಿಂದ 4.1 ಮೀಟರ್ ಎತ್ತರದ ಅಲೆಗಳು ಬೀಸುವುದರಿಂದ ತಗ್ಗು ಪ್ರದೇಶಗಳಲ್ಲಿ ಉಬ್ಬರವಾಗುವ ಸಂಭವವಿದೆ.
ಬೆಂಗಳೂರು ಹಾಗೂ ಸುತ್ತಮುತ್ತ, ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಕೆಲವು ಪ್ರದೇಶಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ 29, ಕನಿಷ್ಠ 22 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲು ಸಂಭವವಿದೆ.

Leave a Comment