ಉಚ್ಚಂಗಿದುರ್ಗ ಸರ್ಕಾರಿ ಆಸ್ಪತ್ರೆಗೆ ಟಿಎಚ್‍ಒ ಭೇಟಿ

ಹರಪನಹಳ್ಳಿ.ಮೇ.15; ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರು ಆರೋಗ್ಯ ಪರೀಕ್ಷೆಗಾಗಿ ಪರದಾಟ ನಡೆಸಿದ ವರದಿ ಪ್ರಕಟವಾದ ಹಿನ್ನಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಧಾನಮಂತ್ರಿ ಮಾತೃಶ್ರೀ ಯೋಜನೆಯಡಿ ಪ್ರತಿ ತಿಂಗಳು ಗರ್ಭಿಣಿಯರಿಗೆ ಆರೋಗ್ಯ ಪರೀಕ್ಷೆಗಳು ನಡೆಯುತ್ತಿದ್ದು, ಈ ಪರೀಕ್ಷೆಗೆ ಬರುವ ಗರ್ಭಿಣಿಯರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ನೆಲದ ಮೇಲೆಯೇ ಗರ್ಭಿಯರು ಮಲಗಿ ಪರೀಕ್ಷೆಗಾಗಿ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂದಿತ್ತು. ಹೀಗಾಗಿ ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ ಅವರು ಕೇಂದ್ರದ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಅಶಾ ಕಾರ್ಯಕರ್ತೆಯರೊಂದಿಗೆ ಗರ್ಭಿಣಿಯರಿಗೆ ಆಗುತ್ತಿರುವ ಅನಾನುಕೂಲ ಕುರಿತು ಸಭೆ ನಡೆಸಿದರು.
ಗರ್ಭಿಣಿಯರು ಆರೋಗ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಾಗ ಎದುರಾಗುವ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಶ್ರೀಘ್ರದಲ್ಲಿಯೇ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ ತಿಳಿಸಿದ್ದಾರೆ.
ಪೋಟೋ: 14-ಎಚ್‍ಆರ್‍ಪಿ-3: ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಆಸ್ಪತ್ರೆಯಲ್ಲಿ ಟಿಎಚ್‍ಓ ರೇಣುಕಾನಂದ ಮೆಣಸಿನಕಾಯಿ ಸಭೆ ನಡೆಸಿದರು.

Leave a Comment