ಉಚಿತ ಸೈಕಲ್ ವಿತರಣೆ

ಕೊಳ್ಳೇಗಾಲ. ಆ.13- ಪಟ್ಟಣದ ಸಂತ ಪ್ರಾನಿಸ್ಸ್ ಅಸಿಸ್ಸಿ ಫ್ರೌಢಶಾಲೆಯಲ್ಲಿ 8ನೇ ತರಗತಿಯ ಸುಮಾರು 103 ವಿದ್ಯಾರ್ಥಿಗಳಿಗೆ ಶನಿವಾರ ನಗರಸಭೆ ಸದಸ್ಯ ಅಕ್ಮಲ್ ಅವರಿಂದ ಉಚಿತವಾಗಿ ಸೈಕಲ್ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಅವರು, ಸರ್ಕಾರ ವಿದ್ಯಾರ್ಥಿಗಳು ಶಿಕ್ಷಣವಂತರಾಗಬೇಕು ಎಂಬ ಹಿನ್ನಲೆಯಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಉನ್ನತ ಶಿಕ್ಷಣದ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಮಕ್ಕಳು ಶಾಲಾ ಮಟ್ಟದಲ್ಲೇ ಶಿಸ್ತು, ಶ್ರದ್ಧೆ, ಸಮಯ ಪ್ರಜ್ಞೆ ಹಾಗೂ ಹಿರಿಯರಿಗೆ ಗೌರವ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಅಸ್ಸಿಸಿ ಚರ್ಚ್‍ನ ಫಾದರ್ ಜೇವಿಯರ್, ಶಾಲೆಯ ಮುಖ್ಯಶಿಕ್ಷಕ ಚಿನ್ನಪ್ಪ, ಶಿಕ್ಷಕರಾದ ಸುಬ್ರಮಣ್ಯ ಅಲ್‍ಬಟ್, ಚಂದ್ರು, ದೇವರಾಜು ಇನ್ನಿತರರು ಹಾಜರಿದ್ದರು.

Leave a Comment