ಉಚಿತ ಬಸ್‍ಪಾಸ್‍ಗೆ ಆಗ್ರಹ: 19 ರಂದು ಪ್ರತಿಭಟನೆ

( ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜೂನ್ 13:ವಿದ್ಯಾರ್ಥಿಗಳ ಉಚಿತ ಬಸ್‍ಪಾಸ್‍ಗಾಗಿ  ಆಗ್ರಹಿಸಿ ಎಐಡಿಎಸ್‍ಓ,ಎಐಡಿವೈಓ,ಮತ್ತು ಎಐಎಂಎಸ್‍ಎಸ್ ಸಂಘಟನೆಗಳು ಜೂನ್ 19 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿವೆ.ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಸಭೆ ನಾಳೆ ನಡೆಯಲಿದ್ದು,ಉಚಿತ ಬಸ್‍ಪಾಸ್ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಸಂಘಟನೆ ಪ್ರಮುಖರಾದ ಮಲ್ಲಿನಾಥ ಸಿಂಗೆ, ಹಣಮಂತ ಎಚ್ ಎಸ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಉಚಿತ ಬಸ್‍ಪಾಸ್ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುದಾಗಿ ಸಂಘಟನೆಯ ರಾಜ್ಯಾಧ್ಯಕ್ಷರಿಗೆ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಇದುವರೆಗೆ ಉಚಿತ ಬಸ್‍ಪಾಸ್ ನೀಡಿಲ್ಲ. ಸರಕಾರ ಕೂಡಲೇ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಆದೇಶ ಹೊರಡಿಸಬೇಕು.ಆದೇಶ ನೀಡುವವರೆಗೆ ಹಿಂದಿನ ವರ್ಷದ ಪಾಸ್ ಉಪಯೋಗಿಸುವಂತೆ ನಿರ್ದೇಶನ ನೀಡಬೇಕು .ಈಗಾಗಲೇ ಬಸ್ ಪಾಸ್ ಶುಲ್ಕ ಭರಿಸಿರುವ ವಿದ್ಯಾರ್ಥಿಗಳ ಶುಲ್ಕ ವಾಪಸು ನೀಡಬೇಕು. ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 12 ತಿಂಗಳು ಬಸ್ ಪಾಸ್ ನೀಡುವಂತೆ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಅಜಯ ಜಾಧವ್, ವಿಶಾಲಾಕ್ಷಿ ಪಾಟೀಲ ಸೇರಿದಂತೆ ಇತರರಿದ್ದರು.

Leave a Comment